ETV Bharat / state

ಬೆಂಗಳೂರು: ಬೆಟ್ಟಿಂಗ್ ಆಡಲು ಕಂಪನಿಯ ₹7 ಕೋಟಿ ಹಣ ದುರ್ಬಳಕೆ ಮಾಡಿಕೊಂಡ ಉದ್ಯೋಗಿ ಅರೆಸ್ಟ್ - MAN ARRESTED FOR MISUSING MONEY

ಆನ್​ಲೈನ್​ ಬೆಟ್ಟಿಂಗ್ ಆಡಲು​ ಕಂಪನಿಗೆ ಸೇರಿದ್ದ 7 ಕೋಟಿ ರೂ.ಹಣವನ್ನು ದುರ್ಬಳಕೆ ಮಾಡಿಕೊಂಡ ಉದ್ಯೋಗಿಯೊಬ್ಬನನ್ನು ಬೆಂಗಳೂರಿನ ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಉದ್ಯೋಗಿ
ಬಂಧಿತ ಉದ್ಯೋಗಿ (ETV Bharat)
author img

By ETV Bharat Karnataka Team

Published : Jan 29, 2025, 7:35 PM IST

ಬೆಂಗಳೂರು: ಆನ್​ಲೈನ್​ ಬೆಟ್ಟಿಂಗ್ ಆಡಲು​ ಕಂಪನಿಗೆ ಸೇರಿದ್ದ 7 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಒಬ್ಬ ಉದ್ಯೋಗಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲ್ಯಾಂಗ್ ಫೋರ್ಡ್ ರಸ್ತೆಯಲ್ಲಿರುವ ಅರ್ನಸ್ಟ್ ಅಂಡ್ ಯಂಗ್ ಎಲ್ಎಲ್​ಪಿ ಕಂಪನಿಯ ಅಧಿಕಾರಿ ಶೌರಿ ರಾಜನ್ ಎಂಬುವರು ನೀಡಿದ ದೂರಿನ ಆಧಾರ ಮೇಲೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ನಗರದ ಮಾವಳ್ಳಿಯಲ್ಲಿ ವಾಸಿಸುತ್ತಿದ್ದ ಶ್ರೀಕಾಂತ್(23) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅರ್ನಸ್ಟ್ ಅಂಡ್ ಯಂಗ್ ಕಂಪನಿಯು ನಗರದ ವಿವಿಧ ಕಂಪನಿಗಳಿಗೆ ಹಣಕಾಸು ವಹಿವಾಟಿನ ಸೇವೆ ನೀಡುತ್ತಿದೆ. ಕಾಡುಬೀಸನಹಳ್ಳಿಯಲ್ಲಿರುವ ಸ್ವಿಗ್ಗಿ ಫುಡ್​ ಡೆಲಿವರಿ ಕಂಪನಿಗೂ ಅಕೌಂಟಿಂಗ್ ಸರ್ವಿಸ್ ನೀಡುತ್ತದೆ. ಆರೋಪಿ ಶ್ರೀಕಾಂತ್ ಕಂಪನಿಯಲ್ಲಿ 2023ರ ಆಗಸ್ಟ್ ನಿಂದ ಅಸೋಸಿಯೇಟ್ ಅಕೌಂಟೆಂಟ್​​ ​ ಆಗಿ ಕೆಲಸ ಮಾಡುತ್ತಿದ್ದ. ಆಲ್ ಇಂಡಿಯಾ ಸ್ವಿಗ್ಗಿ ಕಂಪನಿಯ ವಿದ್ಯುತ್ ಬಿಲ್ ಪಾವತಿಸುವ ಜವಾಬ್ದಾರಿಯನ್ನು ಕಂಪನಿ, ಶ್ರೀಕಾಂತ್​​ಗೆ ವಹಿಸಿತ್ತು. ಸ್ವಿಗ್ಗಿ ಕಂಪನಿಯು ಇದಕ್ಕಾಗಿ ಪ್ರತಿ ತಿಂಗಳು 1 ರಿಂದ 2 ಕೋಟಿ ರೂ.ವರೆಗೂ ಕಂಪನಿಗೆ ಪಾವತಿಸುತ್ತಿತ್ತು. ಶ್ರೀಕಾಂತ್​ ಈ ಹಣವನ್ನು ಬೆಟ್ಟಿಂಗ್​ ಆಡಲು ಬಳಸಿಕೊಂಡು ಕಂಪನಿಗೆ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

