ETV Bharat / state

ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ವೆಂಕಟಗಿರಿ ರಾವ್ ನಿಧನ - B Venkatagiri Rao Passed Away

ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ವೆಂಕಟಗಿರಿ ರಾವ್ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

b venkatagiri rao
ಬಿ.ವೆಂಕಟಗಿರಿ ರಾವ್ (ETV Bharat)
author img

By ETV Bharat Karnataka Team

Published : Jun 20, 2024, 6:35 AM IST

ಶಿವಮೊಗ್ಗ: ಅಪ್ರತಿಮ ಪರಿಸರ ಪ್ರೇಮಿ ಬಿ. ವೆಂಕಟಗಿರಿ ರಾವ್ (81) ಅವರು ಬುಧವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ್ದಾರೆ. ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ವೆಂಕಟಗಿರಿ ರಾವ್ ಅವರು ಪರಿಸರ ರಕ್ಷಣೆ, ಅಭಿವೃದ್ಧಿಗೆ ನೀಡಿದ ಕೊಡುಗೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

ವೆಂಕಟಗಿರಿ ರಾವ್ ತಮ್ಮ ಮನೆಯಂಗಳದಲ್ಲೇ ವಿವಿಧ ವೈಜ್ಞಾನಿಕವಾಗಿ ನಕ್ಷತ್ರ ವನ, ನವಗ್ರಹ ವನ ನಿರ್ಮಿಸಿದ್ದರಲ್ಲದೇ, ನೂರಾರು ಜಾತಿಯ ಅಮೂಲ್ಯ ಗಿಡಮೂಲಿಕೆ, ಫಲ-ಪುಷ್ಪ ಗಿಡಗಳನ್ನು ಬೆಳೆಸಿ ಇತರರಿಗೆ ಮಾದರಿಯಾಗಿದ್ದರು. ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ, ಅದರ ಮಹತ್ವಗಳ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತಮ್ಮ ಜೀವಿತದ ಕೊನೆಯವರೆಗೂ ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದರು.

ರಾಜ್ಯ ಅರಣ್ಯ ಇಲಾಖೆಯ ಅಧಿಕೃತ ಪರಿಸರ ಸಲಹೆಗಾರರಾಗಿದ್ದ ವೆಂಕಟಗಿರಿ ರಾವ್ ರಾಜ್ಯದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಉದ್ಯಾನವನ, ಅರಣ್ಯೀಕರಣ, ಹಸಿರೀಕರಣ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದ ನಾಟಿ ವೈದ್ಯರ ಕುರಿತು ಓಷಧಿ ಗಿಡ ಮೂಲಿಕೆಗಳ ಸವಿವರ ಸಹಿತದ ಪುಸ್ತಕವನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಖ್ಯಾತ ವಕೀಲರಾದ ಅಶೋಕ ಜಿ. ಭಟ್​ ಅವರ ನಿಕಟವರ್ತಿಗಳಾಗಿದ್ದ ಇವರು ಅರಣ್ಯ ಕಾನೂನು, ಸಾಮಾಜಿಕ ಅರಣ್ಯಗಳ ಉಪಯೋಗ ಸಾಧಕ - ಬಾಧಕಗಳ ಕುರಿತು ಯಾವಾಗಲೂ ಚರ್ಚಿಸುತ್ತಿದ್ದರು.

ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಗಿಡ ಗಂಟಿಗಳ ಹೆಸರು ಇವರ ನಾಲಿಗೆಯಲ್ಲಿ ನಲಿದಾಡುತ್ತಿತ್ತು. ಶಿವಮೊಗ್ಗದ ಈ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಬಿ. ದಯಾನಂದ ಅವರು ವೆಂಕಟಗಿರಿಯವರ ಮನೆಗೇ ಹೋಗಿ ಸನ್ಮಾನಿಸಿದ್ದೂ ಮೃತರ ಪರಿಸರ ಸೇವೆಗೆ ಸಂದ ಗೌರವವಾಗಿದೆ. ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಶಾಲಾ ಕಾಲೇಜಿನವರು ಅಲ್ಲಿನ ಆವರಣಗಳ ಹಸಿರೀಕರಣಕ್ಕಾಗಿ ವೆಂಕಟಗಿರಿ ಅವರ ಮಾರ್ಗದರ್ಶನ ಪಡೆಯುತ್ತಿದ್ದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ 10 ದಿನ ಮಹಿಳಾ ಸಬಲೀಕರಣಕ್ಕಾಗಿ ಯೋಗ ಕಾರ್ಯಕ್ರಮ - Yoga For Women Empowerment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.