ಬಾಗಲಕೋಟೆ: ಬಿಜೆಪಿಯಿಂದ ಬಂಡೆದ್ದು ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಚರಂತಿಮಠ ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಅವರು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರಶ್ನೆ: ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಏನು ಹೇಳುತ್ತೀರಾ?
ಉತ್ತರ: ಹೊಸ ಹುರುಪು ಬಂದಿದೆ, ಫಸ್ಟ್ ಇನ್ನಿಂಗ್ಸ್ ಬಿಜೆಪಿಯಲ್ಲಿ ಆಯಿತು, ಅಲ್ಲಿ ಸರಿಯಾಗಲಿಲ್ಲ. ಈಗ ಸೆಕೆಂಡ್ ಇನ್ನಿಂಗ್ಸ್ಗೆ ತಯಾರಾಗಿದ್ದೇನೆ.
ಪ್ರಶ್ನೆ: ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿದ್ದೀರಿ, ಈಗ ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಹೊಂದಿಕೊಳ್ಳುತ್ತೀರಾ?
ಉತ್ತರ: ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಪ್ರಕಾರ ಕೆಲಸ ಮಾಡುತ್ತೇನೆ.
ಪ್ರಶ್ನೆ: ಕಾಂಗ್ರೆಸ್ ಪರವಾಗಿ ಏನನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೀರಾ?
ಉತ್ತರ: ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತೇನೆ.
ಪ್ರಶ್ನೆ: ಬಿಜೆಪಿ ನಾಯಕರು ಯಾರಾದರೂ ನಿಮಗೆ ಮತ್ತೆ ಪಕ್ಷಕ್ಕೆ ಬನ್ನಿ ಎಂದು ಆಹ್ವಾನಿಸಿದ್ದಾರಾ?
ಉತ್ತರ: ನನಗೆ ಯಾರೂ ಆಹ್ವಾನ ಕೊಟ್ಟಿಲ್ಲ. ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಪಿ. ಸಿ. ಗದ್ದಿಗೌಡರ್ ನನ್ನ ಬಳಿ ಮಾತನಾಡಿಲ್ಲ.
ಪ್ರಶ್ನೆ: ರಾಜಕೀಯದಲ್ಲಿ ನಿಮ್ಮ ಮುಂದಿನ ನಡೆ ಏನು?
ಉತ್ತರ: ಕಾಂಗ್ರೆಸ್ನಲ್ಲಿ ಕಾರ್ಯಕರ್ತನಾಗಿ ದುಡಿಯುತ್ತೇನೆ.
ಪ್ರಶ್ನೆ: ಮುಂದಿನ ಪ್ರಧಾನಿ ಯಾರಾಗುತ್ತಾರೆ?
ಉತ್ತರ: ಮೋದಿಯವರ ಹವಾ ಕರ್ನಾಟಕ ಸೇರಿದಂತೆ ಎಲ್ಲೂ ಕಾಣುತ್ತಿಲ್ಲ. ನಮ್ಮ ಹೈಕಮಾಂಡ್ ಯಾರನ್ನು ತೀರ್ಮಾನ ಮಾಡುತ್ತದೆಯೋ ಅವರು ಪ್ರಧಾನಿಯಾಗುತ್ತಾರೆ.
ಪ್ರಶ್ನೆ: ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ಯೋಗ್ಯರೇ?
ಉತ್ತರ: ರಾಹುಲ್ ಗಾಂಧಿಯವರು ಪ್ರಧಾನಿಯಾಗಲು ಯೋಗ್ಯರಿದ್ದಾರೆ.
ಪ್ರಶ್ನೆ: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸ್ಥಾನಮಾನದ ಪಡೆಯುವ ಅಪೇಕ್ಷೆ ಇದೆಯಾ?
ಉತ್ತರ: ಸದ್ಯ ಹಾಗೆ ಏನು ಇಲ್ಲ, ನಾನು ಕಾಂಗ್ರೆಸ್ ಸೇರ್ಪಡೆಯಾಗಿ ಎರಡು ದಿನ ಆಗಿದೆ. ಸಾಮಾನ್ಯ ಕಾರ್ಯಕರ್ತನಂತೆ ಪಕ್ಷಕ್ಕಾಗಿ ದುಡಿಯುತ್ತೇನೆ.
ಪ್ರಶ್ನೆ: ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಎಷ್ಟು ಮತಗಳ ಅಂತರದಿಂದ ಗೆಲ್ಲಬಹುದು?
ಉತ್ತರ: ನನ್ನ ಅಂದಾಜಿನ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಜನತೆಯ ಬದುಕಿನ ಗ್ಯಾರಂಟಿಯನ್ನು ಕಸಿದುಕೊಂಡಿದೆ: ಅರವಿಂದ ಬೆಲ್ಲದ್ - NEHA MURDER CASE