ಬೆಂಗಳೂರು: ನಗರದ ಸಂಚಾರಿ ಪೊಲೀಸರು ತಡರಾತ್ರಿ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ಕೆಲವು ಖಾಸಗಿ ಬಸ್‌ಗಳ ಚಾಲಕರ ನಿರ್ಲಕ್ಷ್ಯತನ ಬಯಲಾಗಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಬೇಕಾದ ಜವಾಬ್ದಾರಿ ಚಾಲಕರ ಮೇಲಿರುತ್ತದೆ. ಆದರೆ ಕೆಲವು ಚಾಲಕರು ಮದ್ಯಪಾನ ಮಾಡಿ ಬಸ್ ಚಾಲನೆ ಮಾಡುತ್ತಿರುವುದು ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.
ತಡರಾತ್ರಿ 8ರಿಂದ 11.30ಯವರೆಗೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 881 ಬಸ್‌ಗಳು ಚಾಲಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 9 ಚಾಲಕರು ಮದ್ಯಪಾನ ಮಾಡಿ ಬಸ್ ಚಲಾಯಿಸುತ್ತಿರುವುದು ಗೊತ್ತಾಗಿದೆ. ತಕ್ಷಣ ಆರೋಪಿ ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚಾಲನಾ ಪರವಾನಗಿ ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ: ಸಿಎಂ ಮೋಹನ್ ಯಾದವ್ ಬೆಂಗಾವಲು ವಾಹನದಲ್ಲಿ ಭದ್ರತಾ ಲೋಪ: ಭದ್ರತಾ ತಂಡದಲ್ಲಿ ಖಾಕಿ ಸಮವಸ್ತ್ರ ಧರಿಸಿದ ಪಾನಮತ್ತ ವ್ಯಕ್ತಿ ಯಾರು?
ಶಾಲಾ ವಾಹನ ಚಾಲಕರ ವಿರುದ್ಧ ಕ್ರಿಮಿನಲ್ ಕೇಸ್: ಸುರಕ್ಷತೆಯ ದೃಷ್ಟಿಯಿಂದ ಪಾನಮತ್ತರಾಗಿ ವಾಹನ ಚಲಾಯಿಸುವಂತಿಲ್ಲ ಎಂಬ ಸಂಚಾರಿ ನಿಯಮವಿದೆ. ಇದರ ನಡುವೆಯೂ ಮದ್ಯಪಾನ ಮಾಡಿ ಶಾಲಾ ಮಕ್ಕಳ ವಾಹನ ಚಲಾಯಿಸುವ ಚಾಲಕರ ವಿರುದ್ಧ ಇತ್ತೀಚಿಗೆ ಬೆಂಗಳೂರು ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.