ETV Bharat / state

ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ: ಸೆ. 16ರಂದು ನಗರದ ವಿವಿಧೆಡೆ ಸಂಚಾರ ವ್ಯವಸ್ಥೆ ಮಾರ್ಪಾಡು - Traffic system modified

ಈದ್​ ಮಿಲಾದ್​ ಮೆರವಣಿಗೆ ಹಿನ್ನೆಲೆ ಸುಗಮ ಸಂಚಾರಕ್ಕಾಗಿ ಕೆಲವು ರಸ್ತೆಗಳಲ್ಲಿ ಮಾರ್ಪಾಡುಗಳನ್ನು ಮಾಡಲಾಗಿದ್ದು, ಆ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Sep 13, 2024, 3:06 PM IST

ಬೆಂಗಳೂರು: ಈದ್ - ಮಿಲಾದ್ ಹಬ್ಬದಂದು ನೃಪತುಂಗ ರಸ್ತೆಯ ವೈಎಂಸಿಎ ಮೈದಾನಕ್ಕೆ ಸಾವಿರಾರು ಜನ ಅಲಂಕೃತ ವಾಹನ ಹಾಗೂ ಮೆರವಣಿಗೆ ಮೂಲಕ ನಗರದ ವಿವಿಧ ಸ್ಥಳಗಳಿಂದ ಬಂದು ಸೇರಲಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಕೆಲ ಮಾರ್ಪಾಡುಗಳನ್ನು ಮಾಡಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶಿಸಿದ್ದಾರೆ. ಸೆಪ್ಟೆಂಬರ್ 16ರಂದು ಈದ್ ಮಿಲಾದ್‌ ಹಬ್ಬದ ಪ್ರಯುಕ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಇರಲಿದೆ.

ಈದ್-ಮಿಲಾದ್ ಮೆರವಣಿಗೆ ಮಾರ್ಗಗಳು:

  • ಜೆ.ಸಿ ನಗರ ದರ್ಗಾದಿಂದ ಹೊರಟು ಶಿವಾಜಿನಗರ ಕಂಟೋನ್ ಮೆಂಟ್ ಕಡೆಗೆ
  • ಯಲಹಂಕ ಓಲ್ಡ್ ಟೌನ್ ಮಸೀದಿಯಿಂದ ಯಲಹಂಕ ಓಲ್ಡ್ ಟೌನ್ ಮಸೀದಿಯವರೆಗೆ
  • ಹಳೇ ಬಸ್ ನಿಲ್ದಾಣದಿಂದ ಸಣ್ಣ ಅಮಾನಿಕೆರೆಯವರೆಗೆ
  • ಬೆಳ್ಳಳ್ಳಿ ಕ್ರಾಸ್​ನಿಂದ ನಾಗವಾರ ಸಿಗ್ನಲ್ ವರೆಗೆ
  • ರಾಜಗೋಪಾಲನಗರ ಮುಖ್ಯರಸ್ತೆಯಿಂದ ಪೀಣ್ಯ 2ನೇ ಹಂತದವರೆಗೆ
  • ಸೌತ್ ಎಂಡ್ ಸರ್ಕಲ್​ನಿಂದ ಆರ್.ವಿ ರಸ್ತೆಯಲ್ಲಿ ಲಾಲ್‌ಬಾಗ್ ವೆಸ್ಟ್ ಗೇಟ್ ಸರ್ಕಲ್‌ವರೆಗೆ
  • ಗೀತಾ ಜಂಕ್ಷನ್ (ಕೂಲ್ ಜಾಯಿಂಟ್ ಜಂಕ್ಷನ್) ನಿಂದ ಸೌತ್‌ ಎಂಡ್ ಸರ್ಕಲ್
  • ಬೇಂದ್ರೆ ಜಂಕ್ಷನ್‌‌ನಿಂದ ಓಬಳಪ್ಪ ಗಾರ್ಡನ್ ಜಂಕ್ಷನ್
  • ಮಹಾಲಿಂಗೇಶ್ವರ ಬಡಾವಣೆ ನಿಂದ ಆಡುಗೋಡಿವರೆಗೆ ಸಾಗಿ ವೈಎಂಸಿಎ ಮೈದಾನಕ್ಕೆ ಬಂದು ತಲುಪಲು ಅವಕಾಶ

