ETV Bharat / state

ಪರಿಹಾರ ನೀಡಲು ವಿಳಂಬ: 20 ಕೋಟಿ ಠೇವಣಿ ಇಡುವಂತೆ ಬೆಳಗಾವಿ ಪಾಲಿಕೆಗೆ ಧಾರವಾಡ ಹೈಕೋರ್ಟ್ ಪೀಠ ಆದೇಶ - Dharwada HC bench orders - DHARWADA HC BENCH ORDERS

ಸ್ಮಾರ್ಟ್‌ ಸಿಟಿ ಯೋಜನೆಯಡಿ ಪಾಲಿಕೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂಮಾಲೀಕರಿಗೆ ಪರಿಹಾರ ನೀಡುವಂತೆ 2021ರಲ್ಲೇ ಧಾರವಾಡ ಹೈಕೋರ್ಟ್ ಪೀಠ ಆದೇಶಿಸಿತ್ತು. ಆದರೆ ಇಲ್ಲಿಯವರೆಗೆ ನೀಡದೇ ಇರುವುದರಿಂದ ಪರಿಹಾರ ಕುರಿತು ದೂರುದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

Belagavi Municipal Corporation
ಬೆಳಗಾವಿ ಮಹಾನಗರ ಪಾಲಿಕೆ (ETV Bharat)
author img

By ETV Bharat Karnataka Team

Published : Aug 24, 2024, 7:56 AM IST

20 ಕೋಟಿ ಠೇವಣಿ ಇಡುವಂತೆ ಬೆಳಗಾವಿ ಪಾಲಿಕೆಗೆ ಧಾರವಾಡ ಹೈಕೋರ್ಟ್ ಪೀಠ ಆದೇಶ (ETV Bharat)

ಬೆಳಗಾವಿ: ರಾಜ್ಯ ರಾಜಕಾರಣದ ಪ್ರಮುಖ ಶಕ್ತಿ ಕೇಂದ್ರ ಬೆಳಗಾವಿ. ಅಧಿಕಾರಿಗಳ ಯಡವಟ್ಟಿನಿಂದ ಇಲ್ಲಿನ ಮಹಾನಗರ ಪಾಲಿಕೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ರಸ್ತೆ ಕಾಮಗಾರಿ ಭೂಸ್ವಾಧೀನ ವಿಚಾರದಲ್ಲಿ ಅಧಿಕಾರಿಗಳ ತಪ್ಪು ನಿರ್ಧಾರದಿಂದಾಗಿ 20 ಕೋಟಿ ರೂ. ಪರಿಹಾರ ಮೊತ್ತವನ್ನು ಠೇವಣಿ ಇಡುವಂತೆ ಬೆಳಗಾವಿ ಮಹಾನಗರ ಪಾಲಿಕೆಗೆ ಧಾರವಾಡ ಹೈಕೋರ್ಟ್ ಪೀಠ ಆದೇಶ ನೀಡಿದೆ.

2021ರಲ್ಲಿ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಪಿಬಿ ರಸ್ತೆಯವರೆಗೆ ರಸ್ತೆ ಅಗಲೀಕರಣಕ್ಕೆ ಭೂಮಿಯನ್ನು ಪಾಲಿಕೆ ಸ್ವಾಧೀನ ಪಡಿಸಿಕೊಂಡಿತ್ತು. ಈ ಭೂಮಿಗೆ ನಿಯಾಮಾನುಸಾರ ಮಾಲೀಕರಿಗೆ ಪರಿಹಾರ ನೀಡುವಂತೆ 2021ರಲ್ಲೇ ಧಾರವಾಡ ಹೈಕೋರ್ಟ್ ಪೀಠ ಆದೇಶಿಸಿತ್ತು. 2023ರಲ್ಲಿಯೇ ಬೆಳಗಾವಿ ಉಪವಿಭಾಗಾಧಿಕಾರಿಗಳು ಆರು ತಿಂಗಳ ಒಳಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಅಫಿಡವಿಟ್ ಸಲ್ಲಿಸಿದ್ದರು. ಆದರೆ, ಇಲ್ಲಿಯವರೆಗೂ ಪೂರ್ಣಗೊಳ್ಳದಿರುವುದು, ಪರಿಹಾರ ಕುರಿತು ದೂರುದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದಾಗಿ ಪಾಲಿಕೆ ಅಧಿಕಾರಿಗಳು ನ್ಯಾಯಾಂಗ ನಿಂದನೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

