ETV Bharat / state

ಇಂದು ಮತದಾನದ ದಿನ: ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಿ, ಆಯೋಗದಿಂದಲೂ ಬಿಡುಗಡೆಯಾಗಿದೆ ಮಾರ್ಗಸೂಚಿ​ - Election Commission Guidelines - ELECTION COMMISSION GUIDELINES

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚುನಾವಣಾ ಆಯೋಗ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಚುನಾವಣಾ ಆಯೋಗದಿಂದ ಮಾರ್ಗಸೂಚಿ ಬಿಡುಗಡೆ​
ಚುನಾವಣಾ ಆಯೋಗದಿಂದ ಮಾರ್ಗಸೂಚಿ ಬಿಡುಗಡೆ​
author img

By ETV Bharat Karnataka Team

Published : Apr 26, 2024, 6:00 AM IST

Updated : Apr 26, 2024, 6:58 AM IST

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಮತ್ತೊಂದೆಡೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದ್ದು, ಅನೇಕ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್​ ದಾಟಿದೆ. ತಾಪಮಾನ ಹೆಚ್ಚಿದಂತೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಮತದಾನ ಮಾಡಲು ತೆರಳುವವವರು ಬಿಸಿಲಿನಿಂದ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಚುನಾವಣಾ ಆಯೋಗದ ಮಾರ್ಗಸೂಚಿ

  • ಮಧ್ಯಾಹ್ನ 12 ರಿಂದ 3 ಗಂಟೆ ವರೆಗೆ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ.
  • ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಏರಿಕೆಯಾಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ
  • ನೀರಿನಾಂಶ ಹೆಚ್ಚಿರುವ ಹಣ್ಣು, ತರಕಾರಿಗಳನ್ನು ಸೇವಿಸಿ
  • ಬಿಸಿಲಿಗೆ ಹೋಗುವಾಗ ತೆಳುವಾದ ಮತ್ತು ತಿಳಿಬಣ್ಣದ ಉಡುಪುಗಳನ್ನು ಧರಿಸಿ, ಕನ್ನಡಕ ಬಳಸಿ, ಕೊಡೆ ಅಥವಾ ಕ್ಯಾಪ್​ ಉಪಯೋಗಿಸುವುದು ಸೂಕ್ತ.
  • ಬಿರು ಬಿಸಿಲಿನ ಅವಧಿಯಲ್ಲಿ ಹೊರಾಂಗಣ ಚಟುವಟಿಕೆ ನಡೆಸದಿರುವುದು ಸೂಕ್ತ
  • ದೇಹವನ್ನು ನಿರ್ಜಲೀಕರಣ ಗೊಳಿಸುವಂತಹ ಚಹಾ, ಕಾಫಿ, ಮದ್ಯಪಾನದಿಂದ ಆದಷ್ಟು ದೂರವಿರಿ.
  • ಮನೆಯಲ್ಲೇ ತಯಾರಿಸಿದ ಲಸ್ಸಿ, ಮಜ್ಜಿಗೆ, ನಿಂಬೆ ಪಾನಕಗಳನ್ನು ಸೇವಿಸಿ.

ಸನ್​ಸ್ಟೋಕ್​ಗೆ ಒಳಗಾದರೇ ಏನು ಮಾಡಬೇಕು

  • ಸನ್​ಸ್ಟೋಕ್​ಗೆ ಒಳಗಾದ ವ್ಯಕ್ತಿಯನ್ನು ಮೊದಲಿಗೆ ಸಮೀಪದ ಗಿಡ ಮರಗಳು ಅಥವಾ ನೆರಳು ಇರುವಂತಹ ಸ್ಥಳಕ್ಕೆ ಕರದೊಯ್ಯಬೇಕು. ಕೂಡಲೇ ಕುಡಿಯಲು ನೀರು, ನಿಂಬೆ ಶರಬತ್​ನಂತಹ ಪಾನಿಯಗಳನ್ನು ನೀಡಬೇಕು. ಬಳಿಕ ಸಮೀಪದ ಕ್ಲಿನಿಕ್​ಗೆ ಕೊಂಡೊಯ್ಯುವುದು ಸೂಕ್ತ ಎಂದು ತಿಳಿಸಿದೆ.

ಯಾವುದೇ ಪರಿಸ್ಥಿತಿ ಎದುರಿಸಲು ವಿಶೇಷ ವ್ಯವಸ್ಥೆ: ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ವಿಶೇಷ ವೈದ್ಯಕೀಯ ಕಿಟ್ ವ್ಯವಸ್ಥೆ ಮಾಡಲಾಗಿದೆ. ನಿರ್ಜಲೀಕರಣ ಹಾಗೂ ಸನ್ ಸ್ಟ್ರೋಕ್ ಸಂಬಂಧ ವೈದ್ಯಕೀಯ ಕಿಟ್ ವ್ಯವಸ್ಥೆಯನ್ನು ಮಾಡಲಾಗುವುದು. ಒಂಬತ್ತು ಕ್ಲಸ್ಟರ್ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.

14 ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ

ಇಂದು ಉಡುಪಿ - ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್​ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್​ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರ (ಎಸ್​ಸಿ) ಈ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ.

ಮತದಾನದ ಸಮಯ: ನಾಳೆ ಬೆಳಗ್ಗೆ7 ರಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ.

ಇದನ್ನೂ ಓದಿ: ವೋಟ್ ಮಾಡಿ, ಉಚಿತವಾಗಿ ಊಟ ಮಾಡಿ: ಬೆಂಗಳೂರಿನ ಹೋಟೆಲ್​​ನಿಂದ ಮತದಾರರಿಗೆ ಆಫರ್ - Free Food For Voters

Last Updated : Apr 26, 2024, 6:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.