ಸಂಚಾರವನ್ನು ನಿರ್ಬಂಧಿತ ಸ್ಥಳಗಳು:

  • ನೇತಾಜಿ ಜಂಕ್ಷನ್​ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ
  • ಮಾಸ್ಕ್ ಜಂಕ್ಷನ್​ನಿಂದ ಎಂ.ಎಂ ರಸ್ತೆ ಮೂಲಕ ನೇತಾಜಿ ಜಂಕ್ಷನ್​ವರೆಗೆ (ಎಂ.ಎಂ.ರಸ್ತೆ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಬದಲಾಗಿ ಏಕ ಮುಖ ಸಂಚಾರವನ್ನಾಗಿ ತಾತ್ಕಾಲಿಕವಾಗಿ ಮಾರ್ಪಾಡು)
  • ನೇತಾಜಿ ಜಂಕ್ಷನ್‌ನಿಂದ ಮಾಸ್ಕ್ ಜಂಕ್ಷನ್ ಕಡೆಗೆ ವಾಹನಗಳ ಸಂಚಾರಕ್ಕೆ ಅವಕಾಶ
  • ನೇತಾಜಿ ಜಂಕ್ಷನ್​ನಿಂದ ಹೇನ್ಸ್ ಜಂಕ್ಷನ್​ವರೆಗೆ
  • ನಾಗವಾರ ಜಂಕ್ಷನ್​ನಿಂದ ಪಾಟರಿ ಸರ್ಕಲ್​ವರೆಗೆ ಸಂಚಾರ ನಿರ್ಬಂಧ

ಪರ್ಯಾಯ ಮಾರ್ಗಗಳು:

