ETV Bharat / state

ಡೆಂಗ್ಯೂ ಪ್ರಕರಣ ಹೆಚ್ಚಳ: ಸ್ಲಂ‌ ನಿವಾಸಿಗಳಿಗೆ ಉಚಿತ ಸೊಳ್ಳೆ ಪರದೆ ನೀಡಲು ಸಿಎಂ ಸೂಚನೆ - Dengue Case Spread

author img

By ETV Bharat Karnataka Team

Published : Jul 9, 2024, 8:55 PM IST

Updated : Jul 9, 2024, 9:01 PM IST

ಡೆಂಗ್ಯೂ ಪ್ರಕರಣಗಳ ಹೆಚ್ಚಳ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಸ್ಲಂ‌ ನಿವಾಸಿಗಳಿಗೆ ಉಚಿತ ಸೊಳ್ಳೆ ಪರದೆ ನೀಡಲು ಸೂಚನೆ ನೀಡಿದ್ದಾರೆ. ಅಲ್ಲದೇ ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ಪ್ರತಿದಿನ ಪರಿಶೀಲನೆ ನಡೆಸುವಂತೆಯೂ ಹೇಳಿದ್ದಾರೆ.

CM MEETING WITH OFFICIALS
ಡೆಂಗ್ಯೂ ಪ್ರಕರಣಗಳ ಹಚ್ಚಳ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ (ETV Bharat)

ಬೆಂಗಳೂರು: ಡೆಂಗ್ಯೂ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೊಳೆಗೇರಿ ನಿವಾಸಿಗಳಿಗೆ ಉಚಿತ ಸೊಳ್ಳೆ ಪರದೆ ವಿತರಿಸಲು ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು ಇಲ್ಲಿವರೆಗೆ 7,362 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 303 ಸಕ್ರಿಯ ಡೆಂಗ್ಯೂ ಪ್ರಕರಣಗಳಿವೆ. ಈವರೆಗೆ ರಾಜ್ಯದಲ್ಲಿ 7 ಡೆಂಗ್ಯೂನಿಂದ ಸಾವುಗಳಾಗಿವೆ. ಸ್ಲಂ ನಿವಾಸಿಗಳಿಗೆ ಉಚಿತ ಸೊಳ್ಳೆ ಪರದೆ ನೀಡಲು ಸೂಚನೆ ನೀಡಲಾಗಿದೆ. ಎಲ್ಲಿ ಸೊಳ್ಳೆಗಳು ಹೆಚ್ಚಿರುತ್ತವೆ ಅಲ್ಲಿ ಉಚಿತ ಸೊಳ್ಳೆ ಪರದೆ ನೀಡಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದರು.

ತಾಂತ್ರಿಕ ಸಮಿತಿ ಸಭೆಯಲ್ಲಿ ಸೊಳ್ಳೆಗಳ ನಾಶ ಮಾಡುವ ಕೆಲಸ ಆಗಬೇಕೆಂದು ಸೂಚನೆ ನೀಡಿದ್ದೇವೆ.‌ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್‌ ಸಜ್ಜುಗೊಳಿಸಬೇಕು. ಮೆಡಿಕಲ್‌ ಕಾಲೇಜುಗಳಲ್ಲಿಯೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಡೆಂಗ್ಯೂ ಪತ್ತೆಗೆ ಪರೀಕ್ಷೆ ಹೆಚ್ಚಿಸಬೇಕು. ಡೆಂಗ್ಯೂ ಪಾಸಿಟಿವ್‌ ಇರುವ ವ್ಯಕ್ತಿಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಬೇಕು. ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ ಫೋರ್ಸ್‌ ರಚಿಸಬೇಕು. ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ನಿತ್ಯ ಪರಿಶೀಲನೆ ನಡೆಸಬೇಕು. ಯಾವುದೇ ರೀತಿಯ ಉದಾಸೀನ ಪ್ರವೃತ್ತಿಯನ್ನು ಸಹಿಸುವುದಿಲ್ಲ ಎಂದು ಮನವರಿಕೆ ಮಾಡಿಕೊಡಲಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಒಂದೂ ಸಾವು ಆಗದಂತೆ ಕ್ರಮವಹಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.

ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಸೂಚನೆ: ರಾಜ್ಯದಲ್ಲಿ 4,37,23,911 ಜನರು ಬಿಪಿಎಲ್‌ ಕಾರ್ಡ್‌ ಸೌಲಭ್ಯ ಪಡೆಯುತ್ತಿದ್ದಾರೆ. ಬಿಪಿಎಲ್‌ ಅಡಿಯಲ್ಲಿ 1.27 ಕೋಟಿ ಬಿಪಿಎಲ್‌ ಕುಟುಂಬಗಳಿವೆ. ಹೊಸ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿ ಬಾಕಿಯಿವೆ. ಈ ಕುರಿತು ಪರಿಶೀಲನೆ ನಡೆಸಿ, ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆ ತ್ವರಿತಗೊಳಿಸಬೇಕು. ಒಟ್ಟಾರೆ ಸಾರಾಂಶ ಒಬ್ಬ ಅರ್ಹರೂ ಬಿಟ್ಟು ಹೋಗಬಾರದು. ಅನರ್ಹರು ಸವಲತ್ತು ಪಡೆಯಬಾರದು. ಈ ಕುರಿತು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಕರ್ತವ್ಯಲೋಪ ಮಾಡುವವರಿಗೆ ಕಿವಿ ಹಿಂಡುತ್ತೇವೆ: ಸರ್ಕಾರ ಮಾಡಿದ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜನರಿಗೆ ತಲುಪಲು ಡಿಸಿ, ಸಿಇಒ ಮತ್ತು ಎಸ್​​ಪಿ ಅಧಿಕಾರಿಗಳು ಮುಖ್ಯ. ಯಾರು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಾರೆ ಅವರಿಗೆ ಬೆನ್ನು ತಟ್ಟುವ ಕೆಲಸ ಮಾಡುತ್ತೇವೆ. ಯಾರು ಕರ್ತವ್ಯ ಲೋಪ ಮಾಡುವವರಿಗೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದರು.

ಸುಮಾರು 30 ಇಲಾಖೆಗಳು 68 ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಎಲ್ಲೆಲ್ಲಿ ನ್ಯೂನತೆ ಇದೆ ಅದನ್ನು ಪ್ರಸ್ತಾಪಿದ್ದೇನೆ. ಈ ಬಾರಿ ಎಲ್ಲ ಕಡೆ ಉತ್ತಮ ಮಳೆಯಾಗುತ್ತಿದೆ.‌ ಜಲಾಶಯಗಳು ತುಂಬುತ್ತಿವೆ. ಮುಂಗಾರಿನಲ್ಲಿ 82 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಬಿತ್ತನೆ ಮಾಡಬೇಕಾಗಿದೆ.‌ ಇಲ್ಲಿವರೆಗೆ 52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಆಗಸ್ಟ್ ಮೊದಲ ವಾರದವರೆಗೆ ಬಿತ್ತನೆ ನಡೆಯಲಿದೆ. ರಾಜ್ಯದಲ್ಲಿ ಯಾವ ರೈತರಿಗೂ ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕದ ತೊಂದರೆ ಆಗಿಲ್ಲ. ಯಾವ ಕಾರಣಕ್ಕೂ ರೈತರಿಗೆ ಬೀಜ, ಗೊಬ್ಬರ ಕೊರತೆ ಆಗಬಾರದು ಎಂದು ಸಚಿವರಿಗೆ ಸೂಚನೆ ನೀಡಿದ್ದೇನೆ ಎಂದರು.

