ETV Bharat / state

ವಾರದ ಭವಿಷ್ಯ: ಈ ರಾಶಿಯವರಿಗೆ ವೈವಾಹಿಕ, ಆರ್ಥಿಕ ಫಲ - weekly horoscope - WEEKLY HOROSCOPE

ಆಗಸ್ಟ್ 25 ರಿಂದ ಸೆಪ್ಟೆಂಬರ್ 1 ವರೆಗಿನ ವಾರದ ರಾಶಿ ಭವಿಷ್ಯ ಹೀಗಿದೆ.

ವಾರದ ಭವಿಷ್ಯ
ವಾರದ ಭವಿಷ್ಯ (ETV Bharat)
author img

By ETV Bharat Karnataka Team

Published : Aug 25, 2024, 5:30 AM IST

Updated : Aug 25, 2024, 12:16 PM IST

ಮೇಷ: ನಿಮ್ಮ ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಈ ಅವಧಿಯಲ್ಲಿ ನಿಮಗೆ ವಹಿಸಲಾದ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಲಿದ್ದೀರಿ. ನಿಮ್ಮ ವ್ಯವಹಾರದಲ್ಲಿ ಹಿರಿಯರು ಮತ್ತು ಕಿರಿಯರ ಬೆಂಬಲವನ್ನು ನೀವು ಪಡೆಯಲಿದ್ದೀರಿ. ತಿಂಗಳ ಕೊನೆಯಲ್ಲಿ ಹಣವನ್ನು ಸಾಲ ಪಡೆಯುವುದು ಅನಿವಾರ್ಯವೆನಿಸುವ ಕಾರಣ ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿರಿ. ವಾರದ ದ್ವಿತೀಯಾರ್ಧದಲ್ಲಿ ಸಾಲ ಮತ್ತು ರೋಗದಿಂದ ದೂರವಿರಲು ಯತ್ನಿಸಿ. ನಿಮ್ಮ ಕುಟುಂಬದ ಸದಸ್ಯರ ಜೊತೆ ಸಂತಸದ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ಸಿಗಬಹುದು. ಮೇಷ ರಾಶಿಯಲ್ಲಿ ಹುಟ್ಟಿದ ಜನರು ಈ ವಾರದಲ್ಲಿ ಹಣವನ್ನು ಪಡೆಯಲಿದ್ದಾರೆ, ಆದರೆ ಅವರು ವಿಪರೀತವಾಗಿ ಹಣ ಖರ್ಚು ಮಾಡಲಿದ್ದಾರೆ. ಆದಾಯಕ್ಕಿಂತ ಖರ್ಚು ಹೆಚ್ಚಾದರೆ ಬಜೆಟಿಗೆ ಪೆಟ್ಟು ಬೀಳಬಹುದು. ಈ ಅವಧಿಯಲ್ಲಿ ಋತುಮಾನಕ್ಕೆ ಸಂಬಂಧಿಸಿದ ಸೋಂಕಿನಿಂದ ದೂರವಿರಿ. ಪ್ರೇಮ ಸಂಬಂಧವು ಎಂದಿನಂತೆ ಸಾಗಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ.