  • ಕೆ.ಆರ್ ಸರ್ಕಲ್‌ನಿಂದ ನೃಪತುಂಗ ರಸ್ತೆಯನ್ನು ಬಳಸಿ ಹಾದು ಹೋಗುವ ವಾಹನ ಸವಾರರು ಕೆ.ಆರ್ ವೃತ್ತದಲ್ಲಿ ಕಬ್ಬನ್ ಉದ್ಯಾನವನವನ್ನು ಪ್ರವೇಶಿಸಿ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಅಥವಾ ಸೆಂಟ್ರಲ್ ಲೈಬ್ರರಿ ವೃತ್ತದ ಬಳಿ ಬಲ ತಿರುವು ಪಡೆದು ಏಕಮುಖ ಸಂಚಾರದ ವಿರುದ್ಧವಾಗಿ ಹಡ್ಸ್​ನ್ ವೃತ್ತಕ್ಕೆ ಬಂದು ಮುಂದೆ ಸಾಗಬಹುದು.
  • ಸಿಟಿ ಮಾರ್ಕೆಟ್ ವೃತ್ತದ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣ ಕಡೆಗೆ ಸಂಚಾರಿಸುವ ಎಲ್ಲಾ ಮಾದರಿಯ ವಾಹನಗಳು ಜೆ.ಸಿ.ರಸ್ತೆ ಮೂಲಕ ಟೌನ್ ಹಾಲ್ ವೃತ್ತ, ಎನ್.ಆರ್.ವೃತ್ತ ಮಾರ್ಗವಾಗಿ ಕೆ.ಜಿ.ರಸ್ತೆಯಲ್ಲಿ ಚಲಿಸಿ ಕೆಂಪೇಗೌಡ ಬಸ್ ನಿಲ್ದಾಣ ತಲುಪಬಹುದು.
  • ರಿಚ್ಮಂಡ್ ರಸ್ತೆ ರೆಸಿಡೆನ್ಸಿ ರಸ್ತೆ ಕಡೆಗೆ ಹೋಗುವವರು ಪಿ.ಕೆ.ಲೇನ್ ಮತ್ತು ಓ.ಟಿ.ಸಿ. ರಸ್ತೆಯಲ್ಲಿ ಚಲಿಸಿ ಎನ್.ಆರ್.ವೃತ್ತದ ಮೂಲಕ ದೇವಾಂಗ ವೃತ್ತ, ಮಿಷನ್ ರಸ್ತೆ ಮಾರ್ಗವಾಗಿ ಹೋಗಬಹುದು.
  • ರಿಚ್ಮಂಡ್ ರಸ್ತೆ ಕಡೆಯಿಂದ ಬರುವ ವಾಹನಗಳು ಆರ್.ಆರ್.ಎಂ.ಆರ್. ರಸ್ತೆ ಹಡ್ಸನ್ ವೃತ್ತ ಮೂಲಕ ಕೆ.ಜಿ.ರಸ್ತೆ ಕಡೆಗೆ ಹಾಗೂ ಎನ್.ಆರ್.ವೃತ್ತದ ಮೂಲಕ ಟೌನ್ ಹಾಲ್ ಕಡೆಗೆ ಸಂಚರಿಸಬಹುದು.
  • ಪೊಲೀಸ್ ಕಾರ್ನರ್ ಕಡೆಯಿಂದ ಬರುವ ವಾಹನಗಳು ಹಡ್ಸನ್ ವೃತ್ತದ ಮೂಲಕ ಕಬ್ಬನ್‌ಪಾರ್ಕ್ ಒಳಭಾಗ ಸಂಚರಿಸುವುದನ್ನು ನಿಷೇಧಿಸಿದ್ದು, ಸದರಿ ವಾಹನಗಳು ಕಸ್ತೂರಬಾ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದ ಕಡೆಗೆ ಸಂಚರಿಸಬಹುದು.
  • ಮೈಸೂರು ರಸ್ತೆ ಸಿರ್ಸಿ ಸರ್ಕಲ್ - ಸಿರ್ಸಿ ರಸ್ತೆ ಚಾಮರಾಜಪೇಟೆ 7ನೇ ಅಡ್ಡರಸ್ತೆ - ಬಲ ತಿರುವು ಚಾಮರಾಜಪೇಟೆ 2, 3, 4 & 5ನೇ ಮುಖ್ಯರಸ್ತೆಯಲ್ಲಿ ಎಡತಿರುವು ಪಡೆದು ಸಿಟಿಮಾರುಕಟ್ಟೆ ಹಾಗು ಇತರೆ ಕಡೆಗೆ ಸಂಚರಿಸಬಹುದು.
  • ನೇತಾಜಿ ರಸ್ತೆ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದ್ದು, ನೇತಾಜಿ ಜಂಕ್ಷನ್​ನಿಂದ - ಬಲತಿರುವು - ಮಾಸ್ಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕ್ಲಾರೆನ್ಸ್ ರೈಲ್ವೆ ಮೇಲ್ಸೇತುವೆಯಲ್ಲಿ ಪಾಟರಿ ರಸ್ತೆಗೆ ಬಲ ತಿರುವು ಪಡೆದು ಪಾಟರಿ ರಸ್ತೆ ಮತ್ತು ಹೆಣ್ಣೂರು ರಸ್ತೆ ಜಂಕ್ಷನ್​ನಲ್ಲಿ ಎಡ ತಿರುವು ಪಡೆದು ಹೆಣ್ಣೂರು ಮುಖ್ಯರಸ್ತೆ ಲಿಂಗರಾಜಪುರಂ ಫ್ಲೈ ಓವರ್ ಮೂಲಕ ಹೆಣ್ಣೂರು, ಬಾಣಸವಾಡಿ ಹಾಗೂ ಹೊರ ವರ್ತುಲ ರಸ್ತೆ ಕಡೆಗೆ ಸಂಚರಿಸಬಹುದು.
