ನನಗೆ ಇಂದು ಜಯ ಸಿಕ್ಕಿದೆ, ನಾನು ಸಾಯೋವರೆಗೂ ಈ ರೀತಿ ಕೇಸ್‌ಗಳನ್ನು ಎದುರಿಸಲೇಬೇಕು : ಡಿ ಕೆ ಶಿವಕುಮಾರ್ - DCM D K Shivakumar - DCM D K SHIVAKUMAR
ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಆದಾಯ ಮೀರಿ ಆಸ್ತಿ ಗಳಿಕೆ ಬಗ್ಗೆ ಹೈಕೋರ್ಟ್ ತೀರ್ಪಿನ ಕುರಿತು ಮಾತನಾಡಿದರು. ಇವತ್ತಿನ ಹೈಕೋರ್ಟ್ನಲ್ಲಿನ ನನ್ನ ಜಯ ನನಗಿಂತಲೂ ರಾಜ್ಯ ಸರ್ಕಾರಕ್ಕೆ ಆಗಿದೆ. ನನ್ನ ಪರವಾಗಿ ನಿಂತ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.


Published : Aug 29, 2024, 8:16 PM IST
ಬೆಂಗಳೂರು : ಇವತ್ತು ಹೈಕೋರ್ಟ್ನಲ್ಲಿನ ಜಯ ನನಗಿಂತ ಹೆಚ್ಚಾಗಿ ಕರ್ನಾಟಕ ಸರ್ಕಾರಕ್ಕೆ ಆಗಿದೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.
ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧ ಹೈಕೋರ್ಟ್ ತೀರ್ಪು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನನ್ನ ಪರವಾಗಿ ನಿಂತ ಸರ್ಕಾರಕ್ಕೆ ಧನ್ಯವಾದ ಹೇಳ್ತೇನೆ. ನನ್ನ ಪರ ವಾದ ಮಾಡಿದ ವಕೀಲರಿಗೂ ಧನ್ಯವಾದ ಹೇಳ್ತೀನಿ. ಯತ್ನಾಳ್‌ಗೂ ಈ ಪ್ರಕರಣಕ್ಕೂ ಏನು ಸಂಬಂಧ?. ಸಿಬಿಐನವ್ರೇ ಈ ಪ್ರಕರಣಕ್ಕೆ ಅಷ್ಟು ತಲೆಕೆಡಿಸಿಕೊಂಡಿಲ್ಲ. ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಹೋಗಲಿ. ಅವರಿಗೂ ನ್ಯಾಯಾಲಯ, ನಮಗೂ ನ್ಯಾಯಾಲಯ ಇದೆ. ನಾನು ಸಾಯೋವರೆಗೂ ಈ ರೀತಿ ಕೇಸ್‌ಗಳನ್ನು ಎದುರಿಸಲೇಬೇಕು ಎಂದರು.
ನಾವೆಲ್ಲ ಕಷ್ಟಪಟ್ಟು ಶ್ರಮಪಟ್ಟು ರಾಜಕೀಯ ಮಾಡಿಕೊಂಡು ಬರುತ್ತಿರುವವರು. ಬಿಜೆಪಿ ನಮ್ಮ ಮೇಲೆ ಷಡ್ಯಂತ್ರ ಮಾಡುತ್ತಾ ಇದೆ. ಸಾವಿರಾರು ಕೇಸುಗಳಿವೆ, ತನಿಖೆ ಮಾಡೋದಿಕ್ಕೆ ಅವಕಾಶ ಇದೆ. ಅವರು ಲೋಕಾಯುಕ್ತಕ್ಕೆ ಕೊಟ್ಟು ಮಾಡಿಸಬಹುದಿತ್ತು. ಇಲ್ಲಿಯವರೆಗೂ ಕರ್ನಾಟಕದಲ್ಲಿ ಅಕ್ರಮ ಆಸ್ತಿ ಗಳಿಕೆ ಕೇಸ್ಗಳು ಒಂದು ಕೂಡ ಸಿಬಿಐ ತನಿಖೆ ಮಾಡಿರಲಿಲ್ಲ. ತರಾತುರಿಯಲ್ಲಿ ಕೊಡುವ ಅವಶ್ಯಕತೆ ಇರಲಿಲ್ಲ ಎಂದು ತಿಳಿಸಿದರು.
