ETV Bharat / state

ಬೆಂಗಳೂರು, ಮೈಸೂರಿನ ಪ್ರತಿಷ್ಠಿತ ಬಿಲ್ಡರ್‌ಗಳ ಮನೆ, ಕಚೇರಿಗಳ ಮೇಲೆ ಇಡಿ ದಾಳಿ - ED raids on builders

ಬೆಂಗಳೂರು ಮತ್ತು ಮೈಸೂರುಗಳಲ್ಲಿ ಪ್ರತಿಷ್ಠಿತ ಬಿಲ್ಡರ್​ಗಳ ಮನೆ ಮೇಲೆ ಇಡಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಶೋಧ ನಡೆಸುತ್ತಿದ್ದಾರೆ. ಬಿಲ್ಡರ್‌ಗಳು ಮತ್ತು ಕೆಲ ಕಂಪನಿಗಳ ವಿರುದ್ಧ ಅವ್ಯವಹಾರ ಆರೋಪ ಕೇಳಿ ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು ಮೈಸೂರಿನಲ್ಲಿ  ಇಡಿ ದಾಳಿ
ಬೆಂಗಳೂರು ಮೈಸೂರಿನಲ್ಲಿ ಇಡಿ ದಾಳಿ (ETV Bharat)
author img

By ETV Bharat Karnataka Team

Published : Jun 24, 2024, 11:46 AM IST

ಬೆಂಗಳೂರು: ಪ್ರತಿಷ್ಠಿತ ಬಿಲ್ಡರ್‌ಗಳ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ‌. ಬೆಂಗಳೂರಿನ ಯುಬಿ ಸಿಟಿಯ ಕಿಂಗ್​ಫಿಶರ್ ಟವರ್, ಮಲ್ಲೇಶ್ವರಂ, ಬಸವೇಶ್ವರನಗರ, ಬನ್ನೇರುಘಟ್ಟ ರೋಡ್, ಹನುಮಂತನಗರ ಹಾಗೂ ಮೈಸೂರಿನ ಎರಡು ಸ್ಥಳಗಳು ಸೇರದಂತೆ 11 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಸೈಟ್ ಕೊಡಿಸುವುದಾಗಿ ವಂಚನೆ, ಅಕ್ರಮ ವ್ಯವಹಾರ, ಆಸ್ತಿ ತೆರಿಗೆ ಪಾವತಿಯಲ್ಲಿ ವಂಚನೆ ಸೇರಿದಂತೆ ಬಿಲ್ಡರ್‌ಗಳು ಮತ್ತು ಕೆಲ ಕಂಪನಿಗಳ ವಿರುದ್ಧ ಅನೇಕ ಅವ್ಯವಹಾರಗಳು ಕುರಿತು ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಕ್ರಮ ಹಣ ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 8 ಸ್ಥಳಗಳಲ್ಲಿ ಇತ್ತೀಚಿಗೆ ದಾಳಿ ನಡೆಸಿದ್ದ ಇಡಿ 11.5 ಕೋಟಿ ರೂ ಹಣ, ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ಇದನ್ನೂ ಓದಿ: ₹20,000 ಕೋಟಿ ಬ್ಯಾಂಕ್‌ ವಂಚನೆ ಪ್ರಕರಣ: ಅಮ್ಟೇಕ್​​​ ಗ್ರೂಪ್​ಗೆ ಸೇರಿದ 35 ಕಡೆ ಇಡಿ ದಾಳಿ - Bank Fraud Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.