ETV Bharat / state

ನಿನ್ನೆ ನನ್ನಿಂದ ಒತ್ತಾಯಪೂರ್ವಕವಾಗಿ ಹೇಳಿಕೆ ಕೊಡಿಸಿದ್ದಾರೆ: ಮುರುಘಾಮಠದ ಸ್ವಾಮೀಜಿಯಿಂದ ಮತ್ತೊಂದು ಸ್ಪಷ್ಟನೆ - Mallikarjuna Swamiji - MALLIKARJUNA SWAMIJI

ನಿನ್ನೆ ಕೆಲವರು ಮಠಕ್ಕೆ ಬಂದು ನನ್ನ ಮೇಲೆ ಒತ್ತಡ ಹೇರಿ, ಅವರೇ ಬರೆದುಕೊಂಡ ಬಂದ ಪತ್ರಕ್ಕೆ ನನ್ನ ಸಹಿ ಹಾಕಿಸಿ, ನನ್ನಿಂದ ಓದಿಸಿದ್ದಾರೆ ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತೊಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

dharwad-muruga-mutt-mallikarjuna-swamiji-gives-one-more-clarification-over-his-statement
ನಿನ್ನೆ ನನ್ನಿಂದ ಒತ್ತಾಯಪೂರ್ವಕವಾಗಿ ಹೇಳಿಕೆ ಕೊಡಿಸಿದ್ದಾರೆ: ಮುರುಘಾಮಠದ ಸ್ವಾಮೀಜಿಯಿಂದ ಮತ್ತೊಂದು ಸ್ಪಷ್ಟನೆ
author img

By ETV Bharat Karnataka Team

Published : Mar 29, 2024, 4:55 PM IST

Updated : Mar 29, 2024, 5:22 PM IST

ಮುರುಘಾಮಠದ ಸ್ವಾಮೀಜಿಯಿಂದ ಮತ್ತೊಂದು ಸ್ಪಷ್ಟನೆ

ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ನೀಡಿರುವ ಹೇಳಿಕೆಗೆ ಮುರುಘಾಮಠದ ಸ್ವಾಮೀಜಿ ನಿನ್ನೆ ಸ್ಪಷ್ಟನೆ ನೀಡಿದ್ದರು. ಈಗ ಅವರು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, ಕೆಲವರು ನನ್ನಿಂದ ಒತ್ತಾಯಪೂರ್ವಕವಾಗಿ ಹೇಳಿಕೆ ಕೊಡಿಸಿದ್ದಾರೆ ಎಂದಿದ್ದಾರೆ.

ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದೇನು?: "ಎರಡು ದಿನಗಳ ಹಿಂದೆ ನಾನು ಹುಬ್ಬಳ್ಳಿಯಲ್ಲಿ ನಡೆದ ಮಠಾಧೀಶರ ಚಿಂತನಾ-ಮಂಥನಾ ಸಭೆಯಲ್ಲಿ ಭಾಗವಹಿಸಿದ್ದೆ. ಆ ಸಭೆಯಲ್ಲಿ ಮಠಾಧೀಶರು ತೆಗೆದುಕೊಂಡ ನಿರ್ಣಯಕ್ಕೆ ಅನುಮೋದನೆ ನೀಡಿದ್ದೆ. ನಿನ್ನೆ(ಗುರುವಾರ) ನನಗೆ ಆರೋಗ್ಯ ಸಮಸ್ಯೆಯಿದ್ದ ಕಾರಣ ನಾನು ಹೆಚ್ಚು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಈ ವೇಳೆ ಕೆಲವರು ಮಠಕ್ಕೆ ಬಂದು ನನ್ನ ಮೇಲೆ ಒತ್ತಡ ಹೇರಿ, ಅವರೇ ಬರೆದುಕೊಂಡ ಬಂದ ಪತ್ರಕ್ಕೆ ನನ್ನ ಸಹಿ ಹಾಕಿಸಿ, ನನ್ನಿಂದ ಓದಿಸಿದ್ದಾರೆ. ಒತ್ತಾಯಪೂರ್ವಕವಾಗಿ ನೀಡಿದ ಈ ಹೇಳಿಕೆಯನ್ನು ಸಮಾಜದ ಹಿತದೃಷ್ಟಿಯಿಂದ ನಾನು ಹಿಂಪಡೆಯುತ್ತೇನೆ" ಎಂದು ಹೇಳಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ಮುರುಘಾಮಠ ಸ್ವಾಮೀಜಿ ನಿನ್ನೆ ನೀಡಿದ್ದ ಸ್ಪಷ್ಟನೆ: "ಬಿಜೆಪಿ ಲೋಕಸಭಾ ಅಭ್ಯರ್ಥಿ ಪ್ರಲ್ಲಾದ್ ಜೋಶಿ ಕುರಿತು ದಿಂಗಾಲೇಶ್ವರ ಸ್ವಾಮಿಗಳ ವಿವಾದಾತ್ಮಕ ವೈಯಕ್ತಿಕ ಹೇಳಿಕೆಗೂ ಧಾರವಾಡ ಪ್ರತಿಷ್ಠಿತ ಶ್ರೀ ಮುರುಘಾ ಮಠಕ್ಕೂ ಯಾವುದೇ ಸಂಬಂಧವಿಲ್ಲ ಹಾಗೂ ನಮಗೂ ಒಮ್ಮತವಿಲ್ಲ'' ಎಂದು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ನಿನ್ನೆ ಅಧಿಕೃತ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದರು.