ಹಿಂದೆ ನನ್ನನ್ನ ಜೈಲಿಗೆ ಕಳುಹಿಸಿದ್ರು. ಅವತ್ತು ಕೂಡ ಹೇಳಿದ್ದೆ, ನನಗೆ ನ್ಯಾಯ ಸಿಗುತ್ತೆ ಎಂದು. ನನ್ನ ಮೇಲಿನ ಇ.ಡಿ ಕೇಸ್ ಕೂಡ ವಜಾ ಆಯ್ತು. ನಾನೇನು ತಪ್ಪು ಮಾಡಿಲ್ಲ ಎಂದು ಅವತ್ತು ವಾದ ಮಾಡಿದ್ದೆ, ಇವತ್ತು ಮಾಡ್ತಾ ಇದ್ದೇನೆ. ನನ್ನ ಆಸ್ತಿ ಏನಿದೆ ಅಂತ ನನಗೆ ಗೊತ್ತಿದೆ. ಈ ಸಂಬಂಧ ನಾನು ದಾಖಲೆ ಕೊಟ್ಟಿದ್ದೇನೆ. ನಮಗೆ ತೊಂದ್ರೆ ಕೊಡುವಂತಹ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ನಾವು ನ್ಯಾಯಯುತವಾಗಿ ಆಸ್ತಿ ಮಾಡಿದ್ದೇವೆ: ಬಿಜೆಪಿ ನಾಯಕರ ಮೇಲೆ ಸಾವಿರಾರು ಕೇಸ್ ಇದ್ದಾವೆ. ಯಾವುದನ್ನು ಕೂಡ ತನಿಖೆ ಮಾಡುತ್ತಿಲ್ಲ. ಲೋಕಾಯುಕ್ತ ಕೋರ್ಟ್ ನಲ್ಲಿ ಕೂಡ ಇದ್ದಾವೆ. ಈ ಹಿಂದೆ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ರು. ಆವತ್ತೆ ಹೇಳಿದ್ದೆ, ನ್ಯಾಯ ಸಿಗುತ್ತೆ ಅಂತ. ನಾನು ಏನು ತಪ್ಪು ಮಾಡಿಲ್ಲ ಅಂತ ಅವತ್ತು ಹೇಳಿದ್ದೆ, ಇವತ್ತು ಹೇಳುತ್ತೇನೆ. ಸಿಬಿಐಗೆ ಕೊಟ್ಟಿದ್ದು ಸರಿಯಲ್ಲ. ಸಿಬಿಐ ಅರ್ಧ ತನಿಖೆ ಮಾಡಿದ್ದೇವೆ ಅಂತ ಹೇಳಿದ್ರು. ಆದ್ರೆ ಯಾವುದೇ ತನಿಖೆ ಮಾಡಿರಲಿಲ್ಲ. ನಾವು ನ್ಯಾಯಯುತವಾಗಿ ಆಸ್ತಿ ಮಾಡಿದ್ದೇವೆ. ಯಾರಿಗೂ ತೊಂದ್ರೆ ಕೊಟ್ಟಿಲ್ಲ ಎಂದು ಹೇಳಿದರು.
ಸರ್ಕಾರದ ತೀರ್ಮಾನ ಸರಿಯಾಗಿದೆ ಅಂತ ಹೇಳಿದ್ದಾರೆ. ನನಗೆ ಅನ್ಯಾಯ ಆಗಿದ್ರೆ ಸುಪ್ರೀಂಕೋರ್ಟ್ಗೆ ಹೋಗ್ತಿದ್ದೆ. ಈ ಕೇಸ್ ನ್ನು ಅವರು ಇಲ್ಲಿಗೆ ಬಿಡಬಹುದು. ಪಶ್ಚಿಮ ಬಂಗಾಳದ ಜಡ್ಜ್ಮೆಂಟ್ ಬಗ್ಗೆ ಹೇಳಿದ್ದಾರೆ. ಕಾನೂನು ನನಗೆ ರಕ್ಷಣೆ ಕೊಟ್ಟಿದೆ. ನನ್ನ ಪರವಾಗಿ ವಾದ ಮಾಡಿದವರಿಗೆ ಅಭಿನಂದನೆ. ಸಿಬಿಐ ಒಂದು ಪೊಲೀಸ್ ಸ್ಟೇಷನ್ ಇದ್ದ ಹಾಗೆ. ಕೇಂದ್ರ ಸರ್ಕಾರಕ್ಕೆ ಅಧಿಕಾರ ಇದೆ. ನನಗೂ ನ್ಯಾಯಾಲಯ ಇದೆ ಎಂದರು.
ನಾನು ಜೈಲಲ್ಲಿ ಇದ್ದಾಗ ಕೂಡ ವೀಕ್ ಆಗಿರಲಿಲ್ಲ: ಸಿಎಂ ಏನಾದ್ರು ಮಾಡಿದ್ರಾ?. ಪಾಪ ಅವರನ್ನು ಮಾನಸಿಕವಾಗಿ ವೀಕ್ ಮಾಡುತ್ತಿದ್ದಾರೆ. ನಾನು ಜೈಲಲ್ಲಿ ಇದ್ದಾಗ ಕೂಡ ವೀಕ್ ಆಗಿರಲಿಲ್ಲ. ಆವತ್ತು ಆಗಿಲ್ಲ. ಇವತ್ತು ಆಗಿಲ್ಲ, ಮುಂದಕ್ಕೂ ವೀಕ್ ಆಗಲ್ಲ. ನಾನು ಜೈಲಲ್ಲಿ ಆರಾಮವಾಗಿದ್ದೆ. ವೆರಿ ಸಿಂಪಲ್ ಲಾ ಇದು. ಒಂದು ಸಂಸ್ಥೆಯಿಂದ ಬೇರೆ ಸಂಸ್ಥೆಗೆ ತನಿಖೆಗೆ ಕೊಟ್ಟಿದ್ದಾರೆ. ಇದರಲ್ಲಿ ಏನು ತಪ್ಪಿದೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿಕೆಶಿಗೆ ಬಿಗ್ ರಿಲೀಫ್ - DK Shivakumar Case