ETV Bharat / state

ಮಕ್ಕಳು ಶಾಲೆಗೆ ಗೈರಾದರೆ ದಂಡ ಆರೋಪ: ಪ್ರಾಂಶುಪಾಲೆ, ಡಿಡಿಪಿಐ ಹೇಳಿದ್ದೇನು?

ಚಿಕ್ಕಮಗಳೂರು ಜಿಲ್ಲೆಯ ಶಾಲೆಯೊಂದು ಜನವರಿ 22ರಂದು ಮಕ್ಕಳು ಶಾಲೆಗೆ ಗೈರಾದರೆ ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆ ನೀಡಿರುವ ಆರೋಪದ ಕುರಿತಂತೆ ಶಾಲಾ ಪ್ರಾಂಶುಪಾಲರು ಮತ್ತು ಡಿಡಿಪಿಐ ಪ್ರತಿಕ್ರಿಯಿಸಿದ್ದಾರೆ.

ckm
ಪ್ರಾಂಶುಪಾಲೆ, ಡಿಡಿಪಿಐ, ವಿಹೆಚ್​ಪಿ ಮುಖಂಡ
author img

By ETV Bharat Karnataka Team

Published : Jan 21, 2024, 12:51 PM IST

ಡಿಡಿಪಿಐ ಪ್ರಕಾಶ್ ಹೇಳಿಕೆ

ಚಿಕ್ಕಮಗಳೂರು: ನಾಳೆ ರಜೆ ಹಾಕಿದರೆ ಸಾವಿರ ರೂಪಾಯಿ ದಂಡ ಹಾಕಲಾಗುವುದು ಎಂದು ಜಿಲ್ಲೆಯ ಶಾಲೆಯೊಂದು ಮಕ್ಕಳಿಗೆ ಎಚ್ಚರಿಕೆ ನೀಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯೊಂದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರು, ಡಿಡಿಪಿಐ ಹಾಗು ವಿಶ್ವ ಹಿಂದೂ ಪರಿಷತ್​ ಮುಖಂಡರ ಹೇಳಿಕೆಗಳು ಇಲ್ಲಿವೆ.

ಡಿಡಿಪಿಐ ಪ್ರಕಾಶ್ ಹೇಳಿಕೆ: "ಶಾಲೆಯ ಮುಖ್ಯಸ್ಥರ ಜೊತೆ ಚರ್ಚಿಸಿದ್ದೇನೆ. ಅವರು ಶುಕ್ರವಾರ ಮಧ್ಯಾಹ್ನ ಶಾಲೆಗೆ ರಜೆ ಕೊಟ್ಟಿದ್ದಾರೆ. ಶನಿವಾರ ಶಾಲೆಯಲ್ಲಿ ನವೋದಯ ಪರೀಕ್ಷೆ ನಡೆಯುವುದರಿಂದ ರಜೆ ನೀಡಿದ್ದಾರೆ. ಭಾನುವಾರ ವಾರದ ರಜಾ. ಹಾಗಾಗಿ ಸೋಮವಾರ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಬರಬೇಕು ಎಂದು ಹೇಳಿದ್ದಾರೆಯೇ ವಿನಃ ಗೈರಾದರೆ ದಂಡ ಹಾಕಲಾಗುವುದು ಎಂದು ಹೇಳಿಲ್ಲ. ಸಾಮಾನ್ಯವಾಗಿ ಮಕ್ಕಳು ರಜೆ ಹಾಕಿದಾಗ ಶಾಲೆಗೆ ಕಡ್ಡಾಯವಾಗಿ ಬರಬೇಕು ಎಂಬ ಎಚ್ಚರಿಕೆ ನೀಡುತ್ತಿದ್ದಾರೇ ಹೊರತು ಬೇರೇನೂ ಇಲ್ಲ ಎಂದು ಶಾಲಾ ಮುಖ್ಯಸ್ಥರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಸೂಕ್ತ ಕಾರಣವಿದ್ದರೆ ಮಕ್ಕಳು ಸೋಮವಾರ ರಜೆ ತೆಗೆದುಕೊಳ್ಳಬಹುದು ಎಂದು ಪೋಷಕರಿಗೆ ಈಗಾಗಲೇ ಶಾಲೆಯಿಂದ ಸಂದೇಶ ಕಳುಹಿಸಲಾಗಿದೆ. ಆ ಮೆಸೇಜ್ ಅ​ನ್ನು ನನಗೆ ತೋರಿಸಿದ್ದಾರೆ. ಸೋಮವಾರ ಶಾಲೆಗೆ ಬಂದು ಮಕ್ಕಳನ್ನು ವಿಚಾರಿಸುತ್ತೇನೆ. ದಂಡ ಹಾಕಿದ್ದಲ್ಲಿ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ" ಎಂದರು.