ವೃಷಭ: ಈ ರಾಶಿಯವರಿಗೆ ಈ ವಾರವು ಪ್ರಗತಿದಾಯಕ ಎನಿಸಲಿದೆ. ಮಾರುಕಟ್ಟೆಯಲ್ಲಿ ಬಾಕಿ ಉಳಿದಿರುವ ವ್ಯಾಪಾರೋದ್ಯಮಿಗಳ ಹಣವು ಹಠಾತ್‌ ಆಗಿ ವಾಪಸ್‌ ಸಿಗಲಿದೆ. ಈ ಹಿಂದಿನ ಹೂಡಿಕೆಗಳಿಂದ ನಿಮಗೆ ಲಾಭ ದೊರೆಯಲಿದೆ. ಪ್ರಭಾವಿ ವ್ಯಕ್ತಿಯೊಬ್ಬರ ಸಹಾಯದಿಂದ ಅಧಿಕಾರ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ನೀವು ಈಡೇರಿಸಲಿದ್ದೀರಿ. ಆದರೆ ಈ ಕ್ಷಣದಲ್ಲಿ ನಿಮ್ಮ ವ್ಯವಹಾರ ಅಥವಾ ಯಾವುದೇ ಯೋಜನೆಯನ್ನು ಹಣವನ್ನು ಹೂಡಿಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಿ. ಅಂತಹ ಹೆಜ್ಜೆಯನ್ನು ಇಡುವ ಮೊದಲು ಹಿತೈಷಿ ಅಥವಾ ತಜ್ಞರ ಸಲಹೆಯನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಅವಿವಾಹಿತರಿಗೆ ಮದುವೆಯ ಭಾಗ್ಯ ಲಭಿಸಬಹುದು. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಕಾಣಿಸಿಕೊಳ್ಳಬಹುದು. ಪ್ರೇಮ ಸಂಬಂಧದಿಂದ ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ದೂರದ ಅಥವಾ ಹತ್ತಿರದ ಊರಿಗೆ ಪ್ರಯಾಣಿಸುವ ಸಾಧ್ಯತೆ ಇದೆ. ವಾರದ ದ್ವಿತೀಯಾರ್ಧದಲ್ಲಿ, ವಿದೇಶದಲ್ಲಿ ಕೆಲಸ ಮಾಡಲು ಅಥವಾ ವ್ಯವಹಾರವನ್ನು ನಡೆಸಲು ಎದುರಾಗುವ ಅಡ್ಡಿ ಆತಂಕಗಳು ನಿವಾರಣೆಗೊಳ್ಳಲಿವೆ. ಈ ಅವಧಿಯಲ್ಲಿ ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ಲಭಿಸಲಿದೆ. ಸಮಾಜದಲ್ಲಿ ಗೌರವ ಹೆಚ್ಚಲಿದೆ.

ಮಿಥುನ: ಈ ರಾಶಿಯವರು ಈ ವಾರದಲ್ಲಿ ಚಟುವಟಿಕೆಗಳಿಂದ ಕೂಡಿರಲಿದ್ದಾರೆ. ವಾರದ ಅರಂಭದಿಂದಲೇ ನೀವು ಕೆಲಸದ ಜವಾಬ್ದಾರಿಗಳಲ್ಲಿ ಮುಳುಗಿ ಹೋಗಲಿದ್ದೀರಿ. ಇದರಿಂದಾಗಿ ಒಂದಷ್ಟು ಮಾನಸಿಕ ಚಿಂತೆಗಳು ನಿಮ್ಮನ್ನು ಕಾಡಬಹುದು. ಇಂತಹ ಸಂದರ್ಭದಲ್ಲಿ ಯಾವುದೇ ಕೆಲಸವನ್ನು ಮಾಡುವಾಗಲೂ ತಾಳ್ಮೆ ವಹಿಸಿ. ನಿಮ್ಮ ಗುರಿಯಿಂದ ನಿಮ್ಮನ್ನು ವಿಚಲಿತಗೊಳಿಸಲು ಯತ್ನಿಸುವ ನಿಮ್ಮ ಸಹೋದ್ಯೋಗಿಗಳ ಮಾತನ್ನು ನಿರ್ಲಕ್ಷಿಸಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ವಾರದ ದ್ವಿತೀಯಾರ್ಧವು, ಪ್ರಥಮಾರ್ಧಕ್ಕಿಂತಲೂ ಹೆಚ್ಚು ಅದೃಷ್ಟಶಾಲಿ ಮತ್ತು ಲಾಭದಾಯಕ ಎನಿಸಲಿದೆ. ನಿಮ್ಮ ಪ್ರಣಯ ಸಂಬಂಧವು ಗಟ್ಟಿಗೊಳ್ಳಲಿದೆ. ಅಲ್ಲದೆ ನಿಮ್ಮ ಪ್ರೇಮಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಈ ಸಂದರ್ಭದಲ್ಲಿ ನೀವು ವ್ಯವಹಾರದಲ್ಲಿ ಅಗತ್ಯ ಲಾಭವನ್ನು ಗಳಿಸಲಿದ್ದೀರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯಾಣವು ಮಂಗಳದಾಯಕ ಎನಿಸಲಿದೆ. ಸ್ವಲ್ಪ ನಿಧಾನವಾದರೂ ಆರ್ಥಿಕ ಬೆಳವಣಿಗೆ ಉಂಟಾಗಲಿದೆ. ಆರೋಗ್ಯವು ಎಂದಿನಂತೆ ಇರಲಿದೆ.