  • ಮಾಸ್ಕ್ ಜಂಕ್ಷನ್‌ನಿಂದ ಎಂ.ಎಂ ರಸ್ತೆಯಲ್ಲಿ ನೇತಾಜಿ ಜಂಕ್ಷನ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿದ್ದು, ಮಾಸ್ಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮಾಸ್ಕ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ಬಲ ತಿರುವು ಪಡೆದು ಕೋಲ್ಸ್ ರಸ್ತೆಯ ಹೆಚ್.ಪಿ ಪೆಟ್ರೋಲ್ ಬಂಕ್ ಹತ್ತಿರ ಸೌಂಡರ್ಸ್ ರಸ್ತೆಗೆ ಎಡ ತಿರುವು ಪಡೆದು ನೇರವಾಗಿ ಸೆಂಟ್ ಜಾನ್ಸ್ ಚರ್ಚ್ ರಸ್ತೆ ತಲುಪಿ ಕೋಲ್ಸ್ ಪಾರ್ಕ್ ಜಂಕ್ಷನ್​ನಲ್ಲಿ ಬಲ ತಿರುವು ಪಡೆದು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹೇನ್ಸ್ ಜಂಕ್ಷನ್ ತಲುಪಲು ಅವಕಾಶ ಮಾಡಿಕೊಡಲಾಗಿದೆ.
  • ನೇತಾಜಿ ಜಂಕ್ಷನ್‌ನಿಂದ‌ ಹೇನ್ಸ್ ರಸ್ತೆಯಲ್ಲಿ ಹೇನ್ಸ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿದ್ದು, ನೇತಾಜಿ ಜಂಕ್ಷನ್‌ ನಲ್ಲಿ ಎಡ ತಿರುವು ಪಡೆದು ಎಂ.ಎಂ ರಸ್ತೆ ಮೂಲಕ ಮಾಸ್ಕ್ ಜಂಕ್ಷನ್ ತಲುಪಿ ಬಲ ತಿರುವು ಪಡೆದು ಮಾಸ್ಕ್ ರಸ್ತೆ ಮೂಲಕ ಶೋಲ್ಡ್ ರಸ್ತೆ ತಲುಪಿ ಬಲ ತಿರುವು ಪಡೆದು ಕೋಲ್ಸ್ ರಸ್ತೆಯ ಹೆಚ್.ಪಿ ಪೆಟ್ರೋಲ್ ಬಂಕ್ ಹತ್ತಿರ ಸೌಂಡರ್ಸ್ ರಸ್ತೆಗೆ ಎಡ ತಿರುವು ಪಡೆದು ನೇರವಾಗಿ ಸೆಂಟ್ ಜಾನ್ಸ್ ಚರ್ಚ್ ರಸ್ತೆ ತಲುಪಿ ಕೋಲ್ಸ್ ಪಾರ್ಕ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹೇನ್ಸ್ ಜಂಕ್ಷನ್ ತಲುಪಲು ಅವಕಾಶ
  • ಥಣಿಸಂದ್ರ ಕಡೆಯಿಂದ ಶಿವಾಜಿನಗರ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದ್ದು ನಾಗವಾರ ಜಂಕ್ಷನ್‌ನಿಂದ ಎಡತಿರುವು ಹೆಣ್ಣೂರು ಜಂಕ್ಷನ್ ಬಲತಿರುವು ಸಿದ್ದಪ್ಪ ರೆಡ್ಡಿ ಜಂಕ್ಷನ್ ಅಯೋಧ್ಯ ಜಂಕ್ಷನ್ - ಲಿಂಗರಾಜಪುರಂ ಫ್ಲೈ ಓವರ್‌ನಿಂದ ಪುಲಕೇಶಿನಗರ ಸಂಚಾರ ಠಾಣೆ ಕಡೆಯಿಂದ ಮಾರ್ಗ ಬದಲಾವಣೆ ಮಾಡಿ ರಾಬರ್ಟ್ ಸನ್ ರಸ್ತೆ ಜಂಕ್ಷನ್​ನಲ್ಲಿ ಬಲತಿರುವು ಪಡೆದುಕೊಂಡು ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪಬಹುದು.
  • ನಾಗವಾರ ಜಂಕ್ಷನ್​ನಿಂದ ಬಲತಿರುವು ಪಡೆದು ಹೆಬ್ಬಾಳ ಮೂಲಕ‌ ನಗರಕ್ಕೆ ಸಂಚರಿಸಲು ಅವಕಾಶ
  • ಆರ್.ಟಿ.ನಗರ ದಿಂದ ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಪುಷ್ಪಾಂಜಲಿ ಟಾಕೀಸ್ ಬಳಿ ಎಡ ತಿರುವು ಪಡೆದು ವೀರಣ್ಣಪಾಳ್ಯ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ರಸ್ತೆ ತಲುಪಬಹುದು.

