ETV Bharat / state

ಪಾನಮತ್ತನಾಗಿ ಬಂದು ಗಲಾಟೆ ಮಾಡುತ್ತಿದ್ದ ಮಾಜಿ ಸಹೋದ್ಯೋಗಿ ಹತ್ಯೆ: ಇಬ್ಬರು ಸೆರೆ - Bengaluru Murder Case - BENGALURU MURDER CASE

ಮದ್ಯ ಸೇವಿಸಿ ಅಂಗಡಿ ಮುಂದೆ ಬಂದು ಗಲಾಟೆ ಮಾಡುತ್ತಿದ್ದವನನ್ನು ಮಾಜಿ ಸಹೋದ್ಯೋಗಿಗಳೇ ಕೊಲೆಗೈದ ಘಟನೆ ಬೆಂಗಳೂರಿನ ಮೈಕೋ ಲೇಔಟ್​ನಲ್ಲಿ ನಡೆದಿದೆ.

CO WORKERS KILLED A YOUNG MAN
ಹತ್ಯೆಯಾದ ಸುಜಿತ್ (ETV Bharat)
author img

By ETV Bharat Karnataka Team

Published : Oct 4, 2024, 6:16 PM IST

ಬೆಂಗಳೂರು: ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದ ಯುವಕನನ್ನು ಆತನ ಮಾಜಿ ಸಹೋದ್ಯೋಗಿಗಳೇ ಹತ್ಯೆಗೈದಿರುವ ಘಟನೆ ತಡರಾತ್ರಿ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರದ ಸುಜಿತ್ (34) ಹತ್ಯೆಯಾದ ಯುವಕ. ಕೊಲೆ ಆರೋಪಿಗಳಾದ ಸಂಜಯ್ (28) ಹಾಗೂ ಅಮನ್ ಕುಮಾರ್ (22) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಸುಜಿತ್, ಸಂಜಯ್ ಹಾಗೂ ಅಮನ್ ಕುಮಾರ್ ಮೈಕೋ ಲೇಔಟ್‌ನಲ್ಲಿರುವ ಫ್ಲೈವುಡ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪಾನಮತ್ತನಾಗಿರುತ್ತಿದ್ದ ಸುಜಿತ್‌ನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆದರೆ ಸುಜಿತ್ ಆಗಾಗ ಮದ್ಯ ಸೇವಿಸಿ ಅಂಗಡಿ ಮುಂದೆ ಬಂದು ಗಲಾಟೆ ಮಾಡುತ್ತಿದ್ದ. ಅದೇ ರೀತಿ ಗುರುವಾರ ರಾತ್ರಿ ಬಂದು ಗಲಾಟೆ ಮಾಡುತ್ತಿದ್ದಾಗ ಸಿಟ್ಟಿಗೆದ್ದ ಆರೋಪಿಗಳು ಮರದ ತುಂಡುಗಳಿಂದ ಹೊಡೆದು, ಕತ್ತು ಹಿಸುಕಿ ಹತ್ಯೆಗೈದಿದ್ದಾರೆ.

ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದ್ದು, ಮೃತನ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಪೀಣ್ಯದಲ್ಲಿ ಮತ್ತೆ ಮೂವರು ಪಾಕ್‌ ಪ್ರಜೆಗಳ ಬಂಧನ - Pakistani Citizens Arrested

ETV Bharat Logo

Copyright © 2025 Ushodaya Enterprises Pvt. Ltd., All Rights Reserved.