ETV Bharat / state

ಲಿಂಗಾಯತರ ಅವನತಿಗಾಗಿ ಹುಟ್ಟಿದ ಶಕ್ತಿಯೇ ಪ್ರಹ್ಲಾದ್ ಜೋಶಿ: ದಿಂಗಾಲೇಶ್ವರ ಸ್ವಾಮೀಜಿ ಆರೋಪ - Dingaleshwar Swamiji - DINGALESHWAR SWAMIJI

ಲಿಂಗಾಯತರ ಅವನತಿಗಾಗಿ ಹುಟ್ಟಿದ ಶಕ್ತಿಯೇ ಪ್ರಹ್ಲಾದ್ ಜೋಶಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪ ಮಾಡಿದ್ದಾರೆ.

LASHED OUT  UNION MINISTER PRAHLAD JOSHI  DHARWAD
ದಿಂಗಾಲೇಶ್ವರ ಸ್ವಾಮೀಜಿ
author img

By ETV Bharat Karnataka Team

Published : Apr 27, 2024, 2:35 PM IST

ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆ ಕಾವು ಏರುತ್ತಿದೆ.‌‌ ಇದರ ಮಧ್ಯೆ ಲೋಕಸಭೆ ಸ್ಪರ್ಧೆಯಿಂದ ಹಿಂದೆ ಸರಿದು ನಾಮಪತ್ರ ವಾಪಸ್​ ಪಡೆದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಪ್ರಹ್ಲಾದ್ ಜೋಶಿ ಅವರನ್ನ ಸೋಲಿಸುವುದೇ ನಮ್ಮ ಧರ್ಮ ಯುದ್ಧ. ಜೋಶಿ ಬೆಳೆಸಿದ ನಾಯಕರನ್ನ ತುಳಿಯುವ ಕೆಲಸ ಮಾಡಿದ್ದಾರೆ. ಕ್ಷೇತ್ರವನ್ನ ಅಭಿವೃದ್ಧಿ ಮಾಡಿಲ್ಲ. ಇಪ್ಪತ್ತು ವರ್ಷಗಳ ಕಾಲ ಇವರು ಏನು ಕೆಲಸ ಮಾಡಿದ್ದಾರೆ ಎಂದು‌ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ವಾಗ್ಧಾಳಿ ನಡೆಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಕೇಂದ್ರದಲ್ಲಿ ನಾಮನಿರ್ದೇಶನವನ್ನ ಎಷ್ಟು ಜನರಿಗೆ ಕೊಡಿಸಿದ್ದಾರೆಂಬುದು ಜೋಶಿ ಹಿಂಬಾಲಕರು ಹೇಳಲಿ. ಜೋಶಿಯವರು ತಂದಿರುವ ಅನುದಾನವನ್ನ ಎಲ್ಲಿ ಹಂಚಿಕೆ ಮಾಡಿದ್ದಾರೆಂಬುದು ಸರ್ವೇ ಮಾಡಲಿ. ಕಳೆದ 15 ವರ್ಷಗಳಿಂದ ಒಂದೇ ಒಂದು ಮಠ ಮಂದಿರಗಳಿಗೆ ಅನುದಾನ ಕೊಟ್ಟಿಲ್ಲ. ಜೋಶಿ ಅವರಿಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.

ನಮ್ಮ ಹಣೆಯ ಮೇಲೆ ಭಸ್ಮ ಹಚ್ಚೋ ಕೆಲಸ ನಾವು ಸಹಿಸಲ್ಲ. ನೀವು ಸಂಸದರ ನಂತರ ಮಠಗಳು, ನಮ್ಮ ಸಮುದಾಯದವರು ಅದಃಫತನವಾಗಿದ್ದಾರೆ. ಜೋಶಿ ಸೋಲಿಸೋದೇ ನಮ್ಮ ಗುರಿ. ಮಠಗಳ ನಡುವೆ ಜೋಶಿ ಒಡೆದಾಳೋ ನೀತಿ ಅನುಸರಿಸುತ್ತಿದ್ದಾರೆ. ಜೋಶಿ ಅವರ ಸೋಲು ಖಚಿತ. ಸರ್ವೆಯಲ್ಲಿ ಇದು ಬಹಿರಂಗವಾಗಿದೆ. ನಿನ್ನೆ ನಮ್ಮ ಹಿರಿಯ ಸ್ವಾಮೀಜಿ ಭೇಟಿ ಮಾಡಿದ್ದಾರೆ. ಭದ್ರಾಪೂರದಲ್ಲಿ ಹಿರಿಯ ಸ್ವಾಮೀಜಿ ಶಿರಹಟ್ಟಿ ಮಠದ ಫಕೀರ ಸಿದ್ದರಾಮ ಸ್ವಾಮೀಜಿಯವರನ್ನು ಭೇಟಿ ಮಾಡಿ ಒಡದಾಳೋ ನೀತಿ ಅನುಸರಿಸುತ್ತಿದ್ದಾರೆ ಎಂದ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಗಂಭೀರ ಆರೋಪ ಮಾಡಿದರು.

