ETV Bharat / state

ದಿಂಗಾಲೇಶ್ವರ ಸ್ವಾಮೀಜಿ ಸ್ವಾರ್ಥಕ್ಕಾಗಿ ಜೋಶಿ ವಿರುದ್ಧ ವೃಥಾ ಆರೋಪ: ರುದ್ರಮುನಿ‌ ಸ್ವಾಮೀಜಿ - DHARWAD LOK SABHA CONSTITUENCY - DHARWAD LOK SABHA CONSTITUENCY

''ದಿಂಗಾಲೇಶ್ವರ ಸ್ವಾಮೀಜಿ ಸ್ವಾರ್ಥಕ್ಕಾಗಿ ಜೋಶಿ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ'' ಎಂದು ತಿಪಟೂರು ಷಡಕ್ಷರಿ ಮಠದ ರುದ್ರಮುನಿ‌ ಸ್ವಾಮೀಜಿ ಹೇಳಿದರು.

Dingaleshwar Swamiji  MP Prahlad Joshi  Lok Sabha Election  Lok Sabha Election 2024
ರುದ್ರಮುನಿ‌ ಸ್ವಾಮೀಜಿ
author img

By ETV Bharat Karnataka Team

Published : Mar 30, 2024, 7:19 AM IST

ಹುಬ್ಬಳ್ಳಿ: ''ದಿಂಗಾಗಲೇಶ್ವರ ಸ್ವಾಮೀಜಿ ಕೇವಲ ವೈಯಕ್ತಿಕ ಸ್ವಾರ್ಥಕ್ಕಾಗಿ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ'' ಎಂದು ತಿಪಟೂರು ಷಡಕ್ಷರಿ ಮಠದ ರುದ್ರಮುನಿ‌ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

''ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ವೀರಶೈವ ಸಮಾಜ ಮಾತ್ರವಲ್ಲ, ಯಾವೊಬ್ಬ ವ್ಯಕ್ತಿಯನ್ನು ಕಡೆಗಣಿಸಿದವರಲ್ಲ'' ಎಂಬ ಸಂದೇಶ ನೀಡಿದ ವಿಡಿಯೋವೊಂದನ್ನು ಷಡಕ್ಷರಿ ಶ್ರೀಗಳು ಹಂಚಿಕೊಂಡಿದ್ದಾರೆ.

''ಧಾರವಾಡದಲ್ಲಿ ನಿರಂತರ ನಾಲ್ಕು ಬಾರಿ ಸಂಸದರಾಗಿ ಚುನಾಯಿತರಾದ ಪ್ರಹ್ಲಾದ್ ಜೋಶಿಯವರು ಯಾವುದೇ ಸಮುದಾಯವನ್ನು ತುಳಿದು ಮೇಲೆ ಬಂದವರಲ್ಲ. ಅವರದ್ದೇ ಆದ ವರ್ಚಸ್ಸು, ಅಭಿವೃದ್ಧಿ ಕೆಲಸ ಕಾರ್ಯಗಳಿಂದಲೇ ಪ್ರಧಾನಿ ಮೋದಿ ಅವರ ಆಪ್ತರಾಗಿ, ಕೇಂದ್ರ ಮಟ್ಟದ ಮುಂಚೂಣಿ ನಾಯಕರಾಗಿ ಮುನ್ನಲೆಗೆ ಬಂದಿದ್ದಾರೆ. ರಾಜಕೀಯದಲ್ಲಿ ಮೂಗು ತೂರಿಸುತ್ತಿರುವ ದಿಂಗಾಲೇಶ್ವರ ಸ್ವಾಮಿಗಳು ತಮ್ಮ ಸ್ವಾರ್ಥಕ್ಕಾಗಿ ಪ್ರಹ್ಲಾದ್ ಜೋಶಿಯವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿರುವುದು ಸರಿಯಲ್ಲ'' ಎಂದು ಆಕ್ಷೇಪಿಸಿದ್ದಾರೆ.

''ಪ್ರಹ್ಲಾದ್ ಜೋಶಿ ಅವರು ವೀರಶೈವರಿಗೆ ಪ್ರಾಶಸ್ತ್ಯ ನೀಡಿಲ್ಲ ಎಂಬ ದಿಂಗಾಲೇಶ್ವರರ ಆರೋಪದಲ್ಲಿ ಹುರುಳಿಲ್ಲ. ಅಲ್ಲದೇ, ಅವರ ಕ್ಷೇತ್ರ ಬದಲಾವಣೆ ಚರ್ಚೆಯೂ ಅಪ್ರಸ್ತುತ. ದಿಂಗಾಲೇಶ್ವರ ಸ್ವಾಮೀಜಿ ಸ್ವಾರ್ಥಕ್ಕಾಗಿ ಹೀಗೆಲ್ಲ ಮಾಡಬಾರದು. ಒಂದು ವೇಳೆ ಲೋಕಸಭೆಗೆ ಸ್ಪರ್ಧಿಸುವುದೇ ಆದರೆ, ತಮ್ಮ ಮಠದಲ್ಲಿ ಸಭೆ, ಚರ್ಚೆ ನಡೆಸಿಕೊಳ್ಳಲಿ. ಹುಬ್ಬಳ್ಳಿ ಮೂರುಸಾವಿರ ಮಠದ ಪಾವಿತ್ರ್ಯತೆ ಹಾಳುಮಾಡುವುದು ಬೇಡ'' ಎಂದು ಷಡಕ್ಷರಿ ಶ್ರೀ ಹೇಳಿದ್ದಾರೆ.

ತಮ್ಮ ರಾಜಕಿಯ ಅಖಾಡಕ್ಕೆ ಮುರುಸಾವಿರ ಮಠ ಬಳಕೆ ಏಕೆ?: ದಿಂಗಾಲೇಶ್ವರ ಸ್ವಾಮೀಜಿ ತಮ್ಮ ರಾಜಕೀಯ ಅಖಾಡಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠವನ್ನು ಬಳಸಿಕೊಂಡಿದ್ದು ಅಕ್ಷಮ್ಯ. ತಾವು ರಾಜಕೀಯಕ್ಕೆ ಧುಮುಕುವುದಾದರೆ ತಮ್ಮ ಮಠದಲ್ಲಿ ಅಥವಾ ಹುಬ್ಬಳ್ಳಿ ಪ್ರೆಸ್ ಕ್ಲಬ್, ಕಲ್ಯಾಣ ಮಂಟಪ ಹೀಗೆ ಬೇಕಾದಷ್ಟು ಸ್ಥಳಗಳಿದ್ದವು. ಆದರೆ, ಅದೆಲ್ಲವನ್ನು ಬಿಟ್ಟು ಮೂರುಸಾವಿರ ಮಠದಲ್ಲಿ 40 ರಿಂದ 50 ಸ್ವಾಮೀಜಿಗಳ ಜೊತೆ ಸುದ್ದಿಗೋಷ್ಠಿ ನಡೆಸಿದ್ದು ಏಕೆ? ಎಂದು ಷಡಕ್ಷರಿ ಶ್ರೀ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​​ನ ಮೂರನೇ ಪಟ್ಟಿ ಬಿಡುಗಡೆ: ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ, ಕೋಲಾರ ಈಗಲೂ ಪೆಂಡಿಂಗ್ - Karnataka congress third list

ETV Bharat Logo

Copyright © 2024 Ushodaya Enterprises Pvt. Ltd., All Rights Reserved.