ಬೆಂಗಳೂರು: ಜಲಮಂಡಳಿಯು ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಫೆ. 27 ರಿಂದ ಫೆ. 28ರಂದು ಬೆಳಗ್ಗೆ 6 ಗಂಟೆಯವರೆಗೆ ನಗರದ ಹಲವೆಡೆ ಕಾವೇರಿ ನೀರು ಸ್ಥಗಿತವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.
ಜಲಮಂಡಳಿ ಯುಎಫ್‌ಡಬ್ಲ್ಯೂ ಬಲ್ಕ್ ಪ್ರೋ ಮೀಟರ್ ಅಳವಡಿಕೆ ಕಾಮಗಾರಿಯನ್ನು ನಡೆಸಲಿದ್ದು, ನಂದಿನಿ ಲೇಔಟ್ 4ನೇ ಬ್ಲಾಕ್, ಬಿ.ಎಚ್.ಇ.ಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ ಬಡಾವಣೆ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಆರ್.ಎಚ್.ಬಿ.ಸಿ.ಎಸ್ ಲೇಔಟ್ 1ನೇ 2ನೇ ಸ್ಟೇಜ್, ಭೈರವೇಶ್ವರನಗರ, ಸುಂಕದಕಟ್ಟೆ, ನಂದಾದೀಪ ಲೇಔಟ್, ಶಂಕರಪ್ಪ ಲೇಔಟ್, ಪಟ್ಟಣ್ಣಗೆರೆ, ಮೈಲಸಂದ್ರ ವಿಲೇಜ್, ಭೂಮಿಕಾ ಲೇಔಟ್, ಯುನಿರ್ವರ್ ಸಿಟಿ ಲೇಔಟ್ 4ನೇ & 5ನೇ ಸ್ಟೇಜ್, ಬಿ.ಇ.ಎಂ.ಎಲ್ 10ನೇ ಸ್ಟೇಜ್, ಮಣಿಪಾಲ 5ನೇ ಸ್ಟೇಜ್, ಭುವನೇಶ್ವರಿನಗರ 1ನೇ & 2ನೇ ಸ್ಟೇಜ್, ಕೆಂಗೇರಿ ಉಪನಗರ, ಕೆಂಗೇರಿ, ನಾಗದೇವನಹಳ್ಳಿ, ವಿದ್ಯಾಪೀಠ ರೋಡ್ 1ರಿಂದ 13ನೇ ಕ್ರಾಸ್, ಜ್ಞಾನಭಾರತಿ 1ರಿಂದ 4ನೇ ಬ್ಲಾಕ್, ಕೆ.ಸಿ.ಹೆಚ್.ಎಸ್. ಲೇಔಟ್, ಆರ್.ಆರ್ ಲೇಔಟ್, ಜಗಜ್ಯೋತಿ ಲೇಔಟ್, ಮರಿಯಪ್ಪನಪಾಳ್ಯ, ದುಬಾಸಿ ಪಾಳ್ಯ, ಬೃಂದಾವನ ಲೇಔಟ್, ಸ್ವಾತಿ ಲೇಔಟ್, ಕೆ.ಪಿ.ಎಸ್.ಸಿ ಲೇಔಟ್, ಕೆಂಪಮ್ಮ ಲೇಔಟ್, ದೊಡ್ಡಗೊಲ್ಲರಹಳ್ಳಿ, ಚಿಕ್ಕಗೊಲ್ಲರಹಟ್ಟಿ, ಮೇಗಲು ಬೀದಿ, ಬಿ.ಡಿ.ಎ ಎಂಕ್ಲೇವ್, ಮೈಸೂರು ರೋಡ್, ಶಿರಕೆ, ಶಿವಣ್ಣ ಲೇಔಟ್, ಬಿ.ಹೆಚ್.ಇ.ಎಲ್ ಎಲ್ ಶೇಪ್, ಜಯಣ್ಣ ಲೇಔಟ್, ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಈ ಹಿನ್ನೆಲೆ ಕುಡಿಯುವ ನೀರಿನ ಕೊರತೆ ಬಾರದಂತೆ ಎಚ್ಚರಿಕೆ ವಹಿಸುವಂತೆ ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಜಲಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂತರ್ಜಲ ಕುಸಿತ: ಕುಡಿಯುವ ನೀರು ಸರಬರಾಜು ಮಾಡಲು ಮುಂದಾದ ಜಲಮಂಡಳಿ