ETV Bharat / state

ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ತಂದೆಗೆ ಮಗನಿಂದಲೇ ಕಿಡ್ನಿದಾನ: ರೋಬೋಟ್‌ ಸಹಾಯದಿಂದ ಯಶಸ್ವಿ ಕಸಿ - ROBOTIC KIDNEY TRANSPLANT

ಸ್ಥೂಲಕಾಯ ಹಾಗೂ ಅಧಿಕ ರಕ್ತದೊತ್ತಡ ಇದ್ದ ರೋಗಿಯೊಬ್ಬರಿಗೆ ಫೋರ್ಟಿಸ್​ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ರೋಬೋಟಿಕ್ ಕಿಡ್ನಿ ಶಸ್ತ್ರಚಿಕಿತ್ಸೆ ನಡೆಸಿದೆ.

Doctors team with the person underwent surgery
ಶಸ್ತ್ರಚಿಕಿತ್ಸೆಗೊಳಗಾದ ವ್ಯಕ್ತಿಯೊಂದಿ ವೈದ್ಯತಂಡ (ETV Bharat)
author img

By ETV Bharat Karnataka Team

Published : Nov 22, 2024, 5:47 PM IST

ಬೆಂಗಳೂರು: ಕೊನೆ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ 61 ವರ್ಷದ ತಂದೆಗೆ ಸ್ವತಃ ಮಗನೇ ತನ್ನ ಒಂದು ಕಿಡ್ನಿ ದಾನ ಮಾಡಿದ್ದು, ಕನ್ನಿಂಗ್‌ಹ್ಯಾಮ್‌ ರಸ್ತೆ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರ ತಂಡ ರೋಬೋಟಿಕ್‌ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ, ಕಿಡ್ನಿ ಟ್ರಾನ್ಸ್‌ಪ್ಲಾಂಟ್, ಮತ್ತು ರೊಬೊಟಿಕ್ ಸರ್ಜರಿ ನಿರ್ದೇಶಕ ಡಾ.ಮೋಹನ್ ಕೇಶವಮೂರ್ತಿ, "ಆಫ್ರಿಕಾ ಮೂಲದ 61 ವರ್ಷದ ಬೆನ್ಸನ್ ಎನ್ನುವವರು ಸ್ವತಃ ವೈದ್ಯರಾಗಿದ್ದು. 6 ರಿಂದ 7 ತಿಂಗಳಿಂದ ಕೊನೆಯ ಹಂತದ ಮೂತ್ರಪಿಂಡ ಕಾಯಿಲೆಗೆ ತುತ್ತಾಗಿದ್ದರು. ಅಷ್ಟೇ ಅಲ್ಲದೆ, ಇವರು 130 ಕೆ.ಜಿ. ತೂಕ ಹೆಚ್ಚಾಗಿದ್ದರಿಂದ ಸ್ಥೂಲಕಾಯದಿಂದ ಬಳಲುತ್ತಿದ್ದರು. ವಿಫಲವಾದ ಮೂತ್ರಪಿಂಡದ ಕಾರ್ಯವನ್ನು ನಿರ್ವಹಿಸಲು ನಿಯಮಿತ ಹಿಮೋಡಯಾಲಿಸಿಸ್ ಅನ್ನು ಅವಲಂಬಿಸಿದ್ದರು. ಅಧಿಕ ರಕ್ತದೊತ್ತಡ ಇವರ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡಿಸಿತ್ತು."

ಅಸಾಧ್ಯ ಎಂದು ಕೈಚಲ್ಲಿದ್ದ ಆಪರೇಷನ್​ ಸಕ್ಸಸ್​: "ಹಲವು ದೇಶಗಳ ಆಸ್ಪತ್ರೆಗಳಿಗೆ ತೆರಳಿದರೂ ಇವರ ಸ್ಥೂಲಕಾಯತೆ ಇದ್ದ ಕಾರಣ ಮೂತ್ರಪಿಂಡದ ಕಸಿ ಅಸಾಧ್ಯ ಎಂದು ಆಸ್ಪತ್ರೆಗಳು ನಿರಾಕರಿಸಿದ್ದವು. ಬಳಿಕ ಅವರು ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನ ನಡೆಸಿ, ಅವರಿಗೆ ರೋಬೋಟ್‌ ನೆರವಿನಿಂದ ಮಾತ್ರ ಕಿಡ್ನಿ ಕಸಿ ಮಾಡಲು ಸಾಧ್ಯ ಎಂದು ತಿಳಿಸಲಾಯಿತು. ಆಗ ಅವರ 23 ವರ್ಷದ ಮಗ ತನ್ನ ಆರೋಗ್ಯವಂತ ಕಿಡ್ನಿಯನ್ನೇ ದಾನ ಮಾಡುವುದಾಗಿ ಮುಂದಾದರು. ತಂದೆ ಹಾಗೂ ಮಗನ ಕಿಡ್ನಿ ಹೊಂದಾಣಿಯಾದ ಕಾರಣ ರೋಬೋಟ್‌ ಸಹಾಯದಿಂದ ಕಸಿ ಮಾಡಲಾಯಿತು" ಎಂದು ವಿವರಿಸಿದರು.

