ETV Bharat / state

'ಹೆಚ್​ಡಿಕೆ ಸಿನಿಮಾ ಶೈಲಿಯಲ್ಲಿ ಮಾತನಾಡುತ್ತಾರೆ, ಅವರನ್ನು ಗೋಡಂಬಿ ದ್ರಾಕ್ಷಿಗೆ ಕರಿತೀವಾ?' - DCM criticized HDK - DCM CRITICIZED HDK

ಹೆಚ್​ಡಿ ಕುಮಾರಸ್ವಾಮಿ ಅವರಿಗೆ ರಾಜಕಾರಣ ಬಿಟ್ಟರೆ ರಾಜ್ಯದ ಹಿತದ ಬಗ್ಗೆ ಕಾಳಜಿ ಇಲ್ಲ. ಅವರಿಗೆ ನನ್ನ ಮೇಲೆ ಅಸೂಯೆ ಅಷ್ಟೇ ಎಂದು ಡಿಕೆಶಿ ಟೀಕಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್
ಡಿಸಿಎಂ ಡಿ.ಕೆ. ಶಿವಕುಮಾರ್ (ETV Bharat)
author img

By ETV Bharat Karnataka Team

Published : Jul 16, 2024, 1:55 PM IST

ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ (ETV Bharat)

ಬೆಂಗಳೂರು: 'ಹೆಚ್​.ಡಿ. ಕುಮಾರಸ್ವಾಮಿ ಫಿಲ್ಮ್​​ ಸ್ಟೈಲ್​​ನಲ್ಲಿ ಮಾತಾನಾಡುತ್ತಾರೆ. ಗೋಡಂಬಿ ದ್ರಾಕ್ಷಿಗೆ ಕರಿತೀವಾ ಅವರನ್ನು' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.

ಸರ್ವಪಕ್ಷ ಸಭೆಗೆ 'ದ್ರಾಕ್ಷಿ ಗೋಡಂಬಿ ತಿನ್ನೋಕೆ ಬರಬೇಕಿತ್ತಾ' ಎಂಬ ಹೆಚ್​.ಡಿ.ಕೆ. ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, "ಹಾಗಾದರೆ ಸರ್ವಪಕ್ಷ ಸಭೆಗೆ ಅವರ ಪಕ್ಷದವರನ್ನು ಯಾಕೆ ಕಳಿಸಿದ್ದರು. ಅವರಿಗೆ ರಾಜಕಾರಣ ಬಿಟ್ಟರೆ ರಾಜ್ಯದ ಹಿತದ ಬಗ್ಗೆ,‌ ಕಾವೇರಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬರೀ ಟೀಕೆ ಮಾಡೋವುದು ಆರೋಪ ಮಾಡೋದು, ಹಿಟ್​ ಅಂಡ್​ ರನ್​ ಮಾಡೋದು ಅಷ್ಟೇ ಅವರ ಕೆಲಸ. ನನ್ನ ಮೇಲೆ ಅಸೂಯೆ ಅಷ್ಟೇ, ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಅದು. ಅದಕ್ಕೆ ನಾನು ಅಸೆಂಬ್ಲಿಯಲ್ಲೋ ಡಿಬೇಟ್ ಮಾಡೋಣ ಅಂತ ಕರಿಯುತ್ತಿದ್ದೆ. ಈ ಸಲವಾದರು ಸಿಗುತ್ತಾರಾ ಎಂದು ಕಾದುಕೊಂಡಿದ್ದೆ. ಆದರೆ ಈ ಸಲವೂ ಸಿಗಲಿಲ್ಲ. ಹೋದ ಸಲವೂ ಬರಲಿಲ್ಲ" ಎಂದು ವ್ಯಂಗ್ಯವಾಡಿದರು.

ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಡಿಕೆಶಿ, ತಮಿಳುನಾಡಿನವರು ಸರ್ವಪಕ್ಷ ಸಭೆ ಕರೆದಿದ್ದಾರೆ, ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್​ ಆದೇಶಕ್ಕೆ ನಾವು ಮೇಲ್ಮನವಿ ಸಲ್ಲಿಸುತ್ತಿದ್ದೇವೆ. ನಿನ್ನೆಯಿಂದ ಒಳ್ಳೆಯ ಮಳೆ ಬರುತ್ತಿದೆ. ಒಳ ಹರಿವು ಹೆಚ್ಚಾಗಿದೆ. ಬಂದ ನೀರನ್ನೆಲ್ಲಾ ಬಿಳಿಗುಂಡ್ಲುಗೆ ಬಿಡಲು ವ್ಯವಸ್ಥೆ ಮಾಡಿದ್ದೇವೆ. ಮಳೇನೆ ನಮಗೆಲ್ಲಾ ಆಧಾರ, ಮಳೆಯಿಂದ ಎಲ್ಲಾ ಸಮಸ್ಯೆ ಬಗೆಹರಿಯುತ್ತೆ ಅಂದುಕೊಂಡಿದ್ದೇನೆ. ಮೇಕೆದಾಟುವಿಗೆ ಅವಕಾಶ ಮಾಡಿಕೊಡಿ. ದಯವಿಟ್ಟು ತೊಂದರೆ ಮಾಡಬೇಡಿ ಅಂತ ನಮ್ರತೆಯಿಂದ ಪ್ರಾರ್ಥನೆ ಮಾಡುತ್ತೇನೆ' ಎಂದು ಮನವಿ ಮಾಡಿದರು.

ಇದನ್ನೂ ಓದಿ; ಮೈದುಂಬಿ ಧುಮ್ಮಿಕ್ಕುತ್ತಿರುವ ಭರಚುಕ್ಕಿ ಜಲಪಾತ: ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ - FLOOD THREAT FROM Cauvery RIVER

ETV Bharat Logo

Copyright © 2025 Ushodaya Enterprises Pvt. Ltd., All Rights Reserved.