ETV Bharat / state

ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಆನೆಗಳ ಹಿಂಡು - ಲಾಲ್​ಬಾಗ್​

ಲಾಲ್​ಬಾಗ್​ನಲ್ಲಿ ಪ್ರದರ್ಶನಕ್ಕಿಡಲಾದ 60 ಆನೆಗಳ ಹಿಂಡು ಉದ್ಯಾನವನಕ್ಕೆ ಬರುವ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಲಾಲ್​ಬಾಗ್​ನಲ್ಲಿ ಆನೆಗಳ ಹಿಂಡು
ಲಾಲ್​ಬಾಗ್​ನಲ್ಲಿ ಆನೆಗಳ ಹಿಂಡು
author img

By ETV Bharat Karnataka Team

Published : Feb 3, 2024, 5:15 PM IST

Updated : Feb 3, 2024, 6:33 PM IST

ಲಾಲ್​ಬಾಗ್​ನಲ್ಲಿ ಆನೆ ಪ್ರದರ್ಶನ

ಬೆಂಗಳೂರು: ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಇದೇ ಮೊದಲ ಬಾರಿಗೆ 60 ಆನೆಗಳ ಹಿಂಡು ಲಗ್ಗೆ ಇಟ್ಟಿವೆ. ಜೀವಂತ ಆನೆಗಳನ್ನು ಮೀರಿಸುವಂತೆ ಕಾಡಿನ ಕಳೆಗಿಡವಾದ ಲಂಟಾನದಿಂದ ಸಿದ್ಧಪಡಿಸಲಾದ ಬರೋಬ್ಬರಿ 60 ಆನೆಗಳು ಲಾಲ್​ ಬಾಗ್​ನ ಗಾಜಿನ ಮನೆ ಸುತ್ತಲಿನ ಹುಲ್ಲು ಹಾಸಿನ ಮೇಲೆ ಪ್ರದರ್ಶನಕ್ಕಿಟ್ಟಿದ್ದು, ನೋಡುಗರನ್ನು ಮೂಕ ವಿಸ್ಮಿತರನ್ನಾಗಿ ಮಾಡುತ್ತಿವೆ.

ದೂರದಿಂದ ನೋಡಿದರೆ ನಿಜವಾದ ಆನೆಗಳೇ ಎಂಬಂತೆ ಗೋಚರಿಸುವ ದೊಡ್ಡ ಆನೆಗಳು, ಮರಿ ಆನೆಗಳು ಇಲ್ಲಿನ ಮರಗಿಡಗಳ ನಡುವೆ ವಿಶ್ರಾಂತಿ ಪಡೆಯುತ್ತಿವೆ ಎಂಬಂತೆ ಕಾಣುತ್ತಿವೆ. ನೀಲಗಿರಿ ಬಯೋಸ್ಪೀಯರ್ ರಿಸರ್ವ್ ಪ್ರದೇಶ, ಮಲೆಮಹದೇಶ್ವರಬೆಟ್ಟ ಸೇರಿದಂತೆ ಇತರ ಕಡೆಗಳಲ್ಲಿ ವಾಸವಿರುವ ಸೋಲಿಗರು, ಜೇನು ಕುರುಬರು, ಬೆಟ್ಟ ಕುರುಬರು, ಪನಯಾ ಮತ್ತು ಇತರೆ ಬುಡಕಟ್ಟು ಜನಾಂಗದ ಪರಿಣಿತರು ಜೀವಂತ ಆನೆಗಳ ರೀತಿ ಅವುಗಳ ಪ್ರತಿರೂಪಗಳನ್ನೇ ಸಿದ್ಧಪಡಿಸಿದ್ದು, ಲಾಲ್​ಬಾಗ್​ನಲ್ಲಿ ಒಂದು ತಿಂಗಳ ಕಾಲ ಸಾರ್ವಜನಿಕರ ಪ್ರದರ್ಶನಕ್ಕೆ ಲಭ್ಯವಿರಲಿವೆ ಎಂದು ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಹಬಾಳ್ವೆಗೆ ಜಾಗೃತಿ: ಮನುಷ್ಯ-ಪ್ರಾಣಿಗಳ ನಡುವಿನ ಸಹಬಾಳ್ವೆ ಕುರಿತು ಸಮಾಜಕ್ಕೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಆನೆಗಳ ಪ್ರತಿರೂಪಗಳನ್ನು ಲಾಲ್‌ಬಾಗ್‌ನ ಗಾಜಿನಮನೆ, ಜಂಟಿ ನಿರ್ದೇಶಕರ ಕಚೇರಿಯ ಆವರಣ ಸೇರಿದಂತೆ ಸುತ್ತಮುತ್ತಲ ಹುಲ್ಲಿನ ಹಾಸಿನಲ್ಲಿ ಮೇಯುವಂತೆ ಇಡಲಾಗಿದೆ. ಇದರಿಂದ ಉದ್ಯಾನ ನಗರಿಯಲ್ಲಿ ಆನೆಗಳಂತೆ ಪ್ರವಾಸಿಗರಿಗೆ ಗೋಚರಿಸುತ್ತಿವೆ. ಜತೆಗೆ, ಇಲ್ಲಿಗೆ ಬರುವ ಮಕ್ಕಳಿಗೂ ಮನೋರಂಜನೆ ಹಾಗೂ ಸಹಬಾಳ್ವೆ ಕುರಿತಂತೆ ಅರಿವು ಮೂಡಿಸಿದಂತಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಜಗದೀಶ್​ ಮಾಹಿತಿ ನೀಡಿದರು.