ವಾಹನ ನಿಲುಗಡೆಗೆ ನಿರ್ಬಂಧಿತ ರಸ್ತೆಗಳು:

  • ನೃಪತುಂಗ ರಸ್ತೆಯ - ಕೆ.ಆರ್ ವೃತ್ತದಿಂದ ಪೊಲೀಸ್ ಕಾರ್ನರ್​ವರೆಗೆ
  • ಕೆ.ಜಿ.ರಸ್ತೆಯ ಪೊಲೀಸ್ ಕಾರ್ನರ್​ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ
  • ಎನ್.ಆರ್.ರಸ್ತೆಯ ಟೌನ್ ಹಾಲ್ ಜಂಕ್ಷನ್​ನಿಂದ ಪೊಲೀಸ್ ಕಾರ್ನರ್​ವರೆಗೆ
  • ಪಿ.ಕಾಳಿಂಗರಾವ್ ರಸ್ತೆಯ ಎನ್.ಆರ್ ಜಂಕ್ಷನ್​ನಿಂದ ಸುಬ್ಬಯ್ಯ ವೃತ್ತದವರೆಗೆ
  • ಕಸ್ತೂರಿಬಾ ರಸ್ತೆಯ ಹಡ್ಸನ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದವರೆಗೆ ಹಾಗೂ ಸಿದ್ದಲಿಂಗಯ್ಯ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ
  • ಮಲ್ಯ ಆಸ್ಪತ್ರೆ ರಸ್ತೆಯ ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ಜಂಕ್ಷನ್​ವರೆಗೆ
  • ಆರ್.ಆರ್.ಎಂ.ಆರ್ ರಸ್ತೆಯ ರಿಚ್ಮಂಡ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ
  • ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ
  • ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಬಿ.ಆರ್.ವಿ ಜಂಕ್ಷನ್ ವರೆಗೆ
  • ಕ್ವೀನ್ಸ್ ರಸ್ತೆಯ ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ
  • ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಕೆ.ಆರ್.ವೃತ್ತದಿಂದ ಬಾಳೇಕುಂದ್ರಿ ವೃತ್ತದವರೆಗೆ
  • ಶೇಷಾದ್ರಿ ರಸ್ತೆಯ ಮಹಾರಾಣಿ ವೃತ್ತದಿಂದ ಕೆ.ಆರ್.ವೃತ್ತದವರೆಗೆ
  • ಹಳೇ ಅಂಚೆ ಕಛೇರಿ ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆ‌ರ್.ವೃತ್ತದವರೆಗೆ
  • ಕಬ್ಬನ್ ಉದ್ಯಾನವನದ ಒಳ ಆವರಣ
  • ನೇತಾಜಿ ರಸ್ತೆಯ ಹೇನ್ಸ್ ರಸ್ತೆ, ಎಂ.ಎಂ ರಸ್ತೆ, ಮಾಸ್ಕ್ ರಸ್ತೆ, ಕೋಲ್ಡ್ ರಸ್ತೆ, ಸೌಂಡರ್ಸ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ ಹಾಗೂ ಮಿಲ್ಲರ್ ರಸ್ತೆ ಎಕ್ಸ್‌ ಟೆಂಕ್ಷನ್ ನಲ್ಲಿ ಎರಡೂ ಬದಿಯಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಗೆ ತಾತ್ಕಾಲಿಕ ನಿರ್ಬಂಧ
  • ಪಾಟರಿ ಸರ್ಕಲ್​ನಿಂದ ನಾಗವಾರ ಸಿಗ್ನಲ್​ವರೆಗೆ ಎರಡು ಬದಿಯಲ್ಲಿ
  • ಗೋವಿಂದಪುರ ಜಂಕ್ಷನ್​ನಿಂದ ಗೋವಿಂದಪುರ ಪೊಲೀಸ್ ಠಾಣೆಯವರೆಗೆ ರಸ್ತೆಯ ಎರಡೂ ಬದಿಯಲ್ಲಿ
  • ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್​ನಿಂದ ನರೇಂದ್ರ ಟೆಂಟ್ ಜಂಕ್ಷನ್​ವರೆಗೆ ರಸ್ತೆಯ ಎರಡೂ ಬದಿ ವಾಹನಗಳ ನಿಲುಗಡೆಗೆ ನಿಷೇಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.