ETV Bharat / state

80ನೇ ವಯಸ್ಸಿನಲ್ಲೂ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಸರ್ಕಾರಿ ನಿವೃತ್ತ ವೈದ್ಯೆ ವೀಣಾ! - Karnataka State Open university

ಕರ್ನಾಟಕ ರಾಜ್ಯ ಮುಕ್ತ ವಿವಿಯ 19ನೇ ಘಟಿಕೋತ್ಸವದಲ್ಲಿ ಡಾ.ವೀಣಾ ಎಂಬುವವರು 6ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಇಂದಿಗೂ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.

Dr. Veena
ಡಾ.ವೀಣಾ
author img

By ETV Bharat Karnataka Team

Published : Mar 7, 2024, 6:52 PM IST

Updated : Mar 8, 2024, 11:31 AM IST

80ನೇ ವಯಸ್ಸಿನಲ್ಲೂ ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವ ಡಾಕ್ಟರ್ ವೀಣಾ

ಮೈಸೂರು : ಮಕ್ಕಳ ತಜ್ಞೆಯಾಗಿ, ಸರ್ಕಾರಿ ವೈದ್ಯಕೀಯ ನಿರ್ದೇಶಕಿಯಾಗಿ ನಿವೃತ್ತಿಯಾದ ಡಾ. ವೀಣಾ ಅವರಿಗೆ ಈಗ 80 ವರ್ಷ. ಉಚಿತವಾಗಿ ರೋಗಿಗಳ ಸೇವೆ ಮಾಡುವ ಜೊತೆಗೆ ಭಾರತೀಯ ಸಂಸ್ಕೃತಿ ಬಗ್ಗೆ ಅಧ್ಯಯನ ನಡೆಸಿ, ಮೊನ್ನೆ ನಡೆದ ಕರ್ನಾಟಕ ರಾಜ್ಯ ಮುಕ್ತ ವಿ.ವಿಯ 19ನೇ ಘಟಿಕೋತ್ಸವದಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ. ಬಾಲ್ಯದ ವಿದ್ಯಾಭ್ಯಾಸ, ಕೆಲಸವನ್ನು ಯಶಸ್ವಿಯಾಗಿ ಮುಗಿಸಿರುವ ಇವರು, ಇಳಿವಯಸ್ಸಿನಲ್ಲೂ ಚಟುವಟಿಕೆಯಿಂದ ಕೂಡಿದ್ದಾರೆ. ಇವರು ವಿಶ್ವ ಮಹಿಳಾ ದಿನದ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.

ಇವರ ಗಂಡ ಡಾಕ್ಟರ್ ತಿರುಮಲಚಾರ್ ಸರ್ಕಾರಿ ವೈದ್ಯರಾಗಿ ನಿವೃತ್ತರಾಗಿದ್ದಾರೆ. ಕಳೆದ 12 ವರ್ಷಗಳಿಂದ ಇಬ್ಬರೂ ಒಟ್ಟಿಗೆ ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಬೆಂಗಳೂರು ಸೇರಿದಂತೆ ಇತರ ಭಾಗಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಸಾಂಸ್ಕೃತಿಕ ನಗರಿಯ ವಾತಾವರಣ ಹಾಗೂ ಇತರ ಟ್ರಾಫಿಕ್ ಜಂಜಾಟ ಮೈಸೂರಿನಲ್ಲಿ ಇಲ್ಲ ಎಂಬ ಕಾರಣಕ್ಕಾಗಿ ಇಲ್ಲಿಯೇ ನೆಲೆಸಿದ್ದಾರೆ.