ಅಣೆಕಟ್ಟಿನಲ್ಲಿ 50% ನೀರು ಸಂಗ್ರಹವಾಗಿದೆ. ಈ ಬಾರಿ ಎಲ್ಲಾ ಡ್ಯಾಂಗಳು ತುಂಬುವ ಭರವಸೆ ಇದೆ. ಕರಾವಳಿ, ಮಲೆನಾಡು ಪ್ರದೇಶದ 175 ತಾಲೂಕುಗಳ 1,247 ಗ್ರಾಮ ಪಂಚಾಯತಿ ವ್ಯಾಪ್ತಿಯ 2,225 ಗ್ರಾಮಗಳಲ್ಲಿ ಪ್ರವಾಹಕ್ಕೆ ತುತ್ತಾಗುವ ಹಳ್ಳಿಗಳಲ್ಲಿ 20.38 ಲಕ್ಷ ಜನರು ಪ್ರವಾಹ ಪೀಡಿತರಾಗಿರುತ್ತಾರೆ.‌ ಬಿಬಿಎಂಪಿಯಲ್ಲಿ 201 ಸ್ಥಳಗಳನ್ನು ಪ್ರವಾಹ ಪೀಡಿತ ಸ್ಥಳವಾಗಿ ಗುರುತು ಮಾಡಲಾಗಿದೆ. ಪ್ರವಾಹದಿಂದ ಈ ಬಾರಿ ಯಾರಿಗೂ ವಿಪತ್ತು ಆಗಬಾರದು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಸನ್ನದ್ದರಾಗಿರುವಂತೆ ಸೂಚನೆ ನೀಡಲಾಗಿದೆ ಎಂದರು.

ಈವರೆಗೆ 3714 ಮನೆಗಳು ಮಳೆ ಹಾನಿಯಿಂದ ನಷ್ಟವಾಗಿದೆ. ಇವುಗಳಿಗೆ ಎಸ್​ಡಿಆರ್​ಎಫ್​ ಪ್ರಕಾರ ಪರಿಹಾರ ಕೊಡಲು ಸೂಚಿಸಿದ್ದೇವೆ. ಡಿಸಿಗಳ ಪಿಡಿ ಖಾತೆಯಲ್ಲಿ ಸುಮಾರು 783.69 ಕೋಟಿ ರೂ.‌ಹಣ ಇದೆ. ಯಾವುದೇ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.

ಸಿಇಒ, ಡಿಡಿಪಿಐಯಗಳು ಜವಾಬ್ದಾರರು: ಕಳೆದ ಬಾರಿ ಎಸ್​ಎಸ್​ಎಲ್​ಸಿ ಫಲಿತಾಂಶ ಕಡಿಮೆಯಾಗಿದೆ. 2022-23ರಲ್ಲಿ ಶೇ 73ರಷ್ಟು ಫಲಿತಾಂಶ ಇತ್ತು. ಕಾಪಿ ಹೊಡೆಯುವುದನ್ನು ನಿಯಂತ್ರಣ ಮಾಡುವ ಯತ್ನ ಆಗಿದೆ. ಅದಕ್ಕಾಗಿ ಫಲಿತಾಂಶ ಕಡಿಮೆಯಾಗಿದೆ ಎಂದು ಕಾರಣ ನೀಡಿದ್ದಾರೆ. ಯಾವ ಜಿಲ್ಲೆಯಲ್ಲಿ ಕಡಿಮೆಯಾಗುತ್ತೆ, ಅಲ್ಲಿನ ಸಿಇಒ, ಡಿಡಿಪಿಐ ಜವಾಬ್ದಾರರಾಗುತ್ತಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. ಅಲ್ಲದೇ ಮೂರು ಬಾರಿ ಪೂರಕ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದ್ದು, ಮೂರನೇ ಪೂರಕ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಲು ಅನುವು ಮಾಡಿ ಕೊಡಲು ಹೇಳಿದ್ದೇನೆ ಎಂದು ತಿಳಿಸಿದರು.

