ETV Bharat / state

ಪಾನಮತ್ತ ಪುಂಡರಿಂದ ಮಹಿಳೆ ಮತ್ತು ಯುವತಿ ಮೇಲೆ ಹಲ್ಲೆ ಆರೋಪ: ಪ್ರಕರಣ ದಾಖಲು, ಪುಂಡರಿಗಾಗಿ ಹುಡುಕಾಟ - assault by drunken men - ASSAULT BY DRUNKEN MEN

ಮಹಿಳೆ ಹಾಗೂ ಯುವತಿ ಮೇಲೆ ಹಲ್ಲೆ ನಡೆಸಿರುವ ಪುಂಡರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

drunken men assaulted on woman and young woman
ಪಾನಮತ್ತ ಪುಂಡರಿಂದ ಮಹಿಳೆ ಮತ್ತು ಯುವತಿಯ ಮೇಲೆ ಹಲ್ಲೆ (ETV Bharat)
author img

By ETV Bharat Karnataka Team

Published : Jun 10, 2024, 9:40 AM IST

ಬೆಂಗಳೂರು: ಮನೆ ಮುಂದಿನ ರಸ್ತೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ಮಹಿಳೆ ಮತ್ತು ಯುವತಿಯ ಮೇಲೆ ಪಾನಮತ್ತ ಕಿಡಿಗೇಡಿಗಳ ಗುಂಪೊಂದು ಹಲ್ಲೆ ಮಾಡಿ ಎಳೆದಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆವಲಹಳ್ಳಿಯಲ್ಲಿ ನಡೆದಿದೆ. ಭಾನುವಾರ ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದ್ದು, ಬಾಲಾಜಿ ಯೋಗಿ ಎಂಬಾತ ಸೇರಿದಂತೆ ಕೆಲ ಯುವಕರ ಗುಂಪು ನಡುರಸ್ತೆಯಲ್ಲೇ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ.

ಭಾನುವಾರವಾಗಿದ್ದರಿಂದ ಸ್ಥಳೀಯ ಮಹಿಳೆ ಮತ್ತು ಯುವತಿ ಮನೆ ಮುಂಭಾಗದ ರಸ್ತೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಈ ವೇಳೆ ಪಾನಮತ್ತರಾಗಿ ಬಂದ ಆರೋಪಿ ಯುವಕರು ರಸ್ತೆಯಲ್ಲಿ ಆಟವಾಡುತ್ತಿರುವುದನ್ನು ಪ್ರಶ್ನಿಸಿ ಸಾರ್ವಜನಿಕವಾಗಿ ಮಹಿಳೆ ಮತ್ತು ಯುವತಿಗೆ ಅವಾಚ್ಯವಾಗಿ ನಿಂದಿಸಿದ್ದರು. 'ಯಾಕೆ ಅವಾಚ್ಯವಾಗಿ ನಿಂದಿಸುತ್ತಿದ್ದೀರಾ?' ಎಂದು ಪ್ರಶ್ನಿಸಿದ್ದಕ್ಕೆ ಪುಂಡರ ಗುಂಪು ಯುವತಿಯ ಕೂದಲು ಹಿಡಿದೆಳೆದು ಅಟ್ಟಾಡಿಸಿದೆ. ತಕ್ಷಣ ಗಲಾಟೆಯನ್ನು ಗಮನಿಸಿದ ನೆರೆಹೊರೆಯವರು ಬಂದು ಯುವತಿ ಹಾಗೂ ಮಹಿಳೆಯನ್ನು ರಕ್ಷಿಸಿದ್ದಾರೆ.

ಪುಂಡರು ಹಲ್ಲೆ ನಡೆಸುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿ ಯುವಕರ ಪುಂಡಾಟ - Miscreants Damaged Vehicles

ETV Bharat Logo

Copyright © 2025 Ushodaya Enterprises Pvt. Ltd., All Rights Reserved.