ಇಲ್ಲಿನ ಜಿಲ್ಲಾ ಉಪಸಮಿತಿಯಡಿ ಅಸ್ಥಿತ್ವದಲ್ಲಿರುವ ವಿವೇಕಾನಂದ ಆರೋಗ್ಯ ಕೇಂದ್ರಕ್ಕೆ ವಾರದಲ್ಲಿ ಮೂರು ದಿನ ಹೋಗಿ ಮಕ್ಕಳಿಗೆ, ಕ್ಯಾನ್ಸರ್ ಹಾಗೂ ಇತರ ರೋಗಗಳಿಗೆ ತುತ್ತಾದವರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಇವರು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಕ್ಕೆ 6 ವರ್ಷಗಳಿಂದ ರೇಡಿಯೋ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಇದನ್ನು ಸೇವೆ ಎಂದು ಪರಿಗಣಿಸಿದ್ದಾರೆ.

80ರ ವಯಸ್ಸಿನಲ್ಲೂ 6ನೇ ರ‍್ಯಾಂಕ್ ಪಡೆದ ಡಾ.ವೀಣಾ : ಡಾಕ್ಟರ್ ಆಗಿ ನಿವೃತ್ತಿ ಪಡೆದ ನಂತರವೂ ಇವರಿಗೆ ಭಾರತೀಯ ಇತಿಹಾಸ, ಸಂಸ್ಕೃತಿ, ಕಲೆ, ವಾಸ್ತು ವಿನ್ಯಾಸ, ಪರಂಪರೆ ಬಗ್ಗೆ ಅಧ್ಯಯನ ಮಾಡಬೇಕು ಎಂಬ ಕುತೂಹಲ ಉಂಟಾಗಿತ್ತು. ಇದರಿಂದ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿ.ವಿಯಲ್ಲಿ ಅಧ್ಯಯನ ಮಾಡಲು ಶುರು ಮಾಡಿದ್ದರು. ಕಳೆದ ಭಾನುವಾರ ಕರ್ನಾಟಕ ರಾಜ್ಯ ಮುಕ್ತ ವಿವಿಯ 19ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಇತಿಹಾಸ ಎಂಬ ವಿಚಾರದಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದು, ಅದರಲ್ಲಿ 6ನೇ ರ‍್ಯಾಂಕ್ ಪಡೆದಿದ್ದಾರೆ.

ಡಾ. ವೀಣಾ ಅವರು ಈಗಲೂ ಭಾರತೀಯ ಇತಿಹಾಸದ ಬಗ್ಗೆ, ಸಂಸ್ಕೃತಿಯ ಬಗ್ಗೆ, ವಾಸ್ತು ವಿನ್ಯಾಸದ ಬಗ್ಗೆ ಪುಸ್ತಕ ಬರೆಯುತ್ತಿದ್ದಾರೆ. ಅವರ 80ನೇ ವರ್ಷದಲ್ಲೂ ಓದುವ ಹಾಗೂ ಬರೆಯುವ ಅಭ್ಯಾಸದ ಬಗ್ಗೆ ಅವರು ಈಟಿವಿ ಭಾರತ್ ಜೊತೆ ವಿವರಿಸಿದ್ದಾರೆ.

ವಿಶ್ವ ಮಹಿಳಾ ದಿನಾಚರಣೆಯ ಬಗ್ಗೆ ಹೇಳಿದ್ದೇನು?: ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲೂ ಮಹಿಳೆಯರಿಗೆ ಮೊದಲ ಆದ್ಯತೆ ಕೊಡಲಾಗಿದೆ. ಮೆಸಪೊಟೋಮಿಯ ನಾಗರೀಕತೆಯಲ್ಲಿ ಮಹಿಳೆಯರಿಗೆ ಸೆಕೆಂಡ್ ಗ್ರೇಡ್ ಸಿಟಿಜನ್ಸ್ ಆಗಿ ಆದ್ಯತೆ ನೀಡಲಾಗುತ್ತಿತ್ತು. ಆದರೆ, ನಮ್ಮ ಭಾರತದಲ್ಲಿ ಮಹಿಳೆಯರಿಗೆ ಮೊದಲಿಂದ ಆದ್ಯತೆ ಇತ್ತು. ಪರದೇಶಿಕರ ಆಕ್ರಮಣಗಳಿಂದ ಹಾಗೂ ಅನಾಹುತಗಳಿಗೆ ನಮ್ಮವರು ಕುರುಡರಾದರು. ಮೂಢರಾದರು. ಹಾಗಾಗಿ ಇಲ್ಲಿನ ಸ್ತ್ರೀಯರಿಗಿದ್ದ ಆದ್ಯತೆ ಕಡಿಮೆ ಆಯಿತು. ಅದನ್ನ ಇವಾಗ ಸ್ವಲ್ಪ ತಿಳಿದುಕೊಳ್ಳುತ್ತಾ ಇದ್ದೇವೆ ಎಂದರು.