ಲ್ಯಾಂಡ್ ಬ್ಯಾಂಕ್ ಮಾಡಲು ಸೂಚನೆ: ಕಂದಾಯ ಡಿಸಿಗಳಿಗೆ ರಾಜ್ಯದಲ್ಲಿ ಸರ್ಕಾರಿ ಜಮೀನು ಬಗ್ಗೆ ಲ್ಯಾಂಡ್ ಬ್ಯಾಂಕ್ ಮಾಡಲು ಸೂಚನೆ ನೀಡಲಾಗಿದೆ. ಪ್ರತಿ ತಾಲೂಕಿನಲ್ಲಿ ಸರ್ವೆ ನಡೆಸಿ ಲ್ಯಾಂಡ್ ಬ್ಯಾಂಕ್ ಮಾಡಿ, ತಾಲೂಕು ಕಚೇರಿಗಳಲ್ಲಿ ಅದರ ಡಿಸ್ಲ್ಪೇ ಮಾಡಬೇಕು ಎಂದು ಸೂಚಿಸಲಾಗಿದೆ. 750 ಸರ್ವೆಯರುಗಳನ್ನು ನೇಮಕ ಮಾಡಲು ಅನುಮೋದನೆ ಕೊಟ್ಟಿದ್ದೇನೆ. ಈಗಾಗಲೇ ಶೇ 75ರಷ್ಟು ಸರ್ವೆ ಆಗಿದೆ. ಶೇ 25ರಷ್ಟು ಬಾಕಿ ಇದೆ. ಅದನ್ನು ಬೇಗ ಪೂರೈಸಲು ಸೂಚನೆ ನೀಡಿದ್ದೇನೆ ಎಂದರು.

ಜನಸಂಪರ್ಕ ಸಭೆಯಲ್ಲಿ 25,000 ಅರ್ಜಿ ಬಂದಿದ್ದು, ಈ ಪೈಕಿ ಕೇವಲ 278 ಅರ್ಜಿ ಮಾತ್ರ ಬಾಕಿ ಉಳಿದಿದೆ. ಅದರಲ್ಲಿ ಶೇ 80ರಷ್ಟು ಕ್ವಾಲಿಟಿ ವಿಲೇವಾರಿಯಾಗಿದೆ. ಡಿಸಿ ಕೋರ್ಟ್​ನಲ್ಲಿ, ಎಸಿ ಕೋರ್ಟ್​ನಲ್ಲಿ, ತಹಶೀಲ್ದಾರ್ ಕೋರ್ಟ್​ನಲ್ಲಿ ಇರುವ ಭೂ ಸಂಬಂಧಿತ ಕೇಸ್​ಗಳು ಒಂದು ವರ್ಷಕ್ಕಿಂತ ಹೆಚ್ಚು ಬಾಕಿ ಇರಬಾರದು ಎಂದು ಸೂಚನೆ ನೀಡಿದ್ದೇನೆ. ಸರ್ಕಾರಿ ಭೂಮಿ ಒತ್ತುವರಿ, ಕೆರೆ, ಗೋಮಾಳ ಒತ್ತುವರಿಗಳನ್ನು ಡಿಸಿ, ಎಸಿ, ತಹಶೀಲ್ದಾರ್ ತೆರವು ಮಾಡಿಸಬೇಕು ಎಂದು ಸೂಚಿಸಿದರು.