ಕರ್ಕಾಟಕ: ಈ ರಾಶಿಯಲ್ಲಿ ಹುಟ್ಟಿದ ಜನರು ತಮ್ಮ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದಂತೆ ವಾರದ ಆರಂಭದಲ್ಲಿ ಸವಾಲುಗಳನ್ನು ಎದುರಿಸಬಹುದು. ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ವ್ಯಾಜ್ಯವು ಚಿಂತೆಗೆ ಕಾರಣವೆನಿಸಬಹುದು. ಕೋಪದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಉದ್ಯೋಗಕ್ಕಾಗಿ ಎದುರು ನೋಡುತ್ತಿರುವವರು ಇನ್ನಷ್ಟು ಕಾಯಬೇಕಾದೀತು. ಆದರೆ ಉದ್ಯೋಗದಲ್ಲಿರುವವರಿಗೆ ಈ ಅವಧಿಯು ಒಂದಷ್ಟು ನಿರಾಳತೆಯನ್ನು ತಂದು ಕೊಡಲಿದೆ. ಅರೋಗ್ಯದಾಯಕ ಪ್ರೇಮ ಸಂಬಂಧವನ್ನು ಮುಂದುವರಿಸಬೇಕಾದರೆ ನಿಮ್ಮ ಪ್ರೇಮಿಯ ಭಾವನೆಗಳು ಮತ್ತು ಒತ್ತಾಯಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಕುರಿತು ನಿಮಗೆ ಚಿಂತೆ ಉಂಟಾಗಬಹುದು. ಕೆಲಸದಲ್ಲಿ ಕಾಡುತ್ತಿರುವ ಅಡ್ಡಿ ಆತಂಕಗಳು ಕಡಿಮೆಗೊಳ್ಳಲಿವೆ. ಹಿರಿಯರ ಸಂಪೂರ್ಣ ನೆರವು ನಿಮಗೆ ಲಭಿಸಲಿದೆ. ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಆರೋಗ್ಯಕ್ಕೆ ಗಮನ ನೀಡಿ. ಈ ಅವಧಿಯಲ್ಲಿ ಋತುಮಾನಕ್ಕೆ ಸಂಬಂಧಿಸಿದ ಅಥವಾ ದೀರ್ಘಕಾಲೀನ ಕಾಯಿಲೆಗಳು ನಿಮ್ಮನ್ನು ಚಿಂತೆಗೀಡು ಮಾಡಬಹುದು.

