ETV Bharat / state

ಸಚಿವ ಬೈರತಿ ಸುರೇಶ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಹೆಚ್.ವಿಶ್ವನಾಥ್‌ಗೆ ಪ್ರತಿಬಂಧಕಾಜ್ಞೆ - DEFAMATION CASE

author img

By ETV Bharat Karnataka Team

Published : Aug 25, 2024, 7:14 AM IST

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್​ ವಿರುದ್ಧ ಎಂಎಲ್​ ಸಿ ಹೆಚ್​ ವಿಶ್ವನಾಥ್​ ಅವರು ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿದೆ.

DEFAMATION CASE
ಮಾನನಷ್ಟ ಮೊಕದ್ದಮೆ ಪ್ರಕರಣ (ETV Bharat)

ಬೆಂಗಳೂರು : ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆ ನೀಡಿದಂತೆ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ವಿರುದ್ಧ ಬೆಂಗಳೂರಿನ ಸತ್ರ ನ್ಯಾಯಾಲಯ ಪ್ರತಿಬಂಧಕಾಜ್ಞೆ ನೀಡಿದೆ.

ಹೆಚ್. ವಿಶ್ವನಾಥ್ ಅವರಿಂದ 50 ಕೋಟಿ ಪರಿಹಾರದ ಜೊತೆಗೆ ಶಾಶ್ವತ ಪ್ರತಿಬಂಧಕಾಜ್ಞೆ ಆದೇಶ ನೀಡುವಂತೆ ಕೋರಿ ಸಚಿವ ಸುರೇಶ್ ಸಲ್ಲಿಸಿರುವ ಮೂಲ ದಾವೆಯ ಭಾಗವಾಗಿರುವ ಮಧ್ಯಂತರ ಅರ್ಜಿಯನ್ನು 40ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ. ಅಲ್ಲದೆ, ವಿಶ್ವನಾಥ್ ಅವರಿಗೆ ದಾವೆಯ ಸಮನ್ಸ್ ಮತ್ತು ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಲಾಗಿದೆ.

ವಿಶ್ವನಾಥ್ ಅವರು ಫಿರ್ಯಾದಿ ಸುರೇಶ್ ಅವರ ವಿರುದ್ಧ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಾನಹಾನಿ ಹೇಳಿಕೆ ನೀಡದಂತೆ ಮುಂದಿನ ವಿಚಾರಣೆಯವರೆಗೂ ಏಕ ಪಕ್ಷೀಯ ಮಧ್ಯಂತರ ಆದೇಶ ಹೊರಡಿಸಲಾಗಿದೆ.

ಸಾರ್ವಜನಿಕ ವಿಚಾರದ ನೆಪದಲ್ಲಿ ಸಚಿವ ಬೈರತಿ ಸುರೇಶ್ ವಿರುದ್ಧ ಹೆಚ್​ ವಿಶ್ವನಾಥ್ ಅವರು ವೈಯಕ್ತಿಕ ಹೇಳಿಕೆ ನೀಡಿರುವುದು ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿದು ಬಂದಿದೆ. ವಿಶ್ವನಾಥ್ ಅವರು ಸುರೇಶ್ ಮಾನಹಾನಿ ಮಾಡಿದ್ದು, ಸುರೇಶ್ ಘನತೆಗೆ ಹಾನಿ ಮಾಡುವುದು ವಿಶ್ವನಾಥ್ ಉದ್ದೇಶವಾಗಿದೆ. ದಾಖಲೆಗಳನ್ನು ವಿಶ್ಲೇಷಿಸಿದಾಗ ಇದು ಮಧ್ಯಂತರ ಪ್ರತಿಬಂಧಕಾಜ್ಞೆ ಮಾಡಲು ಸೂಕ್ತ ಪ್ರಕರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇಲ್ಲವಾದಲ್ಲಿ ದಾವೆ ಇತ್ಯರ್ಥವಾಗುವ ವೇಳೆ ಪರಿಸ್ಥಿತಿ ಕೆಡಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಸಚಿವ ಸುರೇಶ್ ಪರ ವಕೀಲ ಶತಭಿಷ್ ಶಿವಣ್ಣ, 'ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ' ಎಂಬುದು ಸೇರಿದಂತೆ ಹಲವು ಆಕ್ಷೇಪಾರ್ಹ ಹೇಳಿಕೆಗಳನ್ನು ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ. ಈ ಮೂಲಕ ತಮ್ಮ ವರ್ಚಸ್ಸಿಗೆ ಹಾನಿ ಮಾಡಿದ್ದಾರೆ. ಲೀಗಲ್ ನೋಟಿಸ್ ನೀಡಿದ ಬಳಿಕವೂ ವಿಶ್ವನಾಥ್ ಅವರು ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ವಾದಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ: ಹೆಚ್. ವಿಶ್ವನಾಥ್‌ - H Vishwanath

ETV Bharat Logo

Copyright © 2024 Ushodaya Enterprises Pvt. Ltd., All Rights Reserved.