ETV Bharat / state

ಬೃಹತ್ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಗೃಹ ಸಚಿವ ಪರಮೇಶ್ವರ್: ಬೆಳ್ಳಿ ಕಿರೀಟ, ಬೆಳ್ಳಿ ಕತ್ತಿ ಗಿಫ್ಟ್‌ - G Parameshwar Birthday - G PARAMESHWAR BIRTHDAY

ತುಮಕೂರಿನ ಹೆಗ್ಗೆರೆ ಗ್ರಾಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು.

Minister G parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹುಟ್ಟುಹಬ್ಬ (ETV Bharat)
author img

By ETV Bharat Karnataka Team

Published : Aug 6, 2024, 9:54 PM IST

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹುಟ್ಟುಹಬ್ಬ (ETV BHARAT)

ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಂದು 73ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಸಚಿವರಿಗೆ ಕೊಬ್ಬರಿ ಹಾರ ಹಾಕಿ, ಬೆಳ್ಳಿ ಕಿರೀಟ ತೊಡಿಸಿ, ಬೆಳ್ಳಿ ಖಡ್ಗ ಕೊಟ್ಟು ಶುಭ ಕೋರಿದ್ದಾರೆ. ಹೆಗ್ಗೆರೆ ಗ್ರಾಮದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಿತು.

ಸಚಿವ ಪರಮೇಶ್ವರ್ ಬೃಹತ್ ಕೇಕ್ ಕತ್ತರಿಸಿದರು. ಸಚಿವರ ನಿವಾಸದೆದುರು ಹೆಚ್ಚಿವನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ತಂದೆ ದಿವಂಗತ ಗಂಗಾಧರಯ್ಯ ಪುತ್ಥಳಿಗೆ ಪರಮೇಶ್ವರ್ ಮಾಲಾರ್ಪಣೆ ಮಾಡಿದರು.

ಪರಮೇಶ್ವರ್ ಒಡೆತನದ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿಯೂ ಅದ್ಧೂರಿ ಹುಟ್ಟುಹಬ್ಬ ಆಚರಣೆ ನಡೆಯಿತು. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಕೇಕ್ ಕತ್ತರಿಸುವ ಶುಭ ಕೋರಿದರು. ಸಚಿವರ ನಿವಾಸದ ಸುತ್ತ ಶುಭಾಶಯ ಕೋರುವ ಫ್ಲೆಕ್ಸ್, ಬ್ಯಾನರ್​ಗಳು ರಾರಾಜಿಸುತ್ತಿದ್ದವು.

ಇದನ್ನೂ ಓದಿ: ಸಿದ್ದರಾಮಯ್ಯ 5ವರ್ಷ ಸಿಎಂ ಆಗಬಾರದು ಅಂತ ಏನಾದ್ರು ಇದೆಯಾ? ಬದಲಾವಣೆ ಊಹೆ ಅಷ್ಟೇ: ಡಾ. ಜಿ ಪರಮೇಶ್ವರ್ - CM change issue

ETV Bharat Logo

Copyright © 2025 Ushodaya Enterprises Pvt. Ltd., All Rights Reserved.