ಸಿಂಹ: ಈ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ದೊಡ್ಡ ಕಾಮಗಾರಿಯೊಂದರಲ್ಲಿ ಸೇರುವುದಕ್ಕಾಗಿ ದೀರ್ಘ ಕಾಲದಿಂದ ಕಾಯುತ್ತಿದ್ದ ಜನರು ಇಚ್ಛೆಯು ಈ ವಾರದಲ್ಲಿ ಈಡೇರಲಿದೆ. ಪ್ರಭಾವಿ ವ್ಯಕ್ತಿಯೊಬ್ಬರ ಸಹಾಯದಿಂದ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸವು ಪೂರ್ಣಗೊಳ್ಳಲಿದ್ದು ನಿಮಗೆ ನಿರಾಳತೆ ದೊರೆಯಲಿದೆ. ಕೆಲಸದ ಸ್ಥಳದಲ್ಲಿ ಪ್ರಯತ್ನಗಳನ್ನು ಗುರುತಿಸಲಾಗುತ್ತದೆ. ಹಿರಿಯರು ನಿಮಗೆ ಪ್ರಮುಖ ಜವಾಬ್ದಾರಿಯನ್ನು ವಹಿಸಲಿದ್ದಾರೆ. ಪ್ರೇಮ ಸಂಬಂಧವು ಇನ್ನಷ್ಟು ಗಟ್ಟಿಯಾಗಿ ಬೆಳೆಯಲಿದೆ. ನಿಮ್ಮ ಪ್ರಣಯ ಸಂಬಂಧದಲ್ಲಿ ಪ್ರೀತಿ ಮತ್ತು ಸಾಮರಸ್ಯ ನೆಲೆಸಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆ ಅನುರಾಗದ ಕ್ಷಣಗಳನ್ನು ಕಳೆಯಲಿದ್ದೀರಿ. ಆರ್ಥಿಕ ಕ್ಷೇತ್ರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸುಧಾರಣೆ ಉಂಟಾಗಲಿದೆ. ಭೌತಿಕ ಅನುಕೂಲತೆಗಳು ಮತ್ತು ಸಂಪನ್ಮೂಲಗಳು ವೃದ್ಧಿಸಲಿವೆ. ನೀವು ದೀರ್ಘ ಕಾಲದಿಂದ ಕಾರನ್ನು ಖರೀದಿಸಲು ಯೋಜಸಿದ್ದರೆ, ಈ ವಾರದಲ್ಲಿ ನಿಮ್ಮ ಕನಸು ನನಸಾಗಲಿದೆ. ಈ ವಾರದ ಉತ್ತರಾರ್ಧದಲ್ಲಿ ಪವಿತ್ರ ತಾಣಕ್ಕೆ ಭೇಟಿ ನೀಡುವ ಅವಕಾಶ ಲಭಿಸಬಹುದು.

ಕನ್ಯಾ: ಈ ರಾಶಿಯಲ್ಲಿ ಹುಟ್ಟಿದ ಜನರು ಈ ವಾರದ ಆರಂಭದಲ್ಲಿ ತಮ್ಮ ಬದುಕಿನಲ್ಲಿ ಅನುಕೂಲಕರ ಬದಲಾವಣೆಗಳನ್ನು ಅನುಭವಿಸಲಿದ್ದಾರೆ. ನಿಮ್ಮ ಆದ್ಯತೆಯ ಸ್ಥಳಕ್ಕೆ ವರ್ಗಾವಣೆಗೊಳ್ಳುವ ನಿಮ್ಮ ದೀರ್ಘಕಾಲೀನ ಗುರಿಯು ಈಡೇರಲಿದೆ. ಉದ್ಯೋಗದಲ್ಲಿರುವವರಿಗೆ ಅನಿರೀಕ್ಷಿತವಾಗಿ ಪ್ರಮುಖ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಆದಾಯದ ಹೆಚ್ಚುವರಿ ಮೂಲಗಳು ದೊರೆಯಬಹುದು. ನಿಮ್ಮ ಒಟ್ಟು ಸಂಪತ್ತಿನಲ್ಲಿ ವೃದ್ಧಿಯಾಗಲಿದೆ. ವಿದೇಶದಲ್ಲಿ ದುಡಿಯುತ್ತಿರುವವರಿಗೆ ಅಗತ್ಯ ಲಾಭ ದೊರೆಯಲಿದೆ. ಉದ್ಯೋಗಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಅವಕಾಶ ಲಭಿಸಲಿದೆ. ಪ್ರೇಮ ಸಂಬಂಧವು ಎಂದಿನಂತೆ ಸಾಗಲಿದೆ. ಬದುಕಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸಲಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ನಿಮ್ಮ ಆರೋಗ್ಯವು ಎಂದಿನಂತೆ ಇರಲಿದೆ. ಆದರೆ ನಿಮ್ಮ ಆಹಾರ ಕ್ರಮಕ್ಕೆ ಸರಿಯಾದ ಗಮನ ನೀಡಿರಿ ಹಾಗೂ ದಿನಚರಿಯನ್ನು ಕಾಪಾಡಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಬೇಕಾದರೆ ಕಠಿಣ ಶ್ರಮ ಪಡಬೇಕು.