6 ತಿಂಗಳಲ್ಲಿ 7 ಕೋಟಿ ವಂಚನೆ: ಲೆಕ್ಕಪರಿಶೋಧನೆಯಲ್ಲಿ ಏಳು ಕೋಟಿ ರೂ ವಂಚನೆಯಾಗಿರುವ ಬಗ್ಗೆ ಫುಡ್​ ಡೆಲಿವರಿ ಕಂಪನಿ ಪತ್ತೆ ಹಚ್ಚಿ ಪೇಮೆಂಟ್ ಜವಾಬ್ದಾರಿ ವಹಿಸಿಕೊಂಡಿದ್ದ ಕಂಪನಿಗೆ ಮಾಹಿತಿ ನೀಡಿತ್ತು. ಇದರಂತೆ ಪರಿಶೀಲಿಸಿದಾಗ ಕಳೆದ ಜೂನ್ ನಿಂದ ಡಿಸೆಂಬರ್ ವರೆಗೂ ಸುಮಾರು 7 ಕೋಟಿ ರೂಪಾಯಿ ಹಣವನ್ನು ಶ್ರೀಕಾಂತ್, ಬೆಟ್ಟಿಂಗ್ ಆ್ಯಪ್​ನಲ್ಲಿ ಹೂಡಿಕೆ ಮಾಡಿರುವುದು ಗೊತ್ತಾಗಿದೆ. ಹಣ ದುರುಪಯೋಗ ಬಗ್ಗೆ ಕಂಪನಿಯು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣದ ಬಗ್ಗೆ ಡಿಸಿಪಿ ಶೇಖರ್​​​​​​​​​​​ ಪ್ರತಿಕ್ರಿಯೆ ಹೀಗಿದೆ; ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟೆಕ್ಕಣ್ಣನವರ್ ಪ್ರತಿಕ್ರಿಯಿಸಿ,''ವಂಚನೆ ಸಂಬಂಧ ದೂರುದಾರರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಕಂಪನಿಗೆ ಸೇರಿದ್ದ ಸುಮಾರು 7 ಕೋಟಿ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದು, ಈ ಹಣವನ್ನು ಬೆಟ್ಟಿಂಗ್ ಆ್ಯಪ್​ನಲ್ಲಿ ಹೂಡಿಕೆ ಮಾಡಿದ್ದ. ಆರೋಪಿಯು 2023 ರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಫುಡ್ ಡೆಲಿವರಿ ಕಂಪನಿ ಪಾವತಿಸಿದ್ದ 7 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಂಡು ಕಳೆದ ಆರು ತಿಂಗಳಿಂದ ಬೆಟ್ಟಿಂಗ್ ಆಡುತ್ತಿದ್ದ. ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಬೆಟ್ಟಿಂಗ್ ಕಂಪನಿಯೂ ವಂಚಿಸಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆಯೂ ತನಿಖೆ ಮುಂದುವರೆದಿದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಾಟ್ಸ್‌ಆ್ಯಪ್‌ನಲ್ಲಿ 'ನಿಮ್ಮ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಪ್ರಯೋಗವಾಗಿದೆ' ಎಂದು ಮೆಸೇಜ್‌ ಕಳುಹಿಸಿ ಸುಲಿಗೆ

ಇದನ್ನೂ ಓದಿ: ಸೈಬರ್ ವಂಚನೆ; 10 ಸಾವಿರ ರೂಪಾಯಿ ಹಿಂಪಡೆಯಲು ಹೋಗಿ 20 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.