ETV Bharat / state

ಧಾರವಾಡದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸಭೆ: ಪ್ರಹ್ಲಾದ್ ಜೋಶಿ ವಿರುದ್ಧ ತೀವ್ರ ಆಕ್ರೋಶ - Dingaleshwar Swamiji

ಧಾರವಾಡದಲ್ಲಿ ಇಂದು ನಡೆದ ಭಕ್ತರ ಸಭೆಯಲ್ಲಿ ದಿಂಗಾಲೇಶ್ವರ ಶ್ರೀಗಳು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Dharwad  Outrage against Prahlad Joshi  Lok Sabha Election 2024  Lok Sabha Election
ಧಾರವಾಡದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸಭೆ: ಪ್ರಹ್ಲಾದ್ ಜೋಶಿ ವಿರುದ್ದ ಆಕ್ರೋಶ
author img

By ETV Bharat Karnataka Team

Published : Apr 2, 2024, 2:53 PM IST

Updated : Apr 2, 2024, 5:33 PM IST

ಪ್ರಹ್ಲಾದ್ ಜೋಶಿ ವಿರುದ್ಧ ತೀವ್ರ ಆಕ್ರೋಶ

ಧಾರವಾಡ: ''ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಹೋರಾಟ ಆರಂಭಿಸಿದ್ದೇನೆ. ನ್ಯಾಯ ಸಿಗುವವರೆಗೂ ನಾನು ಕೊರಳಲ್ಲಿ ಮಾಲೆ‌ ಹಾಕುವುದಿಲ್ಲ. ನಮ್ಮ ಗುರಿ ಮುಟ್ಟುವವರೆಗೂ ರಾಜ್ಯದ ಜನತೆಯೂ ನನಗೆ ಮಾಲೆ ಹಾಕಬೇಡಿ'' ಎಂದು ದಿಂಗಾಲೇಶ್ವರ ಸ್ವಾಮೀಜಿ ಮನವಿ ಮಾಡಿದ್ದಾರೆ.

ಧಾರವಾಡದ ಸೇವಾಲಯದಲ್ಲಿ ಇಂದು ನಡೆದ ಭಕ್ತರ ಸಭೆಯಲ್ಲಿ ಸ್ವಾಮೀಜಿ ಮಾತನಾಡಿದರು.

''ಈಗಾಗಲೇ ನಮ್ಮ ನಿಲುವು ಕೇಂದ್ರದವರೆಗೂ ಮುಟ್ಟಿದೆ. ಈ ಹೋರಾಟ ಈಗಿನಿಂದ ಆರಂಭವಾದದ್ದಲ್ಲ. ಐದು ವರ್ಷದ ಮಗುವಿದ್ದಾಗ ತಾಯಿಯೊಂದಿಗೆ ಹೋರಾಟ ಮಾಡಿದವನು ನಾನು. ಹತ್ತು ವರ್ಷದವನಿದ್ದಾಗ ಮನೆ ಬಿಟ್ಟು ಸನ್ಯಾಸಿ ಆದವನು ನಾನು. ವ್ಯಕ್ತಿಯ ಹಿತಕ್ಕಾಗಿ ಹೋರಾಟ ಮಾಡಿದವನಲ್ಲ. ವೀರಶೈವ ಲಿಂಗಾಯತ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ ಎಂದು ಹೋರಾಟ ಮಾಡುತ್ತಿದ್ದಾಗ, ಅವೆರಡೂ ಒಂದೇ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ಬಿಜೆಪಿ ಹೈಕಮಾಂಡ್ ವಿರುದ್ಧ ಹೋರಾಡಿದ್ದೆ. ಹಿಂದಿನ ಸರ್ಕಾರದಲ್ಲಿ 40% ಕಮಿಷನ್ ವಿರುದ್ಧ ಹೋರಾಟ ಮಾಡಿದ್ದೆ'' ಎಂದು ಹೇಳಿದರು.