ಶಾಲೆ ಪ್ರಾಂಶುಪಾಲೆ ಸಿಸ್ಟರ್​ ಜೀನ್ ಸ್ಪಷ್ಟನೆ

ಪ್ರಾಂಶುಪಾಲರು ಹೇಳಿದ್ದೇನು?: "ನಾನು ಯಾವಾಗಲೂ ಮಕ್ಕಳು ನಿರಂತರ ರಜೆಯಲ್ಲಿದ್ದರೆ ಕರೆದು ವಿಚಾರಿಸಿ ಶಾಲೆಗೆ ಸರಿಯಾಗಿ ಹಾಜರಾಗಬೇಕೆಂದು ಹೇಳುತ್ತೇನೆ. ಯಾಕೆಂದರೆ ಹೆಚ್ಚಾಗಿ ಅವರು ಊರಿಗೆ ಹೋಗುತ್ತಾರೆ. ಇದರಿಂದ ಶಾಲೆಗೆ ಬರುವುದು ತಡವಾಗಿ ವಿಶೇಷ ತರಗತಿಗಳನ್ನು ಮಿಸ್​ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ, ಕನ್ನಡ ಮಾಧ್ಯಮ ಹಾಗೂ ದೂರದಿಂದ ಬರುವ ಮಕ್ಕಳು ಗೈರಾಗುತ್ತಿರುತ್ತಾರೆ. ಕೆಲವು ಪೋಷಕರು ಅನಕ್ಷರಸ್ಥರಾಗಿರುತ್ತಾರೆ. ಹೀಗಾಗಿ ನಾನು ಅವರಿಗೆ ಒಮ್ಮೆ ಎಚ್ಚರಿಕೆ ನೀಡುತ್ತೇನೆ. ಅದೇ ರೀತಿ ಸೋಮವಾರ ಕಡ್ಡಾಯವಾಗಿ ಶಾಲೆಗೆ ಬರಬೇಕೆಂದು ಎಚ್ಚರಿಸಿದ್ದೇನೆ. ನಾನು ಕೂಡ ಧಾರ್ಮಿಕ ವ್ಯಕ್ತಿ. ಎಲ್ಲಾ ಧರ್ಮಗಳನ್ನು ಗೌರವಿಸುವಂತವಳು. ಎಲ್ಲಾ ಮಕ್ಕಳನ್ನೂ ಸಮಾನ ದೃಷ್ಟಿಯಿಂದ ನೋಡುತ್ತೇನೆ ಎಂದು ಶಾಲಾ ಮಕ್ಕಳೇ ಅವರ ಅನಿಸಿಕೆ ಕೊಟ್ಟಿದ್ದಾರೆ. ಗೈರಾದರೇ ದಂಡ ಹಾಕುತ್ತೇನೆ ಎಂದು ಹೇಳಿಲ್ಲ" ಎಂದರು.

ವಿಶ್ವ ಹಿಂದೂ ಪರಿಷತ್​ ಮುಖಂಡ ರಂಗನಾಥ್ ಆರೋಪ

ವಿಶ್ವ ಹಿಂದೂ ಪರಿಷತ್​ ಮುಖಂಡ ರಂಗನಾಥ್ ಪ್ರತಿಕ್ರಿಯಿಸಿ, "ಸೋಮವಾರ ಶಾಲೆಗೆ ರಜೆ ಹಾಕುವ ಮಕ್ಕಳಿಗೆ 1,000 ರೂ. ದಂಡ ಹಾಕುತ್ತೇವೆ. ಹಾಗೆಯೇ ಪೋಷಕರ ಸಭೆಯನ್ನೂ ಕರೆದಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಮಕ್ಕಳ ಮುಂದಿನ ಭವಿಷ್ಯಕ್ಕೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಪೋಷಕರು ಮಾಹಿತಿ ನೀಡಿಲ್ಲ" ಎಂದು ಹೇಳಿದರು.

ಇದನ್ನೂ ಓದಿ: ಜ.22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಮುಹೂರ್ತ: ಈ ದಿನದ ವಿಶೇಷತೆ ಬಗ್ಗೆ ಪಂಡಿತರು ಹೇಳುವುದಿಷ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.