ETV Bharat / state

ಹಾಲಿನ ದರ ಪರಿಷ್ಕರಣೆ ಬೆನ್ನಲ್ಲೇ ರೈತರಿಗೆ ಸಿಹಿ ಸುದ್ದಿ ನೀಡಿದ್ರು ಡಿಸಿಎಂ ಡಿಕೆ ಶಿವಕುಮಾರ್ - DK Shivakumar

ಹಾಲಿನ ದರ ಹೆಚ್ಚಳ ಮಾಡಿರುವ ಬಗ್ಗೆ ಸಮರ್ಥಿಸಿಕೊಂಡಿರುವ ಡಿಸಿಎಂ ಡಿಕೆ ಶಿವಕುಮಾರ್, ರೈತರಿಗೋಸ್ಕರ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ. ​

ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ (ETV Bharat)
author img

By ETV Bharat Karnataka Team

Published : Jun 26, 2024, 1:09 PM IST

ಬೆಂಗಳೂರು: ಸಂಕಷ್ಟದಲ್ಲಿರುವ ಹೈನುಗಾರರಿಗೆ ನೆರವಾಗಲು ಹಾಲಿನ ದರ ಹೆಚ್ಚಳ ಮಾಡಲಾಗಿದೆ. ದರ ಪರಿಷ್ಕರಣೆಯಲ್ಲಿ ರೈತರಿಗೂ ಪಾಲು ಇರಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳ ಲಾಭ ರೈತರಿಗೆ ಸಿಗಲಿದೆ, ಕೆಎಂಎಫ್ ಎಂದರೆ ರೈತರು, ಕೆಎಂಎಫ್​ನಲ್ಲಿ ರೈತರೇ ಇರುವುದು ರೈತರಿಗೋಸ್ಕರನೇ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ. ಯಾರು ಎಷ್ಟೇ ವಿವಾದ ಮಾಡಲಿ. ಬೇಕಾದರೆ ರೈತರನ್ನೇ ಕೇಳಲಿ, ಅವರು ಪರಿಸ್ಥಿತಿ ಏನಿದೆ ಅಂತಾ ತಿಳಿಸುತ್ತಾರೆ. ಹಸುಗಳನ್ನು ಸಾಕಲಾಗದೆ ಇಂದು ರೈತರು ಮಾರಿಕೊಳ್ಳುತ್ತಿದ್ದಾರೆ. ಹಾಗಾಗಿ ರೈತರಿಗೋಸ್ಕರ ಹಾಲಿನ ದರ ಹೆಚ್ಚಳ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಹಾಲಿನ ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ, ಈ ಹಿಂದೆ ಮೂರು ರೂ. ಈಗ ಎರಡು ರೂ.ಹೆಚ್ಚಳ ಮಾಡಿದ್ದು ಐದು ರೂ.ಗಳಲ್ಲಿ ರೈತರಿಗೆ ಪಾಲು ಸಿಗಲಿದೆ. ಇದಕ್ಕೆ ವಿರೋಧ ಮಾಡುವ ಮೂಲಕ ಬಿಜೆಪಿಯವರ ರೈತ ವಿರೋಧಿ ಧೋರಣೆ ಅನಾವರಣಗೊಂಡಿದೆ. ಬಿಜೆಪಿ ಆಳ್ವಿಕೆಯ ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ ನಮ್ಮ ಬಳಿ ಎಷ್ಟಿದೆ ಎನ್ನುವುದನ್ನು ನೋಡಲಿ ಮೊದಲು ಹಾಗೆ ರೈತರನ್ನ ಉಳಿಸುವ ಚಿಂತನೆ ಮಾಡಲಿ ಎಂದು ಚಾಟಿ ಬೀಸಿದರು.

ರಾಹುಲ್ ಗಾಂಧಿಗೆ ಅಭಿನಂದನೆ: ಎಲ್ಲರ ಒತ್ತಾಯದ ಮೇರೆಗೆ ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕ ಸ್ಥಾನ ಒಪ್ಪಿಕೊಂಡಿದ್ದಾರೆ. ಪ್ರಜಾಪ್ರಭುತ್ವ ಉಳಿಸಲು, ಸಂವಿಧಾನ ಉಳಿಸಲು ರಾಹುಲ್ ಗಾಂಧಿ ಈ ಜವಾಬ್ದಾರಿಗೆ ಸಮ್ಮತಿಸಿದ್ದಾರೆ. ದೇಶಕ್ಕೆ ದೊಡ್ಡ ಅಡಿಪಾಯವನ್ನು ಹಾಕುತ್ತಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ಇದನ್ನೂ ಓದಿ: ಹೆಚ್ಚುವರಿ ಹಾಲಿಗೆ 2 ರೂಪಾಯಿ ನಿಗದಿಪಡಿಸಲಾಗಿದೆಯೇ ಹೊರತು ಹಾಲಿನ ಬೆಲೆ ಏರಿಸಿಲ್ಲ: ಸಿಎಂ - CM Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.