ETV Bharat / state

ಚುನಾವಣಾ ಸಮಿತಿ ಸಭೆ ಮುಂದೂಡಿಕೆ: ಬಿ.ಎಸ್.ಯಡಿಯೂರಪ್ಪ

ಭಾನುವಾರದಂದು ನಡೆಯಬೇಕಾಗಿದ್ದ ದೆಹಲಿ ಚುನಾವಣಾ ಸಮಿತಿ ಸಭೆ ಮುಂದೂಡಿಕೆ ಆಗಿದೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

meeting adjourned  BS Yeddyurappa
ಬಿ.ಎಸ್.ಯಡಿಯೂರಪ್ಪ ಹೇಳಿಕೆ
author img

By ETV Bharat Karnataka Team

Published : Mar 9, 2024, 11:04 PM IST

ಬಿ.ಎಸ್.ಯಡಿಯೂರಪ್ಪ ಹೇಳಿಕೆ

ಶಿವಮೊಗ್ಗ: ಭಾನುವಾರದಂದು ನಡೆಯಬೇಕಾಗಿದ್ದ ದೆಹಲಿಯಲ್ಲಿ ಚುನಾವಣಾ ಸಮಿತಿ ಸಭೆ ಮುಂದೂಡಿಕೆ ಆಗಿದೆ. ಆದರಿಂದ ನಾನು ದೆಹಲಿಗೆ ಹೋಗುತ್ತಿಲ್ಲ. ಇದರಿಂದ ನಾಳೆ ಶಿವಮೊಗ್ಗದಲ್ಲೇ ಚುನಾವಣೆ ತಯಾರಿ‌ ನಡೆಸುತ್ತೇನೆ ಎಂದು ಬಿಜೆಪಿ ಕೇಂದ್ರೀಯ ಸಂಸದಿಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.

ಲೋಕಸಭ ಚುನಾವಣೆ ಬಿಜೆಪಿಗೆ ವಾತಾವರಣ ತುಂಬಾ ಚೆನ್ನಾಗಿದೆ. 28 ಲೋಕಸಭ ಕ್ಷೇತ್ರದಲ್ಲಿ 25 ರಲ್ಲಿ ಗೆಲ್ಲಲು ಶ್ರಮ ಹಾಕುತ್ತೇವೆ. ಅದರಲ್ಲಿ ಯಶಸ್ವಿ ಆಗುವ ವಿಶ್ವಾಸವಿದೆ‌. ರಾಜಕೀಯ ಪಕ್ಷದಲ್ಲಿ ಸ್ವಾಭಾವಿಕ ಟಿಕೆಟ್ ಹಂಚಿಕೆಗೂ ಮುನ್ನ ಗೊಂದಲ ಇರುತ್ತದೆ. ಒಂದು ಸಲ ಪಟ್ಟಿ ಬಿಡುಗಡೆಯಾದ ಮೇಲೆ ಎಲ್ಲರೂ ಹೊಂದಿಕೊಂಡು ಹೋಗುತ್ತೇವೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆ.

ಇದರಿಂದ ಯಾರೂ ಸಹ ಟಿಕೆಟ್ ಹಂಚಿಕೆ ನಂತರ ವಿರೋಧ ವ್ಯಕ್ತಪಡಿಸುವುದಿಲ್ಲ. ಯಾರಾದರೂ ಬೇಸರ ವ್ಯಕ್ತಪಡಿಸಿದರೆ ಅದನ್ನು ಸರಿದೂಗಿಸುತ್ತೇವೆ. ಕಾಂತೇಶ್ ರವರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡ್ತಾ ಇದ್ದೇವೆ. ಮತ್ತೊಮ್ಮೆ ದೆಹಲಿಗೆ ಹೋಗಿ ಪ್ರಯತ್ನ ಮುಂದುವರೆಸುತ್ತೇನೆ. ನನ್ನ ಕಡೆಯಿಂದ ಪ್ರಮಾಣಿಕ ಪಯತ್ನ ಮಾಡುತ್ತೇನೆ. ಟಿಕೆಟ್ ಯಾರಿಗೆ ನೀಡಬೇಕೆಂದು ಚುನಾವಣಾ ಸಮಿತಿ ತೀರ್ಮಾನ ಮಾಡಲಿದೆ ಎಂದರು.

ಓದಿ: ಲೋಕಸಭೆ ಚುನಾವಣೆ ವೇಳಾ ಪಟ್ಟಿ ಪ್ರಕಟಕ್ಕೂ ಮುನ್ನವೇ ಚುನಾವಣಾ ಆಯುಕ್ತ ಅರುಣ್ ಗೋಯಲ್​​ ರಾಜೀನಾಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.