ETV Bharat / state

"ಭಕ್ತರಿಗೆ ಈ ಕೆಟ್ಟ ವ್ಯವಸ್ಥೆಯಿಂದ ಪರಿಹಾರ ಕೊಡು ತಂದೆ": ನಂಜುಂಡೇಶ್ವರನ ಹುಂಡಿಗೆ ಭಕ್ತರಿಂದ ಪತ್ರಗಳ ಸುರಿಮಳೆ - devotees letter to God

author img

By ETV Bharat Karnataka Team

Published : Aug 7, 2024, 1:48 PM IST

ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವರ ಹುಂಡಿಯಲ್ಲಿ ಹಣದ ಜತೆ ಭಕ್ತರ ಪತ್ರವೂ ದೊರಕಿದೆ.

ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯ
ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯ (ETV Bharat)

ಮೈಸೂರು: ದಕ್ಷಿಣಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸುವ ನಂಜುಂಡೇಶ್ವರನಿಗೆ ಈ ಬಾರಿ ಪರಮ ಭಕ್ತರಿಂದ ಪತ್ರಗಳೂ ಸಹ ಸಲ್ಲಿಕೆಯಾಗಿದೆ. "ನಿನ್ನ ನೋಡಲು ಬರುವ ಲಕ್ಷಾಂತರ ಭಕ್ತರಿಗೆ ದೇವಾಲಯದ ಕೆಟ್ಟ ಅವ್ಯವಸ್ಥೆಯಿಂದ ಪರಿಹಾರ ನೀಡುವಂತೆ" ಪತ್ರ ಬರೆದಿದ್ದಾರೆ. ಹುಂಡಿ ಎಣಿಕೆ ವೇಳೆ ಅಧಿಕಾರಿಗಳಿಗೆ ಪತ್ರ ದೊರೆತಿದೆ.

ದೇವರಿಗೆ ಭಕ್ತರು ಬರೆದಿರುವ ಪತ್ರ
ದೇವರಿಗೆ ಭಕ್ತರು ಬರೆದಿರುವ ಪತ್ರ (ETV Bharat)

ಒಂದು ಪತ್ರದಲ್ಲಿ "ನನ್ನ ತಾತ, ನನ್ನ ತಂದೆ ನಾನು ಹಾಗೂ ನನ್ನ ಮಗ ಎಲ್ಲರೂ ನಿನ್ನ ಭಕ್ತರೇ. ಬಹಳ ದೂರದಿಂದ ನಿನ್ನ ಕಾಣಲು ಪ್ರತಿ ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಬರುತ್ತೇವೆ. ತಂದೆ ನಿನ್ನ ದರುಶನದಿಂದ ನಮ್ಮ ಕಷ್ಟಗಳೆಲ್ಲಾ ದೂರವಾಗಿದೆ ಒಡೆಯ. ಆದರೆ, ನಿನ್ನ ನೋಡಲು ಬರುವಾಗ ತುಂಬಾ ಕಷ್ಟವಾಗುವುದು. ರಾತ್ರಿ ಮಲಗುವುದಕ್ಕೆ ಚಿಕ್ಕ ಜಾಗವೂ ಇರುವುದಿಲ್ಲ. ಬೆಳಗ್ಗೆ ಸ್ನಾನಕ್ಕೆ ಕಪಿಲಾ ನದಿಗೆ ಹೋದರೆ ಎಲ್ಲಿ ನೋಡಿದರೂ ಕಸ ಕಸ ಕಸ. ಹೆಂಗೋ ಸ್ನಾನ ಮಾಡಿದರೆ ನನ್ನ ಮಡದಿಗೆ, ತಾಯಿಗೆ ಬಟ್ಟೆ ಬದಲಿಸಲೂ ಜಾಗವಿಲ್ಲ. ಉರುಳು ಸೇವೆ ಮಾಡಲು ವ್ಯವಸ್ಥೆ ಇಲ್ಲ. ಇನ್ನೂ ಅನೇಕ ತೊಂದರೆಗಳು ಈ ಬಗ್ಗೆ ಅಧಿಕಾರಿಗಳಿಗೆ, ರಾಜಕಾರಿಣಿಗಳಿಗೆ ಪತ್ರ ಬರೆದು ಸಾಕಾಗಿದೆ. ಕೊನೆಯದಾಗಿ ನಿನಗೆ ನನ್ನ ಪತ್ರ ಬರೆದಿದ್ದೇನೆ. ನಿನ್ನ ಸನ್ನಿಧಿಗೆ ಬರುವ ನಮ್ಮಂತಹ ಲಕ್ಷಾಂತರ ಭಕ್ತರಿಗೆ ಈ ಕೆಟ್ಟ ವ್ಯವಸ್ಥೆಯಿಂದ ಪರಿಹಾರ ಕೊಡು ತಂದೆ. ಇಂತಿ ನಿನ್ನ ಪರಮ‌ಭಕ್ತ" ಎಂದು ಬರೆದಿದ್ದಾರೆ.