ಪ್ರಹ್ಲಾದ್ ಜೋಶಿ ಅನೇಕ ಸ್ವಾಮೀಜಿಗಳನ್ನು ಭೇಟಿ ಮಾಡಿ ಪಾಕೆಟ್ ಕೊಡ್ತಿದಾರೆ. ಸ್ವಾಮೀಜಿಗಳಿಗೆ ಆಮಿಷ ಒಡ್ಡುವ ಕೆಲಸವನ್ನ ಜೋಶಿ ಮಾಡ್ತಾ ಇದ್ದಾರೆ. ನನ್ನ ಕಡೆ ವಿಡಿಯೋ ಇದೆ.‌ ಅವರಿಗೆ ಜನ ಹಾಕಿರೋ ಶಾಲು ಸ್ವಾಮೀಜಿಗಳಿಗೆ ಹಾಕ್ತಿದ್ದಾರೆ. ಲಿಂಗಾಯತರ ಜೊತೆ ಜೋಶಿ ಇದ್ದಾರಾ? ಲಿಂಗಾಯತರ ಅವನತಿಗೆ ಹುಟ್ಟಿರೋ ಶಕ್ತಿ ಇದು. ನಾನು ಯಾವ ಪಕ್ಷದ ಪರ ಇಲ್ಲ, ನನ್ನ ಗುರಿ ಜೋಶಿ ಸೋಲಿಸೋದೆ. ಜೋಶಿ ಅವರು ಮಠಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಜೋಶಿಯವರು ನೇಹಾ ರಕ್ತದ ಮೇಲೆ ಚುನಾವಣೆ ಮಾಡ್ತೀದ್ದಾರೆ. ಜೋಶಿ ಸ್ವಾರ್ಥಿ, ಇದನ್ನು ಜನ ಗಮನಿಸಬೇಕು. ಲಿಂಗಾಯತರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಿಮಗೆ ಆತ್ಮಸಾಕ್ಷಿ, ಮಾನ ಮರ್ಯಾದೆ ಇದ್ರೆ ಯಾಕೆ ನಮ್ಮ ಹಿರಿಯ ಸ್ವಾಮೀಜಿಗಳ ಬಳಿ ಹೋಗುತ್ತಿದ್ದೀರಿ. ಚುನಾವಣೆ ಬಂದಾಗ ಮಾತ್ರ ಸ್ವಾಮೀಜಿಗಳು ಬೇಕು. ನನ್ನ ಹಿರಿಯ ಸ್ವಾಮೀಜಿಗಳಿಂದ ನನ್ನ ಮೇಲೆ ಒತ್ತಡ ಹಾಕಿದ್ದಾರೆ. ನಮ್ಮ ಹಿರಿಯ ಸ್ವಾಮೀಜಿ ಶಿವಯೋಗಿ ಸಿದ್ದರಾಮ ಮಹಾಸ್ವಾಮಿಗಳನ್ನ ಜೋಶಿ ಪದೇ ಪದೆ ಭೇಟಿ ಮಾಡುತ್ತಿದ್ದಾರೆ.
ನಮ್ಮ ಗುರು ಶಿಷ್ಯರನ್ನು ಅಗಲಿಸೋ ಕೆಲಸ ಮಾಡ್ತಿದ್ದಾರೆ. ನೀವು ನಮ್ಮ ಗುರು ಶಿಷ್ಯರನ್ನು ಅಗಲಿಸಿದ್ರೆ, ನಾವು ನಿಮ್ಮ ದಂಪತಿ ಅಗಲಿಸುವ ಕಾಲ ಬಂದೀತು ಎಂದು ಎಚ್ಚರಿಕೆ ನೀಡಿದರು.

ಪ್ರಹ್ಲಾದ್ ಜೋಶಿ 20 ವರ್ಷದಲ್ಲಿ ಮಾಡಿದ್ದು ಲಿಂಗಾಯತರು, ಹಿಂದುಳಿದವರುನ್ನು ತುಳಿದಿದ್ದು ದೊಡ್ಡ ಸಾಧನೆ. ಅವರ ಹಿಂಬಾಲಕರು ಉತ್ತರಿಸಲಿ. ಜೋಶಿ ಅಧಿಕಾರದಲ್ಲಿ ತಮ್ಮ ಸಮಾಜದ ಎಷ್ಟು ಜನಕ್ಕೆ ಕೆಲಸಕ್ಕೆ ಸೇರಿಸಿದ್ರು. ಇತರ ಸಮಾಜದ ಜನರನ್ನು ಕೆಲಸಕ್ಕೆ ಸೇರಿಸಿದ್ರು. ಇದನ್ನು ಬಹಿರಂಗ ಮಾಡಲಿ. ಹುಚ್ಚು ಸಾಹಸ ಕೈ ಬಿಡಬೇಕು. ನೀವು ಸಂಸದರಾದ ಮೇಲೆ‌ ನಮ್ಮ‌ ಸಂಸ್ಕೃತಿ, ಪರಂಪರೆ ನಾಶ ಆಗಿದೆ. ಮಠಗಳ ಪರಂಪರೆಯ ನಾಶ ಮಾಡಿದ್ದೀರಿ ಎಂದು ವಾಗ್ಧಾಳಿ ನಡೆಸಿದರು.

ಓದಿ: ನಮ್ಮ ನಿರೀಕ್ಷೆಗೂ ಮೀರಿ 14 ಕ್ಷೇತ್ರಗಳ ಚುನಾವಣೆ ನಡೆದಿದೆ: ಬಿ.ವೈ. ವಿಜಯೇಂದ್ರ - Lok Sabha election 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.