''ಪ್ರತಿಷ್ಠಿತ ಶ್ರೀ ಮುರುಘಾ ಮಠ ಲೋಕಕಲ್ಯಾಣಾರ್ಥ ಸ್ಥಾಪನೆಯಾಗಿದೆ. ಮಠದ ಹಿರಿಯ ಶ್ರೀಗಳಾದ ಮದಥಣಿ ಶ್ರೀಗಳು, ಮೃತ್ಯುಂಜಯ ಅಪ್ಪಗೊಳ, ಮಹಾಂತ ಅಪ್ಪಗೊಳ ಹಾಗೂ ಹಲವಾರು ಧೀಮಂತರ ಹಾಗೂ ಭಕ್ತಾಧಿಗಳ ಪರಿಶ್ರಮದ ಫಲದಿಂದ ಸ್ಥಾಪಿತ ಹಾಗೂ ಸರ್ವಸಮಾಜದ ಭಕ್ತರು ನಡೆದುಕೊಳ್ಳುವ ಪವಿತ್ರ ಕ್ಷೇತ್ರವಾಗಿದೆ. ಶ್ರೀ ಕ್ಷೇತ್ರ ವಿದ್ಯಾದಾನ ದಾಸೋಹಕ್ಕೆ ಹಾಗೂ ಸರ್ವಸಮಾಜದ ಏಳಿಗೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ವೀರಶೈವ ಲಿಂಗಾಯತ ಮಠವಾಗಿದೆ. ಸಹ ಸರ್ವ ಸಮಾಜದ ಭಕ್ತರು ಗದ್ದುಗೆಯ ಆರಾಧಕರಿದ್ದು, ಮಠ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ'' ಎಂದು ತಿಳಿಸಿದ್ದರು.

"ಮಠವು ರಾಜಕೀಯ ವಿಷಯಗಳಲ್ಲಿ ಭಾಗವಹಿಸುವುದಿಲ್ಲ. ಯಾವುದೇ ಅಭ್ಯರ್ಥಿ ಆಯ್ಕೆ ಆಯಾ ಪಕ್ಷದ ವರಿಷ್ಠರು ಹಾಗೂ ಅವರ ಪಕ್ಷದ ತೀರ್ಮಾನ. ಇದಕ್ಕೂ ಮಠಮಾನ್ಯಗಳಿಗೂ ಯಾವುದೇ ಸಂಬಂಧವಿಲ್ಲ. ಮಾರ್ಚ್ 27ರಂದು ದಿಂಗಾಲೇಶ್ವರ ಸ್ವಾಮೀಜಿ ಮೂರುಸಾವಿರ ಮಠದಲ್ಲಿ ಸ್ವಾಮಿಗಳ ಸಭೆ ಎಂದು ಮಠಕ್ಕೆ ಕರೆದು ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಲ್ಲಾದ್ ಜೋಶಿಯವರ ಬದಲಾವಣೆ ಕುರಿತು ನೀಡಿದ ಹೇಳಿಕೆ ಶ್ರೀ ದಿಂಗಾಲೇಶ್ವರ ಸ್ವಾಮಿಗಳ ವೈಯಕ್ತಿಕ ಹೇಳಿಕೆಯಾಗಿದೆ. ಈ ಹೇಳಿಕೆ ವಿವಾದಾತ್ಮಕವಾಗಿದ್ದು, ಇದಕ್ಕೂ ನಮಗೂ ಹಾಗೂ ಮುರುಘಾ ಮಠಕ್ಕೆ ಯಾವುದೇ ಸಂಬಂಧವಿಲ್ಲ" ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಬಿಜೆಪಿ - ಜೆಡಿಎಸ್ ಸಮ್ಮಿಶ್ರ ಸರ್ಕಾರ ತರಲು ಈ ಮೈತ್ರಿ ವೇದಿಕೆಯಾಗಬೇಕು: ಹೆಚ್​ಡಿಕೆ ಕರೆ - JDS and BJP meeting

Last Updated : Mar 29, 2024, 5:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.