ಒಂದು ತಿಂಗಳ ಮಾತ್ರ ಲಾಲ್​ಬಾಗ್​ನಲ್ಲಿ ಪ್ರದರ್ಶನ: ಲಾಲ್​ಬಾಗ್​ಗೆ ಲಗ್ಗೆ ಇಟ್ಟಿರುವ ಈ ಆನೆಗಳ ಪ್ರತಿಕೃತಿಗಳು ಒಂದು ತಿಂಗಳು ಕಾಲ ಅಂದರೆ ಫೆಬ್ರುವರಿ 3 ರಿಂದ ಮಾರ್ಚ್ 3ರ ವರೆಗೂ ಪ್ರದರ್ಶನಕ್ಕಿರಲಿವೆ. ಇದಾದ ಬಳಿಕ ವಿದೇಶಕ್ಕೆ ರವಾನೆಯಾಗಲಿವೆ ಎಂದು ಅವರು ಹೇಳಿದರು.

ಲಂಡನ್​ ಅರಮನೆಯಲ್ಲಿ ಪ್ರದರ್ಶನ: ಬುಡಕಟ್ಟು ಸಮುದಾಯದ ಪರಿಣಿತರು ಈವರೆಗೆ 250ಕ್ಕೂ ಹೆಚ್ಚು ಜೀವಂತ ಆನೆಗಳ ಗಾತ್ರದ ಆಕರ್ಷಕ ಆನೆಗಳ ಪ್ರತಿರೂಪಗಳನ್ನು ಲಂಟಾನಾ ಕಮಾರ, ರೋಜವಾರ ಕಳೆ ಗಿಡದ ಕಾಂಡಗಳಿಂದ ತಯಾರಿಸಿದ್ದಾರೆ. ಈ ಪೈಕಿ 100 ಆನೆಗಳ ಪ್ರತಿರೂಪಗಳನ್ನು ಲಂಡನ್‌ನ ಬಕ್ಕಿಂಗ್‌ಹ್ಯಾಂ ಅರಮನೆಗೆ ನೀಡಿದ್ದು ವಿಶೇಷ. ಲಾಲ್‌ಬಾಗ್‌ನಲ್ಲಿ ಪ್ರದರ್ಶನ ಮುಗಿದ ನಂತರ ಅಮೆರಿಕದಲ್ಲಿಯೂ 'ಆನೆಗಳು ಮತ್ತು ಮನುಷ್ಯನ ಸಹಬಾಳ್ವೆ ಹಾಗೂ ಸಾಮರಸ್ಯದ ಸಂಕೇತದ ಪ್ರದರ್ಶನ ಆಯೋಜಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

'ದಿ ರಿಯಲ್ ಎಲಿಫೆಂಟ್ ಕಲೆಕ್ಟಿವ್' ಸಂಸ್ಥೆ ಆಯೋಜಿಸಿರುವ ಈ ಪ್ರದರ್ಶನವನ್ನು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯ ಜೀವಿ) ಸುಭಾಷ್ ಮಾಳಖೇಡೆ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಅರಣ್ಯ ಇಲಾಖೆಯಲ್ಲಿ ಬೆಳಯುವ ಲಂಟಾನ ಪ್ರಮಾಣ ಹೆಚ್ಚಾಗುತ್ತಿದೆ. ಇದ ಅರಣ್ಯ ಪ್ರದೇಶವನ್ನು ಆವರಿಸುತ್ತಿವೆ. ಆದ್ದರಿಂದ ಲಂಟಾನವನ್ನು ತೆರವುಗೊಳಿಸಲಾಗುತ್ತಿದೆ. ಇದೇ ಲಂಟಾನವನ್ನು ಬಳಕೆ ಮಾಡಿ ಆನೆಗಳ ಪ್ರತಿ ರೂಪಗಳನ್ನು ಸಿದ್ಧ ಪಡಿಸಲಾಗಿದೆ. ಇದರಿಂದ ಜನರಿಗೆ ಸಹಬಾಳ್ವೆಯ ಬದುಕಿನ ಬಗ್ಗೆ ಜಾಗೃತಿ ಮೂಡಿಸಲು ನೆರವಾಗುತ್ತಿದೆ ಎದು ವಿವರಿಸಿದರು.

ಲಂಟಾನ, ರೋಜವಾರ ಕಳೆ ಗಿಡಗಳನ್ನ ತೆರವು ಮಾಡಿ ಅವನ್ನು ಬಿಸಿ ನೀರಿನಲ್ಲಿ ಸ್ವಲ್ಪ ಸಮಯದವರೆಗೆ ಇಟ್ಟು ಬಳಿಕ ಅದನ್ನು ಆನೆ ರೂಪಕ್ಕೆ ತರಲಾಗಿದೆ. ಅದನ್ನು ತೆಳುವಾಗಿ ಪಾಲೀಷ್​ ಮಾಡಲಾಗಿದೆ. ಒಂದು ದೊಡ್ಡ ಆನೆಯನ್ನು ಸಿದ್ಧಪಡಿಸಲು ಸುಮಾರು 5 ಮಂದಿ ಸಿಬ್ಬಂದಿ ಬೇಕಿದ್ದು ಇದು 10 ರಿಂದ 15 ದಿನಗಳಲ್ಲಿ ಆಗಲಿದೆ ಎಂದು ತಮಿಳುನಾಡು ಮೂಲದ ಸೋಲಿಗ ಸಮುದಾಯದ ಕೇತನ್​ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಬಂಡೀಪುರದಲ್ಲಿ ಕಾಡಾನೆ ಸಾವು: ಉನ್ನತ ಮಟ್ಟದ ಸಮಿತಿಯಿಂದ ತನಿಖೆ

Last Updated : Feb 3, 2024, 6:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.