''ಹೋರಾಟಕ್ಕೆ ಜ‌ಯ ಸಿಕ್ಕ ಮೇಲೆ ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಮಾಲೆ ಹಾಕಬೇಕು. ಜಾತಿ ಮತ್ತು ಪಕ್ಷದ ಪರವಾದ ಹೋರಾಟ ನನ್ನದ್ದಲ್ಲ. ನಮ್ಮ ಮಠ ಜಾತ್ಯತೀತ ಮಠ. ಜೋಶಿಯವರನ್ನು ನಮ್ಮ ಸಮಾಜದದವರು ಗೆಲ್ಲಿಸಿದರು. ಗೆಲ್ಲಿಸಿದವರನ್ನೇ ಅವರು ಮರೆತರು. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮೂವರಿಗೆ ಟಿಕೆಟ್ ಆಮಿಷ ತೋರಿಸಿದರು. ಡಾ.ಮಹೇಶ ನಾಲವಾಡ ಅವರನ್ನು ಬಳಕೆ ಮಾಡಿಕೊಂಡು ಬಿಸಾಕಿದ್ದಾರೆ. ಅಂಗಡಿ, ಕಾಂತೇಶ ಅವರನ್ನೂ ಸಹ ಜೋಶಿಯವರು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪ್ರಚಾರ ಮಾಡಲು ಕಳಿಸಿದರು. ಈಶ್ವರಪ್ಪನವರಿಗೂ ಮೋಸ ಮಾಡಿದವರು ಜೋಶಿ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಜೋಶಿ ನಿಮಗೆ ಮೋಸ ಮಾಡ್ತಾರೆ ಎಂದು ನಾನು ಲಿಖಿತ ರೂಪದಲ್ಲಿ ಬರೆದು ಕೊಡುತ್ತೇನೆಂದು ಈಶ್ವರಪ್ಪನವರಿಗೆ ಹೇಳಿದ್ಧೆ. ಈಗ ಅವರ ಮಗನಿಗೆ ಟಿಕೆಟ್ ಕೊಡದೆ ಜೋಶಿ ಮೋಸ ಮಾಡಿದ್ದಾರೆ. ಕೇವಲ ಲಿಂಗಾಯತರಿಗೆ ಅಷ್ಟೇ ಅಲ್ಲದೇ, ದಲಿತರಿಗೂ ಮೋಸ ಮಾಡಿದ್ದಾರೆ. ಅನೇಕ ವ್ಯಕ್ತಿಗಳನ್ನು ನಾಶ ಮಾಡಿದ್ದಾರೆ. ಈ ರಾಜ್ಯದಲ್ಲಿ ಕಣ್ಣೀರು ಹಾಕಲು ಅನುಮತಿ ಇಲ್ಲದಂತಾಗಿದೆ. ಹದಿನೈದು ವರ್ಷದ ಹಿಂದೆ ಕೇಂದ್ರ ಮಂತ್ರಿಯಾದ ವ್ಯಕ್ತಿ ಈಗ ಶಾಸಕನಾಗಿ ಇವರ ಕೈಗೊಂಬೆ ಆಗಿದ್ದಾರೆ'' ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು.

''ಯಾವಾಗಲೂ ಮೋದಿ ಪಕ್ಕ ಇರುವ ಜೋಶಿ ನಮ್ಮ ನಾಡಿಗಾಗಿ ಏನು ಮಾಡಿದ್ರು?. ಸಣ್ಣಪುಟ್ಟ ಕೆಲಸಕ್ಕಾಗಿ ನಾನು ವಿದ್ಯಾರ್ಥಿಗಳನ್ನು ಅವರ ಹತ್ತಿರ ಕಳಿಸಿದರೆ, ಅವರ ಕೆಲಸವನ್ನೂ ಮಾಡಿಲ್ಲ. ಇವರು ಸಂಸದರಾಗಿದ್ದು ಜನರ ಕೆಲಸ ಮಾಡಲಿಕ್ಕೆ. ಜೋಶಿ ಪ್ರಧಾನಿ ಪಕ್ಕ ಇದ್ದಾಗ ನಮ್ಮ ನಾಡಿಗೆ ಏನಾದ್ರೂ ತಂದು ಹಾಕ್ತಾರೆಂದು ಕಾದು ನೋಡಿದ್ವಿ. ಆದ್ರೆ, ಏನೂ ತಂದು ಹಾಕಲಿಲ್ಲ" ಎಂದು ಕಿಡಿ ಕಾರಿದರು.

'ಇದನ್ನೂ ಓದಿ: ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬರದಿದ್ದಲ್ಲಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವ ಭಯದಲ್ಲಿದ್ದಾರೆ: ಜಿ ಟಿ ದೇವೇಗೌಡ - LOK SABHA ELECTION

Last Updated : Apr 2, 2024, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.