ತುಲಾ: ವೈದ್ಯಕೀಯ ಕಾರಣದಿಂದಾಗಿ ವಾರದ ಆರಂಭದಲ್ಲಿ ನಿಮ್ಮ ಕೆಲಸದಲ್ಲಿ ಅಡಚಣೆ ಕಾಣಿಸಿಕೊಳ್ಳಬಹುದು. ಈ ಅವಧಿಯಲ್ಲಿ ಋತುಮಾನಕ್ಕೆ ಸಂಬಂಧಿಸಿದ ರೋಗಗಳ ಕುರಿತು ಗಮನ ನೀಡಿರಿ. ಈ ಅವಧಿಯಲ್ಲಿ ನಿಮ್ಮ ಆಹಾರಕ್ರಮದ ಕುರಿತು ಗಮನ ಹರಿಸಿ. ಈ ಹಂತದಲ್ಲಿ ವಿದ್ಯಾರ್ಥಿಗಳ ಗಮನವು ಶಿಕ್ಷಣದಿಂದ ಬೇರೆಡೆಗೆ ವರ್ಗಾವಣೆಯಾಗಬಹುದು. ನಿರೀಕ್ಷಿತ ಗುರಿಯನ್ನು ಸಾಧಿಸಬೇಕಾದರೆ ಕಠಿಣ ಶ್ರಮವನ್ನು ಪಡಲೇಬೇಕು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಸ್ಪರ್ಧಿಗಳಿಂದ ಸವಾಲುಗಳನ್ನು ಎದುರಿಸಬಹುದು. ಮಾರುಕಟ್ಟೆಯಲ್ಲಿ ಕುಸಿತ ಉಂಟಾಗುವ ಕಾರಣ ನೀವು ಸಾಕಷ್ಟು ಸವಾಲುಗಳನ್ನು ಎದುರಿಸಬಹುದು. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಹಿರಿಯರು ಮತ್ತು ಕಿರಿಯರ ಜೊತೆಗಿನ ಸಮನ್ವಯವನ್ನು ಸುಧಾರಿಸಬೇಕು. ಪ್ರೇಮ ಸಂಬಂಧದಲ್ಲಿ ಸಾಮರಸ್ಯ ಕಾಪಾಡಬೇಕಾದರೆ ಅವಸರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಬದಲಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿರಿ. ಕಷ್ಟಕರ ಸಂದರ್ಭಗಳಲ್ಲಿ ನಿಮ್ಮ ಜೀವನ ಸಂಗಾತಿಯು ನಿಮ್ಮ ನೆರವಿಗೆ ಬರಲಿದ್ದಾರೆ.

