ETV Bharat / state

ರಾಜ್ಯ ಬಜೆಟ್ 2024: ಬೆಂಗಳೂರು ನಗರಕ್ಕಿವೆ ಬೆಟ್ಟದಷ್ಟು ನಿರೀಕ್ಷೆಗಳು - Bengaluru traffic problem

ರಾಜ್ಯ ರಾಜಧಾನಿ ಬೆಂಗಳೂರು ನಗರವನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ 2024ರ ಬಜೆಟ್​ನಲ್ಲಿ ಪರಿಹಾರ ಸಿಗುವ ನಿರೀಕ್ಷೆಯಲ್ಲಿ ಜನರಿದ್ದಾರೆ.

ಬೆಂಗಳೂರು ನಗರ
ಬೆಂಗಳೂರು ನಗರ
author img

By ETV Bharat Karnataka Team

Published : Feb 13, 2024, 11:30 AM IST

Updated : Feb 13, 2024, 11:37 AM IST

ಬೆಂಗಳೂರು : ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ನಗರವನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯನ್ನು ಜನಸಾಮಾನ್ಯರು ಹೊಂದಿದ್ದಾರೆ. ಟ್ರಾಫಿಕ್, ನೀರು ಪೂರೈಕೆ, ಒಳಚರಂಡಿ, ರಸ್ತೆ ಅಭಿವೃದ್ದಿ, ಮೂಲ ಸೌಕರ್ಯ ಸೇರಿದಂತೆ ಹಲವು ಸವಾಲುಗಳಿಗೆ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಹೇಗೆ ಸ್ಪಂದಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಬಜೆಟ್ ಕುರಿತು ಮಾತನಾಡಿರುವ ಹಲವು ನಾಗರಿಕ ಸಂಘಟನೆಗಳು ಮತ್ತು ವೇದಿಕೆಗಳು ನಗರದ ಸಂಪರ್ಕ ವ್ಯವಸ್ಥೆಯಲ್ಲಿನ ಸುಧಾರಣೆ ಕುರಿತು ಕಾಳಜಿ ವಹಿಸುವ ಬಗ್ಗೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿವೆ. ಮುಖ್ಯವಾಗಿ ಸಬ್ ಅರ್ಬನ್ ರೈಲು ವ್ಯವಸ್ಥೆ ಉತ್ತಮಗೊಳಿಸುವುದು ಒಂದೇ ಮಾರ್ಗವಾಗಿದೆ ಎನ್ನುವ ನಿಲುವು ತಾಳಿವೆ. ನಗರ ಸಾರಿಗೆ ಬಸ್ ವ್ಯವಸ್ಥೆ ಮತ್ತು ನಮ್ಮ ಮೆಟ್ರೋ ಕೇವಲ 5 ರಿಂದ 10 ರಷ್ಟು ಸಂಚಾರ ಸಮಸ್ಯೆಯನ್ನು ಮಾತ್ರ ಬಗೆಹರಿಸಲು ಶಕ್ತವಾಗಿದೆ ಎನ್ನುವುದು ಸಾಂಘಿಕ ಅಭಿಪ್ರಾಯವಾಗಿದೆ.

ನಮ್ಮ ನಗರದ ಸುತ್ತಮುತ್ತ ಉತ್ತಮ ರೈಲು ಹಳಿಗಳ ವ್ಯವಸ್ಥೆಯಿದ್ದು, ಅವನ್ನು ಸುಧಾರಿಸಲು ಹಣವನ್ನು ಬಜೆಟ್​ನಲ್ಲಿ ಮೀಸಲಿಟ್ಟರೆ ನಗರದ ಸಂಚಾರ ದಟ್ಟಣೆ ಸಮಸ್ಯೆಯನ್ನು ಶೇಕಡಾ 20 ರಿಂದ 30 ರಷ್ಟು ಕಡಿಮೆ ಮಾಡಬಹುದು. ಮತ್ತು ಅನಿಯಂತ್ರಿತವಾಗಿ ಬೆಳೆಯುತ್ತಿರುವ ನಗರವನ್ನು ನಿಯಂತ್ರಿಸಿ ನಿರ್ವಹಿಸಲು ಸ್ವತಂತ್ರವಾದ ಪ್ರಾಧಿಕಾರವನ್ನು ರಚಿಸಬೇಕು. ಬಿಬಿಎಂಪಿ, ಬಿಡಿಎ, ಬೆಸ್ಕಾಂ ಹೀಗೆ ಹಲವು ಸರ್ಕಾರಿ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವ ಅಗತ್ಯತೆ ಮನಗಂಡು ಈ ಬಾರಿಯ ಬಜೆಟ್ ಮಂಡಿಸಬೇಕು ಎಂದು ಕೋರಿಕೆ ಮುಂದಿಟ್ಟಿವೆ.

ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿರುವ ಸಿಟಿಜನ್ಸ್ ಅಜೆಂಡಾ ಫಾರ್ ಬೆಂಗಳೂರು ಸಂಚಾಲಕ ಸಂದೀಪ್ ಅನಿರುದ್ಧನ್, ಕಳೆದ ಸಾಲಿನ ಬಜೆಟ್​​​ನಲ್ಲಿ ಬೆಂಗಳೂರು ಮಹಾನಗರಕ್ಕೆ ಸಾಕಷ್ಟು ಹಣ ಮೀಸಲಿರಿಸಲಿತ್ತು. ಆದರೆ, ಅದರ ಸಮರ್ಪಕ, ವೈಜ್ಞಾನಿಕ ಬಳಕೆ ಆಗಿಲ್ಲ. ನಗರಕ್ಕೆ ತೀರಾ ಅಗತ್ಯ ಇರುವ ಮೆಟ್ರೋಪಾಲಿಟನ್ ಪ್ಲಾನಿಂಗ್ ಅಥಾರಿಟಿ ಈವರೆಗೆ ಅಸ್ಥಿತ್ವಕ್ಕೆ ಬಂದಿಲ್ಲ. ಈ ಕುರಿತು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್​ಗಳು ಕೂಡ ಸಾಕಷ್ಟು ಬಾರಿ ಸರ್ಕಾರವನ್ನು ಎಚ್ಚರಿಸಿವೆ. ಅದು ಈ ಬಜೆಟ್ ಅಧಿವೇಶನದಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ಆಗ್ರಹಿಸಿದ್ದಾರೆ.

ನಗರ ವೈಜ್ಞಾನಿಕವಾಗಿ ಬೆಳೆಯುತ್ತಿಲ್ಲ. ಸಂಚಾರ ಸಮಸ್ಯೆಯಂತೂ ಮಿತಿ ಮೀರಿದೆ. ಸಬ್ ಅರ್ಬನ್ ರೈಲು ಸಂಚಾರ ಸಮಸ್ಯೆಗೆ ಇರುವ ದೊಡ್ಡ ಪರಿಹಾರವಾಗಿದೆ. ಇದು ಕಡಿಮೆ ವೆಚ್ಚದ್ದಾಗಿದೆ. ನಮ್ಮ ಮೆಟ್ರೋ ರೈಲು ಸುಮಾರು ಇದಕ್ಕಿಂತ 4 ಪಟ್ಟು ಹೆಚ್ಚಿನ ವೆಚ್ಚದ್ದಾಗಿದೆ. 1992ರ 74 ರ ತಿದ್ದುಪಡಿಯಲ್ಲಿ ಪ್ಲಾನಿಂಗ್ ಅಥಾರಿಟಿ ಈ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದನ್ನು ಈ ಬಜೆಟ್ ನಲ್ಲಾದರೂ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಅರ್ಬನ್ ಲೋಕಲ್ ಬಾಡಿಗಳನ್ನು ಒಂದೇ ಸೂರಿನಡಿ ತರಲು ಸರ್ಕಾರ ಈ ಬಾರಿ ತಿದ್ದುಪಡಿ ತರಬೇಕು. ವಾರ್ಡ್ ಕಮಿಟಿಗಳನ್ನು ರಚಿಸಿ ನಗರದ ಉತ್ತಮ ಬೆಳವಣಿಗೆಗೆ ನಾಂದಿ ಹಾಡಬೇಕಿದೆ. ಅನಧಿಕೃತ ಕಟ್ಟಡ ಮತ್ತು ನಿವೇಶನಗಳನ್ನು ನಿಯಂತ್ರಿಸಲು ತಜ್ಞರ ಕಾರ್ಯಪಡೆ ರಚಿಸಲು ಸಹ ಹಣವನ್ನು ಈ ಬಜೆಟ್ ನಲ್ಲಿ ಮೀಸಲಿರಿಸಬೇಕು ಎಂದು ಸಂದೀಪ್ ಅನಿರುದ್ಧನ್ ತಿಳಿಸಿದ್ದಾರೆ.

ಇದನ್ನೂ ಓದಿ : ಕಳೆದ ಬಜೆಟ್​ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಿಕ್ಕ ಅತ್ಯಲ್ಪ ಘೋಷಣೆಯಲ್ಲಿ ಈಡೇರಿದ್ದೆಷ್ಟು?

Last Updated : Feb 13, 2024, 11:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.