ಶಸ್ತ್ರಚಿಕಿತ್ಸೆಗೆ ಸವಾಲಿನಿಂದ ಕೂಡಿತ್ತು: ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ - ಆಂಕೊಲಾಜಿ, ಆಂಡ್ರಾಲಜಿ, ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಮತ್ತು ರೋಬೋಟಿಕ್ ಸರ್ಜರಿ ಹೆಚ್ಚುವರಿ ನಿರ್ದೇಶಕ ಡಾ. ಶಾಕಿರ್ ತಬ್ರೇಜ್ ಮಾತನಾಡಿ, "ರೋಗಿಯ ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ ಹಾಗೂ ದೀರ್ಘಕಾಲದಿಂದ ನಡೆಸಿದ ಡಯಾಲಿಸಿಸ್‌ ಶಸ್ತ್ರಚಿಕಿತ್ಸೆಗೆ ಸವಾಲಾಗಿತ್ತು. ಆದರೆ, ರೋಬೋಟ್‌ ಸಹಾಯದಿಂದ 3ಡಿ ದೃಶ್ಯೀಕರಣದ ಮುಖೇನ ನಿಖರಛೇದನ ಹಾಗೂ ಕಸಿ ಮಾಡಲು ಸಾಧ್ಯವಾಯಿತು. ತೆರೆದ ಕಸಿ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ರೋಬೋಟಿಕ್‌ ಸಹಾಯದಿಂದ ನಡೆಸುವ ಶಸ್ತ್ರಚಿಕಿತ್ಸೆ ಹೆಚ್ಚು ಸುರಕ್ಷಿತ, ಕಡಿಮೆ ರಕ್ತದ ನಷ್ಟ ಹಾಗೂ ವೇಗವಾಗಿ ಚೇತರಿಕೆಗೆ ಸಹಕಾರಿಯಾಗಲಿದೆ. ಜೊತೆಗೆ ದೀರ್ಘಕಾಲೀನ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದಾದ 72 ಗಂಟೆಗಳಲ್ಲಿ ಅವರ ಮೂತ್ರಪಿಂಡ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಅವರ ಕ್ರಿಯೇಟಿನೈನ್ ಮಟ್ಟ ಸ್ಥಿರವಾಗಿತ್ತು" ಎಂದು ಹೇಳಿದರು.

ವೈದ್ಯರಿಗೆ ಕೃತಜ್ಞತೆ ಹೇಳಿದ ರೋಗಿ: ರೋಗಿ ಡಾ. ಬೆನ್ಸನ್ ಮಾತನಾಡಿ, "ಕೊನೆ ಹಂತದ ಮೂತ್ರಪಿಂಡದ ವೈಫಲ್ಯಕ್ಕೆ ಸೂಕ್ತರೀತಿಯಲ್ಲಿ ಮಾರ್ಗದರ್ಶನ ನೀಡಿ, ರೋಬೋಟ್‌ ಸಹಾಯದಿಂದ ಕಸಿ ಮಾಡಿದ ಎಲ್ಲಾ ವೈದ್ಯರಿಗೂ ಕೃತಜ್ಞನಾಗಿದ್ದೇನೆ. ಎಲ್ಲಿಯೂ ನನಗೆ ಚಿಕಿತ್ಸೆ ಸಿಗುವ ಭರವಸೆ ಸಿಗಲಿಲ್ಲ. ಆದರೆ ಇಲ್ಲಿ, ನನ್ನ ದೈಹಿಕ ಸ್ಥಿತಿ ತಿಳಿದಿದ್ದರೂ ಸೂಕ್ತ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕಸಿ ನಡೆಸಿದರು. ಈ ವೈದ್ಯರು ಜೀವನದಲ್ಲಿ ನನಗೆ ಎರಡನೇ ಅವಕಾಶ ನೀಡಿದ್ದಾರೆ. ಕಿಡ್ನಿ ದಾನ ಮಾಡಿದ ಮಗನ ಔದಾರ್ಯಕ್ಕೆ ನಾನು ಸದಾ ಋಣಿ" ಎಂದು ಹೇಳಿದರು.

ಇದನ್ನೂ ಓದಿ: ಮಹಿಳೆಯ ಹೊಟ್ಟೆಯಲ್ಲಿತ್ತು 2.2 ಕೆ.ಜಿ ಗಡ್ಡೆ! ಚಿಟಗುಪ್ಪಿ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.