ETV Bharat / state

ನ್ಯಾಯಮೂರ್ತಿಗಳನ್ನು ಯಾವುದೇ ವರ್ಗದಲ್ಲಿ ಗುರುತಿಸುವುದು ಸರಿಯಲ್ಲ: ನಿವೃತ್ತ ನ್ಯಾ.ಪ್ರಭಾಕರ ಶಾಸ್ತ್ರಿ - Justice Prabhakar Shastri - JUSTICE PRABHAKAR SHASTRI

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಿವೃತ್ತ ನ್ಯಾಯಮೂರ್ತಿ ಡಾ. ಪ್ರಭಾಕರ್ ಶಾಸ್ತ್ರಿ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

farewell-ceremony
ನ್ಯಾಯಮೂರ್ತಿಗಳನ್ನು ಯಾವುದೇ ವರ್ಗದಲ್ಲಿ ಗುರುತಿಸುವುದು ಸರಿಯಲ್ಲ: ನಿವೃತ್ತ ನ್ಯಾ.ಪ್ರಭಾಕರ ಶಾಸ್ತ್ರಿ
author img

By ETV Bharat Karnataka Team

Published : Apr 4, 2024, 9:02 AM IST

ಬೆಂಗಳೂರು: ಪರಿಹಾರ ಒದಗಿಸುವ ಅಥವಾ ಉದಾರವಾದಿ ನ್ಯಾಯಮೂರ್ತಿ ಎಂಬುದಾಗಿ ವರ್ಗಗಳಲ್ಲಿ ಗುರುತಿಸುವುಕ್ಕೆ ನನ್ನ ಸಹಮತ ಇಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಡಾ. ಪ್ರಭಾಕರ್ ಶಾಸ್ತ್ರಿ ಹೇಳಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕೋರ್ಟ್ ಹಾಲ್ 1 ರಲ್ಲಿ ಬುಧವಾರ ತಮಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

''ನ್ಯಾಯಮೂರ್ತಿಗಳನ್ನು ಪರಿಹಾರ ನೀಡುವ ನ್ಯಾಯಮೂರ್ತಿ ಅಥವಾ ಪ್ರಗತಿಪರ ನ್ಯಾಯಮೂರ್ತಿ ಇತ್ಯಾದಿ ಎಂದು ಬ್ರ್ಯಾಂಡ್ ಮಾಡಿ ಗುರುತಿಸುವುದನ್ನು ನಾನು ಗುರುತಿಸಿದ್ದೇನೆ. ನನ್ನ ಪ್ರಕಾರ ನ್ಯಾಯಮೂರ್ತಿಯು ಎಲ್ಲಾ ವಿಧದಲ್ಲೂ ನ್ಯಾಯಮೂರ್ತಿ ಆಗಿರಬೇಕು. ಯಾವುದೇ ಪ್ರಭಾವಕ್ಕೆ ಅವರು ಒಳಗಾಗಬಾರದು. ಅವರ ಮುಂದಿರುವ ಪ್ರಕರಣ ಕಠಿಣವಾಗಿ ನಡೆದುಕೊಳ್ಳಬೇಕು ಎಂದು ಬಯಸಿದರೆ ಹಾಗೆಯೇ ಮಾಡಬೇಕಾಗುತ್ತದೆ. ಅಗತ್ಯ ಇರುವ ಪ್ರಕರಣಗಳಲ್ಲಿ ನ್ಯಾಯಮೂರ್ತಿಯು ಸಹಾನುಭೂತಿಯಿಂದ ಮತ್ತು ಮೃದುವಾಗಿರಬೇಕು'' ಎಂದು ನ್ಯಾ. ಡಾ. ಪ್ರಭಾಕರ್ ಶಾಸ್ತ್ರಿ ಹೇಳಿದರು.

''ಪ್ರಕರಣದ ಅರ್ಹತೆಯಿಂದ ವಿಮುಖರಾಗಬಾರದು. ತನಗೆ ದೊರೆತಿರುವ ವಿಶೇಷ ಅಧಿಕಾರವನ್ನು ದುರ್ಬಳಕೆ ಮಾಡಬಾರದು. ಎಲ್ಲಾ ಪ್ರಕರಣದಲ್ಲೂ ಪ್ರಗತಿಪರ ಮನೋಭಾವದಿಂದ ನೋಡುವುದು ಅಥವಾ ಅನಗತ್ಯವಾದ ಪ್ರಕರಣದಲ್ಲಿ ವಿಶೇಷ ಅಧಿಕಾರ ಬಳಕೆ ಮಾಡುವುದು ಒಳ್ಳೆಯ ನ್ಯಾಯಮೂರ್ತಿಯ ಲಕ್ಷಣವಲ್ಲ. ಇದರಿಂದ ಜನಪ್ರಿಯ ನ್ಯಾಯಮೂರ್ತಿ ಆಗಬಹುದು. ಆದರೆ, ಉತ್ತಮ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ಎನಿಸಿಕೊಳ್ಳಲಾರರು'' ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಸೇರಿದಂತೆ ವಿವಿಧ ನ್ಯಾಯಮೂರ್ತಿಗಳು ಭಾಗಿಯಾಗಿದ್ದರು. ಇದಾದ ಬಳಿಕ ಬೆಂಗಳೂರು ವಕೀಲರ ಸಂಘದಿಂದ ನ್ಯಾಯಮೂರ್ತಿಗಳಿಗೆ ಬೀಳ್ಕೊಡುಗೆ ನೀಡಲಾಯಿತು.

ಇದನ್ನೂ ಓದಿ: ಖಾಸಗಿ ಶಾಲೆಗಳಲ್ಲೂ ಅನಂತಸ್ವಾಮಿ ಸಂಯೋಜಿಸಿರುವ ನಾಡಗೀತೆ ಹಾಡಬೇಕು: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.