ಎರಡನೇ ಪತ್ರದಲ್ಲಿ, "ಅಸಂಖ್ಯಾತ ಭಕ್ತರನ್ನು ಹೊಂದಿರುವ ನಿನಗೆ ಪ್ರತಿ ತಿಂಗಳು ಕೋಟ್ಯಂತರ ಹಣ ನಿನ್ನ ಮಡಿಲಿಗೆ ಹಾಕುತ್ತಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರಿಗೆ ಆಡಳಿತ ಮಂಡಳಿಯಿಂದ ಮೂಲ ಸೌಕರ್ಯ ದೊರೆಯುತ್ತಿಲ್ಲ ಎಂಬ ಯಾತನೆ ಹಾಗೂ ತಳಮಳ ತರುವ ವಿಷಯವಾಗಿದೆ. ಭಕ್ತರು ತಂಗಲು ವ್ಯವಸ್ಥೆ ಇಲ್ಲ ಎಂಬ ಕೊರಗು ಇದೆ. ಇನ್ನು ದೇವಾಲಯದ ಸಿಬ್ಬಂದಿಗಳು ಭಕ್ತರನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ಅವರಿಗೆ ಒಳ್ಳೆಯ ಬುದ್ದಿ ಕೊಡು. ಭಕ್ತರಿಂದ ಸಂಗ್ರಹವಾಗುವ ದೇಣಿಗೆ ಹಣದಲ್ಲಿ ವಸತಿ ಸಂಕೀರ್ಣ ನಿರ್ಮಿಸುವುದಾಗಿ ಹೇಳಿದ್ದರು. ಇದೀಗ ವಸತಿ ಸಂಕೀರ್ಣಕ್ಕೆ ಜಾಗವಿಲ್ಲ ಎಂದು ಹೇಳುತ್ತಿರುವ ಆಡಳಿತ ಮಂಡಳಿಗೆ ವಸತಿ ಸಂಕೀರ್ಣ ನಿರ್ಮಿಸಲು ಪ್ರೇರಣೆ ನೀಡು ಹಾಗೂ ವಿವೇಕ ನೀಡು. ವಿಶೇಷ ದಿನಗಳಲ್ಲಿ ಬರುವ ಭಕ್ತರು ಪಡುವ ಕಷ್ಟಗಳನ್ನು ಅಧಿಕಾರಿಗಳು ನೋಡಿದರೆ ಅವರಿಗೆ ವಾಸ್ತವಾಂಶ ಅರಿವಾಗಲಿದೆ. ಹಾಗಾಗಿ ತುರ್ತಾಗಿ ವಸತಿ ಸಂಕೀರ್ಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲು ಅವರಿಗೆ ಬುದ್ಧಿ ಕೊಡು ಎಂದು ಶ್ರೀಕಂಠೇಶ್ವರನಾದ ನಿಮ್ಮ ಬಳಿ ಪ್ರಾರ್ಥಿಸಿಕೊಳ್ಳುತ್ತೇನೆ. ಇಂತಿ ಪರಮ ಭಕ್ತ" ಎಂದು ಬರೆದಿದ್ದಾರೆ.

ನಂಜುಂಡೇಶ್ವರನ ಹುಂಡಿಯಲ್ಲಿ ದೊರಕಿರುವ ಪತ್ರ, ಭಕ್ತರ ಮನವಿ ಅಧಿಕಾರಿಗಳು ಹಾಗೂ ರಾಜಕಾರಿಣಿಗಳ ಕಣ್ಣು ತೆರೆಸಲಿದೆಯೇ ಎಂಬುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರನಿಗೆ ₹1.12 ಕೋಟಿ ಕಾಣಿಕೆ - Nanjundeshwar Hundi Counting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.