ದಾವಣಗೆರೆ : ದಾವಣಗೆರೆ ನಗರದ ಎವಿಕೆ ಕಾಲೇಜಿನಲ್ಲಿ ದೇಸಿ ಕಲರವ ಗ್ರಾಮೀಣ ಸೊಗಡು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸದಾ ವಿದ್ಯಾಭ್ಯಾಸದಲ್ಲಿ ನಿರತರಾಗುತ್ತಿದ್ದ ವಿದ್ಯಾರ್ಥಿನಿಯರು ಇಂದು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಸಖತ್ ಎಂಜಾಯ್ ಮಾಡಿದ್ರು.
ದೇಸಿ ಉಡುಪು, ಸಾಂಪ್ರದಾಯಿಕ ಉಡುಪುಗಳು ಆಧುನಿಕ ಕಾಲದಲ್ಲಿ ಮರೆಯಾಗ್ತಿರುವ ಕಾರಣ ಅದನ್ನು ಉಳಿಸಲು ದೇಸಿ ಕಲರವ ಕಾರ್ಯಕ್ರಮವನ್ನು ಕಾಲೇಜು ವತಿಯಿಂದ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿನಿಯರು ಸಖತ್ ಎಂಜಾಯ್ ಮಾಡಿದ್ರು. ಕಾಲೇಜಿನ ವಿದ್ಯಾರ್ಥಿನಿಯರು ತಮಗಿಷ್ಟವಾದ ಸಾಂಪ್ರದಾಯಿಕ ಉಡುಗೆ ಧರಿಸಿ ಡಿಜೆ ಸದ್ದಿಗೆ ಸ್ಟೆಪ್ಸ್ ಹಾಕಿದ್ರು. ಅಲ್ಲದೆ ಕಾಲೇಜಿನ ಸಿಬ್ಬಂದಿ ಕೂಡ ವೇದಿಕೆಯಲ್ಲಿ ರ‍್ಯಾಂಪ್ ವಾಕ್ ಮಾಡುವ ಮೂಲಕ ವಿದ್ಯಾರ್ಥಿನಿಯರನ್ನು ರಂಜಿಸಿದ್ರು.
ಪ್ರತಿವರ್ಷ ಎವಿಕೆ ಕಾಲೇಜಿನಲ್ಲಿ ಎಥ್ನಿಕ್ ಡೇ ಆಚರಣೆ ಮಾಡಲಾಗುತ್ತದೆ. ಈ ಬಾರಿ ನಡೆದ ಕಾರ್ಯಕ್ರಮದಲ್ಲಿ ಮರಾಠಿ, ಲಂಬಾಣಿ, ಪಂಜಾಬಿ, ಕೊಡಗು, ಭಾಗದ ಸಾಂಪ್ರದಾಯಿಕ ಉಡುಗೆ ಧರಿಸಿ ಕಲರ್ ಫುಲ್ ಆಗಿ ವಿದ್ಯಾರ್ಥಿನಿಯರು ಕಾಣಿಸಿಕೊಂಡರು.
"ವಿದ್ಯಾರ್ಥಿಗಳಲ್ಲಿ ಸಾಂಪ್ರದಾಯಿಕತೆ ಮರೆತು ಹೋಗಿದ್ದರಿಂದ ಈ ದೇಸಿ ಕಲರವ ಗ್ರಾಮೀಣ ಸೊಗಡು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಎಲ್ಲರೂ ಮಾಡರ್ನ್ ಯುಗದಲ್ಲಿ ಬ್ಯುಸಿಯಾಗಿದ್ದಾರೆ. ಆದ್ದರಿಂದ ಸಂಪ್ರದಾಯ ಉಳಿಸಿ, ಬೆಳೆಸಲು ವಿದ್ಯಾರ್ಥಿನಿಯರು ಹುಬ್ಬಳ್ಳಿ ಭಾಗದ ಉಡುಗೆ, ಇಳಕಲ್ ಸೀರೆ, ಬಂಜಾರ, ಕೊಡಗಿನ ಉಡುಗೆ ಹೀಗೆ ನಾನಾ ರೀತಿಯ ಸಾಂಪ್ರದಾಯಿಕ ಬಟ್ಟೆಗಳನ್ನು ತೊಟ್ಟು ಸಂತಸದಿಂದ ಕಾರ್ಯಕ್ರಮದಲ್ಲಿ ಭಾಗಿಯಾದ್ರು" ಎಂದು ಬಾಟನಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜೀವಿತ ತಿಳಿಸಿದರು.
ಈ ಬಗ್ಗೆ ವಿದ್ಯಾರ್ಥಿನಿ ಸಹನ ಮಾತನಾಡಿ, ''ಈ ಸಲ ನಾವು ಕಾಲೇಜಿನಲ್ಲಿ ಎಥ್ನಿಕ್ ಡೇ ಆಚರಿಸುತ್ತಿದ್ದೇವೆ. ಈ ಬಾರಿ ನಾವು ಗ್ರಾಮೀಣ ಸೊಗಡು ಅಂತ ಥೀಮ್ ಇಟ್ಟುಕೊಂಡು ನಮ್ಮ ಕಾಲೇಜಿನಲ್ಲಿ ಎಲ್ಲರೂ ಕೂಡಾ ದೇಶದ ಹಲವಾರು ರೀತಿಯ ಸ್ಯಾರಿ ಉಟ್ಟುಕೊಂಡಿದ್ದಾರೆ. ಎಲ್ಲರೂ ಅವರವರ ಸಂಪ್ರದಾಯದಲ್ಲಿ ಹೇಗೆದಿಯೋ ಹಾಗೆ ಸ್ಯಾರಿ ಧರಿಸಿಕೊಂಡು ಬಂದು ಕಲರ್ಫುಲ್ ಆಗಿ ಕಾಣಿಸುತ್ತಿದ್ದಾರೆ'' ಈಟಿವಿ ಭಾರತ ನೊಂದಿಗೆ ಸಂತಸ ಹಂಚಿಕೊಂಡರು.
ಇದನ್ನೂ ಓದಿ : ಬಣ್ಣ ಬಣ್ಣದ ಸೀರೆ ಧರಿಸಿ ಬೆಣ್ಣೆ ನಗರಿ ಹುಡುಗಿಯರ ಮಿಂಚಿಂಗ್: ವಿಡಿಯೋ