ವಿವಿಧ ಪಿಂಚಣಿಗಾಗಿ 10 ಸಾವಿರ ಕೋಟಿ ರೂ. ಬೇಕಾಗುತ್ತೆ. ಈ ಪೈಕಿ 500 ಕೋಟಿ ಕೇಂದ್ರದಿಂದ ಬರುತ್ತೆ. 77 ಲಕ್ಷ ಜನರಿಗೆ ಪಿಂಚಣಿ ಕೊಡುತ್ತೇವೆ. 33,841 ಪಿಂಚಣಿ ಅರ್ಜಿ ಬಾಕಿ ಇದೆ. ಅವುಗಳನ್ನು ಒಂದು ತಿಂಗಳಲ್ಲಿ ಇತ್ಯರ್ಥ ಮಾಡಲು ಸೂಚಿಸಿದ್ದೇನೆ ಎಂದರು. ಅಲೆಮಾರಿ ಕುರಿಗಾರರ ಕುರಿ ಕಳ್ಳತನ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ. ಅದನ್ನು ನಿಯಂತ್ರಿಸಲು ಗನ್ ಲೈಸೆನ್ಸ್ ಕೊಡಲು ಡಿಸಿಗಳಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಅರಣ್ಯಗಳಲ್ಲಿ ಕುರಿ ಮೇಯಿಸಲು ಅನುಮತಿ ನೀಡಲು ಸೂಚಿಸಿದ್ದೇನೆ‌. ಕುರಿಗಾರರಿಗೆ ಐಡಿ ಕಾರ್ಡ್ ಕೊಡಲು ಸೂಚನೆ ಕೊಟ್ಟಿದ್ದೇನೆ ಎಂದರು.

ಸಾರಾಯಿ, ವಿಸ್ಕಿ ಕುಡಿಯಲಿ, ಆದರೆ, ಎಲ್ಲಿ ಬೇಕಾದರು ಕುಡಿಯಬಹುದಾ?: ನೆಲಮಂಗಲದಲ್ಲಿ ಸಂಸದ ಕೆ.ಸುಧಾಕರ್ ಅಭಿನಂದನಾ ಕಾರ್ಯಕ್ರಮ ವಿಚಾರವಾಗಿವ ಪ್ರತಿಕ್ರಿಯಿಸಿ, ಆ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೂಡ ಭಾಗಿಯಾಗಿದ್ದರು. ವೇದಿಕೆಯಲ್ಲಿ ಬಹಿರಂಗವಾಗಿ ಮದ್ಯ ಸಪ್ಲೈ ಮಾಡಿದ್ದಾರೆ. ಬಿಜೆಪಿಯವರು ದೊಡ್ಡದಾಗಿ ಸಂಸ್ಕೃತಿ, ಸಂಪ್ರದಾಯದ, ಸತ್ಸಂಗ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಈ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲವಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಸಂಬಂಧ ಸರ್ಕಾರ ಕ್ರಮ ಏನು ತೆಗೆದುಕೊಂಡಿಲ್ಲ. ಸಾರಾಯಿ, ವಿಸ್ಕಿಯಾದರೂ ಕುಡಿಯಲಿ. ಆದರೆ, ಎಲ್ಲಿ ಬೇಕಾದರೂ ಕುಡಿಯಕ್ಕಾಗುತ್ತಾ? ಮದುವೆ ಮಾಡಿ ಬೀದಿಯಲ್ಲಿ ಮಾಡು ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಸಂಪುಟ ಸಭೆ ಚರ್ಚೆ ಮಾಡಿ ತೀರ್ಮಾನ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮರುನಾಮಕರಣ ಕೋರಿ ಡಿಕೆಶಿ ನಿಯೋಗ ಮನವಿ ಪತ್ರ ಸಲ್ಲಿಸಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಮನಗರ ಜಿಲ್ಲೆಯಂತ ಕರೆಯುದು ಬೇಡ ಅದನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿ ಎಂದು ಮನವಿ ಸಲ್ಲಿಸಿದ್ದಾರೆ. ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಈಗಲೇ ಆ ಬಗ್ಗೆ ಹೇಳಲು ಆಗಲ್ಲ ಎಂದರು.

ಇದನ್ನೂ ಓದಿ: ವ್ಯಾಪಕವಾಗಿ ಹಬ್ಬುತ್ತಿರುವ ಡೆಂಗ್ಯೂ ಬಗ್ಗೆ ಸುದೀರ್ಘ ಚರ್ಚೆ; ಟಾಸ್ಕ್ ಫೋರ್ಸ್ ರಚನೆಗೆ ಸಿಎಂ ಸೂಚನೆ - CM MEETING

Last Updated : Jul 9, 2024, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.