ETV Bharat / state

ದಾವಣಗೆರೆ ಕ್ಷೇತ್ರಕ್ಕೆ 'ಸೊಸೆ ತಂದ ಸೌಭಾಗ್ಯ'; ಡಾ. ಪ್ರಭಾ ನಿವಾಸಕ್ಕೆ ಹರಿದುಬಂದ ಜನಸಾಗರ - Dr Prabha Mallikarjun massive flex

ದಾವಣಗೆರೆ ನಗರದಲ್ಲಿ 'ಸೊಸೆ ತಂದ ಸೌಭಾಗ್ಯ' ಎಂಬ ಡಾ. ಪ್ರಭಾ ಮಲ್ಲಿಕಾರ್ಜುನ್ ಇರುವ ಬೃಹತ್ ಫ್ಲೆಕ್ಸ್​ನ್ನು ಅಳವಡಿಸಲಾಗಿದೆ.

Dr. Prabha Mallikarjun
ಡಾ. ಪ್ರಭಾ ಮಲ್ಲಿಕಾರ್ಜುನ್ (ETV Bharat)
author img

By ETV Bharat Karnataka Team

Published : Jun 5, 2024, 6:08 PM IST

ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಗೆದ್ದು ಬೀಗಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಗಾಯತ್ರಿ ಸಿದ್ಧೇಶ್ವರ್​ ಅವರ ವಿರುದ್ಧ 26 ವರ್ಷಗಳ ಬಳಿಕ ಕ್ಷೇತ್ರದಲ್ಲಿ 'ಸೊಸೆ ತಂದ ಸೌಭಾಗ್ಯ' ಎಂಬ ಖ್ಯಾತಿ ಗಳಿಸಿದ್ದಾರೆ. ಸದ್ಯ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಪ್ರಭಾವಳಿ ಆರಂಭವಾಗಿದೆ. ಗೆಲುವಿನ ನಗೆ ಬೀರಿದ ಪ್ರಭಾ ಅವರ ನಿವಾಸಕ್ಕೆ ಜನಸಾಗರವೇ ಹರಿದುಬರುತ್ತಿದೆ.

ಹೂವಿನ ಮಾಲೆ, ಶಾಲು, ಹೂವಿನ ಬೊಕ್ಕೆ ಹಿಡಿದು ತಮ್ಮ ನೂತನ ಸಂಸದೆಗೆ ಜನಸಾಮಾನ್ಯರು ತಂಡೋಪತಂಡವಾಗಿ ಭೇಟಿಗೆ ಆಗಮಿಸಿ ಗೌರವ ಸಲ್ಲಿಸಿದ್ರು. ಡಾ.‌ ಪ್ರಭಾ ಮಲ್ಲಿಕಾರ್ಜುನ್‌ ಅವರ ನಿವಾಸದತ್ತ ಆಗಮಿಸುತ್ತಿರುವ ಅಭಿಮಾನಿಗಳು, ಜನಸಾಮಾನ್ಯರನ್ನು ತಡೆಯಲು ಹರಸಾಹಸ ಪಡುವಂತಾಗಿದೆ. ಅಲ್ಲದೆ ತಮ್ಮ ಭೇಟಿಗೆ ಆಗಮಿಸುವ ಜನರನ್ನು ನೂತನ ಸಂಸದೆ ಪ್ರಭಾ ಅವರು ಭೇಟಿ ಆಗ್ತಿರುವುದು ವಿಶೇಷ.

Dr. Prabha Mallikarjun
ಡಾ. ಪ್ರಭಾ ಮಲ್ಲಿಕಾರ್ಜುನ್ (ETV Bharat)

'ಸೊಸೆ ತಂದ ಸೌಭಾಗ್ಯ' ಆಕರ್ಷಿಸುತ್ತಿದೆ ಫ್ಲೆಕ್ಸ್ : ಕಾಂಗ್ರೆಸ್ ಅಭ್ಯರ್ಥಿ ಆಗಿದ್ದ ಡಾ.‌ ಪ್ರಭಾ ಮಲ್ಲಿಕಾರ್ಜುನ್‌ ಗೆದ್ದಾಗಿದೆ. 26 ವರ್ಷಗಳ ಬಳಿಕ ಕೇಸರಿ ಕೋಟೆಯನ್ನು ಕಾಂಗ್ರೆಸ್ ಭೇದಿಸಿದೆ. ಇದೇ ಸಂತಸದಲ್ಲಿ ದಾವಣಗೆರೆ ನಗರದ ಗುಂಡಿ ವೃತ್ತದಲ್ಲಿ 'ಸೊಸೆ ತಂದ ಸೌಭಾಗ್ಯ' ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್‌ ಇರುವ ಬೃಹತ್ ಫ್ಲೆಕ್ಸ್ ಅಳವಡಿಸಿದ್ದಾರೆ.

ಈ ಫ್ಲೆಕ್ಸ್ ಇಡೀ ದಾವಣಗೆರೆ ಮತದಾರರನ್ನು ಆಕರ್ಷಿಸುತ್ತಿದೆ. ಬೃಹತ್ ಫ್ಲೆಕ್ಸ್​ನ್ನು ಜನಸಾಮಾನ್ಯರು ತಲೆ ಎತ್ತಿ ನೋಡುತ್ತಿದ್ದಾರೆ. ಈ ವಿಶೇಷ ಫ್ಲೆಕ್ಸ್ ಇಡೀ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರು ಗೆದ್ದು ಬೀಗಿದ ಬಳಿಕ ಸೊಸೆ ತಂದ ಸೌಭಾಗ್ಯ ಫ್ಲೆಕ್ಸ್​ನ ಫೋಟೋವನ್ನು ವಾಟ್ಸಪ್, ಫೇಸ್ಬುಕ್ ಸ್ಟೇಟಸ್ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ : 26 ವರ್ಷಗಳ ಬಳಿಕ ಕಾಂಗ್ರೆಸ್ ಬಾಯಿಗೆ ಬೆಣ್ಣೆ: ದಾವಣಗೆರೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಜಯಭೇರಿ - Congress Prabha Mallikarjun Won

ETV Bharat Logo

Copyright © 2024 Ushodaya Enterprises Pvt. Ltd., All Rights Reserved.