ETV Bharat / state

ಬೆಂಗಳೂರು: ಮದ್ಯಪಾನಕ್ಕೆ ಹಣ ನೀಡದ ಮಗನಿಗೆ ಗುಂಡಿಕ್ಕಿ ಕೊಂದ ತಂದೆ - Shot dead

ಮಗನನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಗನಿಗೆ ಗುಂಡಿಕ್ಕಿ ಕೊಂದ ತಂದೆ
ಮಗನಿಗೆ ಗುಂಡಿಕ್ಕಿ ಕೊಂದ ತಂದೆ
author img

By ETV Bharat Karnataka Team

Published : Jan 26, 2024, 2:17 PM IST

ಬೆಂಗಳೂರು: ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎಂದು ತಂದೆಯೇ ಮಗನನ್ನು ಗುಂಡು ಹಾರಿಸಿ ಕೊಲೆಗೈದ ಘಟನೆ ಗುರುವಾರ ಸಂಜೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕರೇಕಲ್​ 2ನೇ ಕ್ರಾಸ್​ನಲ್ಲಿ ನಡೆದಿದೆ. ನರ್ತನ್ ಬೋಪಣ್ಣ (32) ಎಂಬಾತನನ್ನು ಆತನ ತಂದೆ ಸುರೇಶ್ ಕೊಲೆ ಮಾಡಿದ್ದಾರೆ.

ಕೊಡಗು ಮೂಲದವರಾದ ನರ್ತನ್‌ ಬೋಪಣ್ಣ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಕರೇಕಲ್‌ನಲ್ಲಿ ಪೋಷಕರೊಂದಿಗೆ ವಾಸವಿದ್ದರು. ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೆ, ತಂದೆ ಸುರೇಶ್‌ ಮದ್ಯಪಾನದ ಗೀಳಿಗೆ ದಾಸರಾಗಿದ್ದರು. ಸದಾ ಕುಡಿಯಲು ಹಣ ಬೇಕು ಎಂದು ಮಗನನ್ನು ಪೀಡಿಸುತ್ತಿದ್ದ ಸುರೇಶ್, ಗುರುವಾರ ಸಂಜೆಯೂ ಕುಡಿತಕ್ಕೆ ಹಣ ಬೇಕೆಂದು ಪೀಡಿಸುತ್ತಾ ಹೊಡೆಯಲು ಮುಂದಾಗಿದ್ದರು.

ಇದೆಲ್ಲದರಿಂದ ಬೇಸತ್ತ ನರ್ತನ್ ತಂದೆಯನ್ನು ಒಂದು ಕೋಣೆಯೊಳಗೆ ತಳ್ಳಿ ಬಾಗಿಲು ಹಾಕಿದ್ದಾರೆ. ಆದರೂ ಸಹ ಕೋಣೆಯೊಳಗಿನಿಂದಲೇ ಸುರೇಶ್ ಬೆದರಿಕೆಯೊಡ್ಡಿದ್ದಾರೆ. ಸ್ವಲ್ಪ ಹೊತ್ತು ಕಳೆದ ಬಳಿಕ ಸಿಟ್ಟಿಗೆದ್ದ ಸುರೇಶ್ ತಮ್ಮ ಬಳಿ ಇದ್ದ ಲೈಸೆನ್ಸ್‌ ಹೊಂದಿದ ಸಿಂಗಲ್ ಬ್ಯಾರಲ್ ಗನ್‌ನಿಂದ ಬಾಗಿಲಿನತ್ತ ಗುಂಡು ಹಾರಿಸಿದ್ದಾರೆ. ಗನ್‌ನಿಂದ ಹಾರಿಸಿದ ಗುಂಡು ಬಾಗಿಲು ಸೀಳಿ ಹೊರಗೆ ಕುಳಿತಿದ್ದ ನರ್ತನ್ ಬೋಪಣ್ಣ ಅವರ ತೊಡೆಯ ಮೇಲ್ಭಾಗಕ್ಕೆ ತಗುಲಿದೆ. ತೀವ್ರವಾಗಿ ಗಾಯಗೊಂಡಿದ್ದ ನರ್ತನ್‌, ತಕ್ಷಣ ತನ್ನ ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸಹೋದರಿ ಸಂಬಂಧಿಕರೊಬ್ಬರನ್ನು ಮನೆ ಬಳಿ ಹೋಗುವಂತೆ ಹೇಳಿದ್ದರು. ಆದರೆ, ಸಂಬಂಧಿಕರು ಬಂದು ನಿತ್ರಾಣಗೊಂಡಿದ್ದ ನರ್ತನ್ ನನ್ನು ಬಸವೇಶ್ವರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನರ್ತನ್ ಸಾವನ್ನಪ್ಪಿದ್ದಾರೆ.

ಪೊಲೀಸರು ತೆರಳುವಷ್ಟರಲ್ಲಿ ಆರೋಪಿ ಸುರೇಶ್ ಮನೆಯಲ್ಲಿ ಚೆಲ್ಲಿದ್ದ ರಕ್ತವನ್ನು ತೊಳೆದು ಸಾಕ್ಷ್ಯನಾಶ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೇಲುಕೋಟೆ ಶಿಕ್ಷಕಿ ಹತ್ಯೆ ಪ್ರಕರಣ: ಬರ್ತ್‌ಡೇ ನೆಪದಲ್ಲಿ ಕರೆಸಿ ಕೊಲೆಗೈದ ಆರೋಪಿ ಅರೆಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.