ವೃಶ್ಚಿಕ: ಈ ರಾಶಿಯವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ವಾರದ ಆರಂಭದಲ್ಲಿ, ನಿರ್ದಿಷ್ಟ ಚಟುವಟಿಕೆಯನ್ನು ಪೂರ್ಣಗೊಳಿಸಲು ನಿಮಗೆ ಆರ್ಥಿಕ ಸಮಸ್ಯೆ ಎದುರಾಗಬಹುದು. ವಾರದ ದ್ವಿತೀಯಾರ್ಧದಲ್ಲಿ ನಿಮಗೆ ಅನಿರೀಕ್ಷಿತವಾಗಿ ಹಣ ದೊರೆತರೆ ನಿಮ್ಮ ಸಮಸ್ಯೆಯು ಕ್ಷಿಪ್ರವಾಗಿ ಬಗೆಹರಿಯಲಿದೆ. ಹಣಕಾಸಿನ ವಿಚಾರದಲ್ಲಿ ಯೋಜಿತ ರೀತಿಯಲ್ಲಿ ಕೆಲಸ ಮಾಡಿದರೆ ಅನುಕೂಲವಾದೀತು. ನಿಮ್ಮ ಸಂಸ್ಥೆಯನ್ನು ವಿಸ್ತರಿಸಲು ನೀವು ಯೋಚಿಸುವುದಾದರೆ ನಿಮ್ಮ ಮಿತಿಯೊಳಗೆ ಅದನ್ನು ಮಾಡಲು ಯತ್ನಿಸಿ. ಒಂದಷ್ಟು ಸಿಹಿಕಹಿ ಭಿನ್ನಾಭಿಪ್ರಾಯಗಳ ನಡುವೆ ನಿಮ್ಮ ಪ್ರಣಯ ಸಂಬಂಧವು ಗಟ್ಟಿಗೊಳ್ಳಲಿದೆ. ಅಲ್ಲದೆ ನಿಮ್ಮ ಪ್ರೇಮಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಅವಕಾಶ ದೊರೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ವಾರದ ನಡುವೆ, ನ್ಯಾಯಾಲಯ ಅಥವಾ ಸರ್ಕಾರಿ ಕೆಲಸಕ್ಕಾಗಿ ನೀವು ಸಾಕಷ್ಟು ಪ್ರಯಾಣಿಸಬೇಕಾದೀತು. ಈ ಅವಧಿಯಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರನ್ನು ಭೇಟಿಯಾಗುವುದರಿಂದ ಭವಿಷ್ಯದಲ್ಲಿ ಲಾಭದಾಯಕ ಯೋಜನೆಯಲ್ಲಿ ಕೈ ಜೋಡಿಸಲು ಸಾಧ್ಯವಾಗಲಿದೆ.

ಧನು: ಈ ರಾಶಿಯವರ ಬದುಕನ್ನು ಕಾಡುತ್ತಿರುವ ಅಡ್ಡಿ ಆತಂಕಗಳು ಈ ವಾರದಲ್ಲಿ ನಿವಾರಣೆಗೊಳ್ಳಲಿವೆ. ವಾರದ ಆರಂಭದಲ್ಲಿ, ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಲು ಗೆಳೆಯರೊಬ್ಬರು ನಿಮಗೆ ನೆರವನ್ನು ಒದಗಿಸಲಿದ್ದಾರೆ. ವಾರದ ಆರಂಭದಲ್ಲಿ, ಮಕ್ಕಳ ಕುರಿತು ದೊರೆಯುವ ಶುಭ ಸುದ್ದಿಯು ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರಲ್ಲಿ ಸಂತಸವನ್ನು ತರಲಿದೆ. ವಾರದ ಉತ್ತರಾರ್ಧದಲ್ಲಿ ವೃತ್ತಿ, ವ್ಯವಹಾರ ಅಥವಾ ವೈಯಕ್ತಿಕ ಕಾರಣಕ್ಕೆ ಸಂಬಂಧಿಸಿದಂತೆ ಹತ್ತಿರದ ಅಥವಾ ದೂರದ ಸ್ಥಳಗಳಿಗೆ ನೀವು ಪ್ರಯಾಣಿಸಬೇಕಾದೀತು. ಈ ಅವಧಿಯಲ್ಲಿ ಮನೆಯ ಅಲಂಕಾರ ಅಥವಾ ದುರಸ್ತಿಗಾಗಿ ಸ್ವಲ್ಪ ಹೆಚ್ಚಿನ ಹಣವನ್ನು ನೀವು ಖರ್ಚು ಮಾಡಬೇಕಾದೀತು. ಇದರಿಂದಾಗಿ ನಿಮ್ಮ ಬಜೆಟ್‌ ನಲ್ಲಿ ವ್ಯತ್ಯಯ ಉಂಟಾಗಬಹುದು. ಆದರೆ ಗೆಳೆಯರು ಮತ್ತು ಹಿತೈಷಿಗಳ ನೆರವಿನ ಮೂಲಕ ನಿಮ್ಮ ಎಲ್ಲಾ ಕೆಲಸವನ್ನು ಸಕಾಲದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗಲಿದೆ. ಧನು ರಾಶಿಯಲ್ಲಿ ಹುಟ್ಟಿದ ಅವಿವಾಹಿತರಿಗೆ ಪ್ರೇಮಿಯು ಲಭಿಸಬಹುದು. ಇದೇ ವೇಳೆ ಪ್ರಸ್ತುತ ಪ್ರಣಯ ಸಂಬಂಧದಕ್ಕೆ ಬಲ ದೊರೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ.