2021ರಲ್ಲೇ ಸ್ವಾಧೀನಪಡಿಸಿಕೊಂಡ ಆಸ್ತಿಗಳಿಗೆ 20 ಕೋಟಿ ರೂ. ಪರಿಹಾರ ನೀಡಲು ಅನುದಾನ ಕೊರತೆ ಉಂಟಾಗಿದ್ದು, ಸರ್ಕಾರ ಹಂತದಲ್ಲಿಯೇ ಬಿಡುಗಡೆ ಮಾಡಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆದರೆ, ಸರ್ಕಾರ 2022ರಲ್ಲಿ ಪಾಲಿಕೆಯಿಂದಲೇ ಭೂ ಪರಿಹಾರ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಇದರಿಂದಾಗಿ ಕಂಗೆಟ್ಟಿರುವ ಪಾಲಿಕೆಗೆ ಪರಿಹಾರದ ಮೊತ್ತ ನೀಡಲು ಆರ್ಥಿಕ ಸಂಕಷ್ಟ ಎದುರಾಗಿದೆ. ಅಲ್ಲದೆ, ಈ ಕುರಿತು ಚರ್ಚಿಸಲು ಆ.27ರಂದು ತುರ್ತು ಪರಿಷತ್ ಸಭೆ ಕೂಡ ಕರೆಯಲಾಗಿದೆ.

ಮನೆ ಕಳೆದುಕೊಂಡ ಕಾಡಯ್ಯ ವಿಭೂತಿಮಠ ಮಾಧ್ಯಮಗಳ ಜೊತೆಗೆ ಮಾತನಾಡಿ, "ನಮಗೆ ನೋಟಿಸ್ ಕೂಡ ನೀಡದೇ ಏಕಾಏಕಿ ಬಂದು ಜೆಸಿಬಿ ಮೂಲಕ ನಮ್ಮ ಮನೆ ಕೆಡವಿದರು. ಹಿಂದೆ ಇದ್ದ ಪಾಲಿಕೆ ಆಯುಕ್ತರು, ಬುಡಾ ಆಯುಕ್ತರು, ಸ್ಮಾರ್ಟ್ ಸಿಟಿ ಎಂಡಿ ಇವರೆಲ್ಲಾ ಸೇರಿಕೊಂಡು ನಮಗೆ ಅನ್ಯಾಯ ಮಾಡಿದ್ದಾರೆ. ಈಗ ಹೈಕೋರ್ಟ್ ಆದೇಶದ ಪ್ರಕಾರ ನಮ್ಮ ಜಾಗ ನಾವು ಕಬ್ಜಾ ಮಾಡಿಕೊಂಡಿದ್ದೇವೆ. ಕಟ್ಟಡ ಕೆಡವಿದ್ದು ಮತ್ತು ರಸ್ತೆಗೆ ಹೋಗಿರುವ ಜಾಗಕ್ಕೆ ಪರಿಹಾರ ಕೊಡಬೇಕಿದೆ. ಈಗ ಕೋರ್ಟ್ 20 ಕೋಟಿ ಠೇವಣಿಗೆ ಆದೇಶಿಸಿದೆ. ಇನ್ನೂ ಆರು ಜನರದ್ದು ಸೇರಿ ಅಂದಾಜು 45 ಕೋಟಿ ಆಗುತ್ತದೆ. ವೈಯಕ್ತಿಕವಾಗಿ ನನಗೆ 1.5 ಕೋಟಿ ಬರಬೇಕಿದೆ. ಅದು ಸಿಗೋವರೆಗೂ ಕಾನೂನು ಹೋರಾಟ ಮುಂದುವರಿಸುತ್ತೇವೆ" ಎಂದು ಹೇಳಿದರು.

27ರ ಸಭೆಯತ್ತ ಎಲ್ಲರ ಚಿತ್ತ: ಧಾರವಾಡ ಹೈಕೋರ್ಟ್ ಆದೇಶ ಸಂಬಂಧ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಚರ್ಚಿಸಲು ಇದೇ 27ರಂದು ಮಹಾನಗರ ಪಾಲಿಕೆ ತುರ್ತು ಸಭೆ ಕರೆದಿದ್ದು, ಸಭೆಯಲ್ಲಿ ಏನು ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ಸದ್ಯ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿಗಳ ಬಗ್ಗೆ ಆಕ್ಷೇಪಣೆ: ಹು-ಧಾ ಪಾಲಿಕೆ ಆಯುಕ್ತರು ಹೇಳಿದ್ದೇನು? - Hubballi Smart City Projects

ETV Bharat Logo

Copyright © 2025 Ushodaya Enterprises Pvt. Ltd., All Rights Reserved.