ಜನ ಸಾಮಾನ್ಯರಿಗೆ ಅರಿವು ಬರುತ್ತಾ ಇದೆ. ಆದರೆ ಈ ಅರಿವಿಗೆ ನಾವು ನಮ್ಮ ಮದ ಸೇರಿಸಬಾರದು. ಜನುಮ ಮದ, ವಿದ್ಯೆಮದ, ಕುಲಮದ, ಯಾವುದನ್ನು ಸೇರಿಸದ ಮಹಿಳೆ ಅಷ್ಟೇ, ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಅವರು ಮನಸ್ಸು ಮಾಡಬೇಕು. ಎರಡೇ ಎರಡು ಮಾಡಬೇಕು. ಕಾಲ ವ್ಯರ್ಥ ಮಾಡಬಾರದು. ಕಷ್ಟಪಟ್ಟು ದುಡಿಯಬೇಕು. ಕಷ್ಟಪಟ್ಟು ದುಡಿದು ಸತ್ತವರು ಯಾರೂ ಇಲ್ಲ. ಪ್ರಪಂಚದಲ್ಲಿ ದುಡಿದು ಯಾರಿಗೂ ಕಾಯಿಲೆ ಬರಲ್ಲ. ದುಡಿದರೆ ಇರೋ ಕಾಯಿಲೆ ಹೋಗುತ್ತೆ. ಹಾಗಾಗಿ ಈ ಒಂದು ಗುರಿ ಇಟ್ಕೊಂಡು ಇನ್ನು ಯಾರನ್ನೂ ಅವಹೇಳನ ಮಾಡದೇ ಮಹಿಳೆಯರು ಮುಂದಕ್ಕೆ ಬರಬೇಕು. ಆಗ ಪುರುಷರಿಗಿಂತ ಮೇಲೆ ಹೋಗಬಹುದು. ಆದರೆ ಮೇಲೆ ಹೋದೆ ಎನ್ನುವ ಮದ ಇರಬಾರದು ಎಂದು ತಿಳಿಸಿದರು.

ಮಹಿಳೆಯರು ಏನಾದರೂ ಸಾಧಿಸಬಹುದು. ಎಷ್ಟು ಎತ್ತರಕ್ಕೆ ಬೇಕಾದರೂ ಏರಬಹುದು. ಮುಂದಕ್ಕೆ ಬನ್ನಿ ಮಾತನಾಡಿ. ಎಲ್ಲರ ಜೊತೆ ಬೆರೆಯಿರಿ. ಮುಂದೆ ಕಲಿಯಬೇಕಾದ ವಿಷಯ ತುಂಬಾ ವಿಪರೀತ ಇದೆ. ಆ ದಿಕ್ಕಿನಲ್ಲಿ ಹೋಗೋಣ. ಇವತ್ತಲ್ಲ ನಾಳೆ ಸ್ವಲ್ಪ ಮುಂದುವರೆಯೋಣ ಎಂಬುವುದೇ ನನ್ನ ಸಂದೇಶ ಎಂದರು.

ಇದನ್ನೂ ಓದಿ : ಅಂಧ ವೃದ್ಧೆಯ ಬಾಳಿಗೆ ಬೆಳಕಾದ ವೈದ್ಯ: ರಸ್ತೆ ಪಕ್ಕದಲ್ಲಿ ಮಲಗಿದ್ದ ವೃದ್ಧೆಗೆ ಉಚಿತ ಚಿಕಿತ್ಸೆ

Last Updated : Mar 8, 2024, 11:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.