ಮಕರ: ದೀರ್ಘ ಕಾಲದಿಂದ ಕೆಲಸವನ್ನು ಎದುರು ನೋಡುತ್ತಿರುವವರಿಗೆ ವಾರದ ಆರಂಭಿಕ ದಿನಗಳು ಪ್ರಯೋಜನಕಾರಿ ಎನಿಸಲಿವೆ. ಗೆಳೆಯರೊಬ್ಬರ ನೆರವಿನಿಂದ ವೃತ್ತಿ ಅಥವಾ ವಾಣಿಜ್ಯ ಸಮಸ್ಯೆಗಳು ಬಗೆಹರಿಯಲಿವೆ. ಕೆಲಸದ ಸ್ಥಳದ ಸನ್ನಿವೇಶವು ಮೊದಲಿಗಿಂತಲೂ ಚೆನ್ನಾಗಿರಲಿದೆ. ಹಿರಿಯರ ಆಶೀರ್ವಾದ ಮತ್ತು ಕಿರಿಯರ ಬೆಂಬಲವು ನಿಮಗೆ ದೊರೆಯಲಿದೆ. ಯಾವುದೇ ಯೋಜನೆಯಲ್ಲಿ ಈ ಹಿಂದೆ ನೀವು ಮಾಡಿದ ಹೂಡಿಕೆಗೆ ಲಾಭ ದೊರೆಯಲಿದೆ. ಆಸ್ತಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ತೀರ್ಪು ನಿಮ್ಮ ಪರವಾಗಿರಲಿದೆ. ಪ್ರಣಯ ಸಂಬಂಧದಲ್ಲಿ ಪರಸ್ಪರ ಸಂದೇಹ ಪಡುವ ಬದಲಿಗೆ ಸಂವಹನದ ಮೂಲಕ ಸಾಮಾನ್ಯ ವಿವಾದಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಯತ್ನಿಸಿ. ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಸಂಬಂಧವು ಬೆಳೆಯುವ ಕಾರಣ ವೈವಾಹಿಕ ಜೀವನದಲ್ಲಿ ಸಂತಸ ನೆಲೆಸಲಿದೆ. ವಾರದ ಉತ್ತರಾರ್ಧದಲ್ಲಿ ಯಾವುದಾದರೂ ಮಂಗಳಕರ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ಲಭಿಸಲಿದೆ. ಪುಣ್ಯಸ್ಥಳಕ್ಕೆ ಭೇಟಿ ನೀಡುವ ಅವಕಾಶ ಲಭಿಸಬಹುದು.

