ETV Bharat / state

ದಾವಣಗೆರೆ ಸಿಲಿಂಡರ್ ಸ್ಫೋಟ ಪ್ರಕರಣ: ಐವರು ಗಾಯಾಳುಗಳ ಪೈಕಿ ಓರ್ವ ಮಹಿಳೆ ಸಾವು - Davangere Cylinder Blast

author img

By ETV Bharat Karnataka Team

Published : Jul 4, 2024, 7:16 AM IST

ದಾವಣಗೆರೆ ಸಂಭವಿಸಿದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಐವರ ಪೈಕಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ ಮಹಿಳೆ ಪಕ್ಕದ ಮನೆಯವರಾಗಿದ್ದು, ಅನಿಲ ಸೋರಿಕೆ ಆಗುತ್ತಿರುವುದನ್ನು ನೋಡಲು ಹೋಗಿದ್ದರು. ಆಗ ಸಿಲಿಂಡರ್​ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

Davangere cylinder blast case
ದಾವಣಗೆರೆ ಸಿಲಿಂಡರ್ ಸ್ಫೋಟ ಪ್ರಕರಣ (ETV Bharat)
ದಾವಣಗೆರೆ ಸಿಲಿಂಡರ್ ಸ್ಫೋಟ ಪ್ರಕರಣ; ಮನೆಯ ದುಸ್ಥಿತಿ (ETV Bharat)

ದಾವಣಗೆರೆ: ಮಂಗಳವಾರ ನಡೆದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐವರ ಪೈಕಿ ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಪಾರ್ವತಮ್ಮ (45) ಮೃತಪಟ್ಟವರು.

ಮೃತ ಪಾರ್ವತಮ್ಮ ಪಕ್ಕದ ಮನೆಯವರಾಗಿದ್ದು, ಅಡುಗೆ ಅನಿಲ ಸೋರಿಕೆ ಆಗ್ತಿದೆ ಎಂದು ನೋಡಲು ಬಂದಾಗ ಸಿಲಿಂಡರ್ ಸ್ಫೋಟಗೊಂಡು ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ ಎಂದು ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ತಿಳಿಸಿದ್ದಾರೆ.

ಇಬ್ಬರ ಸ್ಥಿತಿ ಗಂಭೀರ, ಜೀವನ್ಮರಣ ಹೋರಾಟ: ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ದಾವಣಗೆರೆ ನಗರದ ಎಸ್ಓಜಿ ಕಾಲೋನಿಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿತ್ತು. ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಲಲಿತಮ್ಮ (50), ಸೌಭಾಗ್ಯ (36) ಇಬ್ಬರೂ ಕೂಡ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.‌ ಗಂಭೀರವಾಗಿ ಗಾಯಗೊಂಡಿರುವ ಮಲ್ಲೇಶಪ್ಪ (60), ಪ್ರವೀಣ್ (35) ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: ಸಿಲಿಂಡರ್ ಸ್ಫೋಟ: ಐವರಿಗೆ ಗಂಭೀರ ಗಾಯ, ನಾಲ್ವರ ಸ್ಥಿತಿ ಚಿಂತಾಜನಕ - Cylinder blast

ಅಡುಗೆ ಮಾಡುವಾಗ ಸಿಲಿಂಡರ್ ಸೋರಿಕೆ ಆಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸಿಲಿಂಡರ್ ಸೋರಿಕೆಯಾಗುತ್ತಿದ್ದ ಹಿನ್ನೆಲೆ ಸರಿಪಡಿಸಲು ಪಕ್ಕದ ಮನೆಯ ಪ್ರವೀಣ್ ಅವರನ್ನು ಲಲಿತಮ್ಮ ಕರೆದಿದ್ದರು. ಅಡುಗೆ ಕೋಣೆಗೆ ಆಗಮಿಸಿದ ಪ್ರವೀಣ್ ಅವರು ಲೈಟ್ ಸ್ವಿಚ್ ಹಾಕಿದ ಪರಿಣಾಮ ಸಿಲಿಂಡರ್ ಸ್ಫೋಟ ಆಗಿರುವ ಸಾಧ್ಯತೆ ಇದೆ. ಪ್ರವೀಣ್ ಅವರೊಂದಿಗೆ ಸೌಭಾಗ್ಯ, ಮೃತ ಪಾರ್ವತಮ್ಮ ಕೂಡ ಅನಿಲ ಸೋರಿಕೆ ಬಗ್ಗೆ ಗಮನಿಸಲು ಲಲಿತಮ್ಮ ಅವರ ಮನೆಗೆ ಆಗಮಿಸಿದ್ದರು.‌ ಆ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಲಲಿತಮ್ಮ, ಸೌಭಾಗ್ಯ ಇಬ್ಬರಿಗೂ ದೇಹದಲ್ಲಿ ಶೇ.50 ರಿಂದ 60ರಷ್ಟು ಸುಟ್ಟ ಗಾಯಗಳಾಗಿವೆ. ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

ಇದನ್ನೂ ಓದಿ: ಮುಡಾದಲ್ಲಿ ಬದಲಿ ನಿವೇಶನಗಳ ಹಂಚಿಕೆ ಪ್ರಕರಣ: ಜನಪ್ರತಿನಿಧಿಗಳು ಹೇಳಿದ್ದು ಹೀಗೆ ? - Scam in allotment of replacement

ಮಂಗಳವಾರ ರಾತ್ರಿ ಸಿಲಿಂಡರ್ ಸ್ಫೋಟದ ರಭಸಕ್ಕೆ 2 ಮನೆಗಳಿಗೆ ಭಾರಿ ಹಾನಿ ಆಗಿದೆ. ಸ್ಫೋಟದ ಶಬ್ಧ ಭಯಾನಕವಾಗಿ ಕೇಳಿಸಿದ್ದು, ಇಡೀ ಕಾಲೋನಿ ಜನತೆ ಒಮ್ಮೆಲೆ ಬೆಚ್ಚಿಬಿದ್ದಿದ್ದರು. ಅದು ಬಾಂಬ್ ಬ್ಲಾಸ್ಟ್ ಆದ ಅನುಭವದಂತಿತ್ತು. ಗಾಯಾಳುಗಳನ್ನು ಕಂಡು ಬಹಳ ಬೇಸರವಾಗಿದೆ ಎಂದು ಘಟನೆ ನಡೆದ ದಿನ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.