ETV Bharat / state

ಮಹಾಕುಂಭ ಮೇಳ ಕಾಲ್ತುಳಿತ : ಇಬ್ಬರ ಮೃತದೇಹ ನೇರವಾಗಿ, ಇನ್ನಿಬ್ಬರ ಶವ ಗೋವಾ ಮೂಲಕ‌ ಬೆಳಗಾವಿಗೆ : ಜಿಲ್ಲಾಧಿಕಾರಿ - KUMBH MELA STAMPEDE

ಪ್ರಯಾಗರಾಜ್​ನ ಮಹಾಕುಂಭ ಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿ ಭಕ್ತರ ಮೃತದೇಹವನ್ನ ಜಿಲ್ಲೆಗೆ ತರುವುದಾಗಿ ಡಿಸಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದರು.

Devotees
ಮಹಾಕುಂಭ ಮೇಳ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿ ಭಕ್ತರು (ETV Bharat)
author img

By ETV Bharat Karnataka Team

Published : Jan 30, 2025, 5:14 PM IST

ಬೆಳಗಾವಿ : ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರು ಭಕ್ತರ ಪೈಕಿ ಇಬ್ಬರ ದೇಹಗಳನ್ನು ದೆಹಲಿಯಿಂದ ನೇರವಾಗಿ ಬೆಳಗಾವಿಗೆ ಏರ್ ಲಿಫ್ಟ್ ಮಾಡಲಾಗುವುದು. ಇನ್ನಿಬ್ಬರ ಶವಗಳನ್ನು ದೆಹಲಿಯಿಂದ ಗೋವಾಗೆ ಏರ್ ಲಿಫ್ಟ್ ಮಾಡಿ, ಅಲ್ಲಿಂದ ಬೆಳಗಾವಿಗೆ ಆಂಬ್ಯುಲೆನ್ಸ್ ಮೂಲಕ ತರಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದರು.

ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅವರು, "ಮಹಾದೇವಿ ಬಾವನೂರ ಹಾಗೂ ಅರುಣ ಕೋಪರ್ಡೆ ಅವರ ಶವಗಳು ಸರಿಯಾದ ಸಮಯಕ್ಕೆ ದೆಹಲಿಗೆ ತಲುಪಿವೆ. ಹಾಗಾಗಿ, ಮಧ್ಯಾಹ್ನದ ವಿಮಾ‌ನದಲ್ಲಿ ‌ದೆಹಲಿಯಿಂದ ನೇರವಾಗಿ ಬೆಳಗಾವಿಗೆ ತರಲಾಗುತ್ತಿದೆ. 3.20ಕ್ಕೆ ವಿಮಾನ ದೆಹಲಿಯಿಂದ ಹೊರಟಿದ್ದು, ಸಂಜೆ 5.30ರ ವೇಳೆಗೆ ಬೆಳಗಾವಿಗೆ ಬಂದು ಮುಟ್ಟಲಿದೆ'' ಎಂದರು.

Congress youth leader Mrinal Hebbalkar inquired about the health of the injured.
ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್ (ETV Bharat)

ಅದೇ ರೀತಿ ಜ್ಯೋತಿ ಹತ್ತರವಾಟ ಹಾಗೂ ಅವರ ಪುತ್ರಿ ಮೇಘಾ ಅವರ ಶವಗಳು ತಡವಾಗಿ ದೆಹಲಿ ತಲುಪಿದವು. ಹಾಗಾಗಿ, ದೆಹಲಿಯಿಂದ ಗೋವಾಗೆ‌ ಸಂಜೆ 6ಕ್ಕೆ ಇನ್ನೊಂದು ವಿಮಾನದಲ್ಲಿ ಇವರಿಬ್ಬರ ಶವಗಳು ತಲುಪಲಿವೆ. ಬಳಿಕ ಗೋವಾದಿಂದ ಆಂಬ್ಯುಲೆನ್ಸ್ ಮೂಲಕ ಬೆಳಗಾವಿಗೆ ತರಲಾಗುತ್ತದೆ. ರಾತ್ರಿ 8.30ಕ್ಕೆ ಗೋವಾದಿಂದ ರಸ್ತೆ ಮಾರ್ಗವಾಗಿ ‌ಬೆಳಗಾವಿಗೆ ಮೃತದೇಹಗಳನ್ನು ತರಲಾಗುತ್ತದೆ ಎಂದು ತಿಳಿಸಿದರು.

ದೆಹಲಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್ ಗೌರವ ನಮನ : ಪ್ರಯಾಗ್‌ರಾಜ್ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಕರ್ನಾಟಕ ಭವನಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ, ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು.

ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಮೃಣಾಲ್‌ ಹೆಬ್ಬಾಳ್ಕರ್ ಅವರು ಕರ್ನಾಟಕ ಭವನಕ್ಕೆ ಧಾವಿಸಿ ಮೃತಪಟ್ಟವರಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮರಣೋತ್ತರ ಪರೀಕ್ಷೆ ಕುರಿತಾಗಿ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು.

ಇದೇ ವೇಳೆ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮೃಣಾಲ್, ಅವರಿಗೆ ಧೈರ್ಯ ತುಂಬಿದರು. ಬೆಳಗಾವಿಗೆ ಮೃತದೇಹಗಳನ್ನು ಶೀಘ್ರವೇ ಕಳುಹಿಸುವ ಕುರಿತು ಚರ್ಚಿಸಿದರು.

ಇದನ್ನೂ ಓದಿ : ಮಹಾಕುಂಭ ಮೇಳ ಕಾಲ್ತುಳಿತ: ನಾಲ್ವರ ಮೃತದೇಹ, ಗಾಯಾಳುಗಳು ಇಂದು ಬೆಳಗಾವಿಗೆ 'ಏರ್ ಲಿಫ್ಟ್' - MAHAKUMBHA MELA STAMPEDE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.