ಕುಂಭ: ಈ ರಾಶಿಯವರು ಈ ವಾರದಲ್ಲಿ ಆಲಸ್ಯ ಮತ್ತು ಅಹಂನಿಂದ ಹೊರಬರಬೇಕು. ಕೆಲಸವನ್ನು ಮುಂದೂಡಿದರೆ ವಿಪರೀತ ಆರ್ಥಿಕ ನಷ್ಟ ಉಂಟಾಗಬಹುದು. ಹೀಗಾಗಿ ಕೆಲಸವನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಯತ್ನಿಸಿ. ಕಚೇರಿಯಾಗಿರಲಿ ಅಥವಾ ಮನೆಯಾಗಿರಲಿ, ಜನರನ್ನು ಒಗ್ಗೂಡಿಸಲು ಯತ್ನಿಸಿ. ಪ್ರಣಯ ಸಂಬಂಧದಲ್ಲಿ ಸಂಘರ್ಷಕ್ಕೆ ಅವಕಾಶ ನೀಡುವ ಬದಲಿಗೆ ಸಂವಹನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಬೇಕು. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಬೇಕಾದರೆ ನಿಮ್ಮ ಜೀವನ ಸಂಗಾತಿಗಾಗಿ ಸಮಯವನ್ನು ಮೀಸಲಿಡಿ. ವಾರದ ಉತ್ತರಾರ್ಧದಲ್ಲಿ ನಿಮ್ಮ ಆರೋಗ್ಯ ಮತ್ತು ಸಂಬಂಧಕ್ಕೆ ಹೆಚ್ಚಿನ ಗಮನ ನೀಡಿ. ಈ ಅವಧಿಯಲ್ಲಿ ನಿಮ್ಮ ಕುಟುಂಬದ ಹಿರಿಯ ಸದಸ್ಯರ ಸಲಹೆ ಮತ್ತು ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಕುಂಭ ರಾಶಿಯಲ್ಲಿ ಹುಟ್ಟಿದವರಿಗೆ ವಾರದ ಉತ್ತರಾರ್ಧದಲ್ಲಿ ಪ್ರಮುಖ ಜವಾಬ್ದಾರಿಯನ್ನು ನೀಡಲಾಗುತ್ತದೆ. ಇದನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ಮತ್ತು ಪ್ರಯತ್ನದ ಅಗತ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ವಾರದ ಕೊನೆಗೆ ಶುಭ ಸುದ್ದಿಯನ್ನು ಪಡೆಯಲಿದ್ದಾರೆ.

ಮೀನ: ಒಟ್ಟಾರೆಯಾಗಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಮೂಲಕ ಈ ವಾರದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಲಿದ್ದೀರಿ. ಭಡ್ತಿ ದೊರೆಯುವ ಸಾಧ್ಯತೆ ಇದೆ. ಕೆಲಸವನ್ನು ಬದಲಾಯಿಸುವ ಇರಾದೆ ಇದ್ದಲ್ಲಿ, ಈ ವಾರದಲ್ಲಿ ನಿಮಗೆ ಉತ್ತಮ ಕೊಡುಗೆಯೊಂದು ಲಭಿಸಲಿದೆ. ವಾರದ ಉತ್ತರಾರ್ಧದಲ್ಲಿ ಕುಟುಂಬದ ಸದಸ್ಯರೊಂದಿಗೆ ಅದ್ಭುತ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ಲಭಿಸಲಿದೆ. ಪ್ರೇಮ ಸಂಬಂಧದ ವಿಚಾರದಲ್ಲಿ ಈ ವಾರವು ಅದೃಷ್ಟಶಾಲಿ ಎನಿಸಲಿದೆ. ನಿಮ್ಮ ಪ್ರಣಯ ಸಂಗಾತಿಯಿಂದ ಅಚ್ಚರಿಯ ಉಡುಗೊರೆಯೊಂದು ನಿಮಗೆ ದೊರೆಯಲಿದೆ. ಆರೋಗ್ಯವು ಎಂದಿನಂತೆ ಇರಲಿದೆ. ವಾರದ ನಡುವೆ, ಉದ್ಯೋಗದಲ್ಲಿರುವವರಿಗೆ ಆದಾಯದ ಹೊಸ ಮೂಲಗಳು ಲಭಿಸಲಿವೆ. ಆದರೆ ಆದಾಯಕ್ಕಿಂತಲೂ ಹೆಚ್ಚಿನ ವೆಚ್ಚ ಉಂಟಾಗಬಹುದು. ಮೀನ ರಾಶಿಯವರು ಭೂಮಿ ಅಥವಾ ಕಟ್ಟಡವನ್ನು ಅವಸರದಲ್ಲಿ ಖರೀದಿ ಅಥವಾ ಮಾರಾಟ ಮಾಡಬಾರದು. ಇಂತಹ ಖರೀದಿಯನ್ನು ಮಾಡುವಾಗ ಯಾವಾಗಲೂ ನಿಮ್ಮ ಪ್ರೀತಿಪಾತ್ರರ ಸಲಹೆಯನ್ನು ಪಡೆಯಿರಿ.

Last Updated : Aug 25, 2024, 12:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.