ದಾವಣಗೆರೆ: ಮನೆಗಳ್ಳತನದಲ್ಲಿ ಸಿಕ್ಕ ಬಂಗಾರ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಆರೋಪಿ ಹಾಗೂ ಆತನಿಗೆ ಸಹಾಯ ಮಾಡುತ್ತಿದ್ದ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಫ್ರೋಜ್ ಅಹಮ್ಮದ್ (42) ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಈತನ ಪ್ರಿಯತಮೆ ಭಾಗ್ಯ ಮತ್ತು ಪ್ರವೀಣ್ ಇತರೆ ಬಂಧಿತರು. ಅಫ್ರೋಜ್ ವಿರುದ್ಧ ಒಟ್ಟು 38 ಮನೆ ಕಳ್ಳತನ ಪ್ರಕರಣಗಳಿದ್ದು, 45 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಫ್ರೋಜ್ ಅಹಮ್ಮದ್ ಜಿಲ್ಲೆಯ ಚನ್ನಗಿರಿ ಪಟ್ಟಣದ ವಡ್ನಾಳ್ ರಾಜಣ್ಣ ಬಡಾವಣೆಯ ನಿವಾಸಿ. ಮದುವೆಯಾದ ಬಳಿಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಸ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಈತನ ವಿರುದ್ಧ ಚನ್ನಗಿರಿ, ಹೊನ್ನಾಳಿ, ಹರಿಹರ, ಭದ್ರಾವತಿ, ಹೊಳಲ್ಕೆರೆ, ದಾವಣಗೆರೆ, ಹರಪನಹಳ್ಳಿ, ಹೊಸದುರ್ಗ ಪೊಲೀಸ್ ಠಾಣೆಗಳಲ್ಲಿ ಮೂವತ್ತಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಮಾರಾಟ ಮಾಡಿದ್ದ ₹45 ಲಕ್ಷದ ಬಂಗಾರ ವಶಕ್ಕೆ: ಆರೋಪಿ ಚಿನ್ನಾಭರಣ ಮಾರಾಟ ಮಾಡಿದ್ದ ಬಂಗಾರದ ಅಂಗಡಿಗಳಿಂದ ಒಟ್ಟು 44,38,000 ರೂಪಾಯಿ ಮೌಲ್ಯದ 634 ಗ್ರಾಂ ಆಭರಣ ಹಾಗೂ 40,000 ರೂಪಾಯಿ ಮೌಲ್ಯದ 550 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ 60,000 ರೂಪಾಯಿ ಮೌಲ್ಯದ ಕೆಎ-17 ಇವಿ-5083ನೇ ಒಂದು ಬೈಕ್ ಹಾಗೂ ಎರಡು ಕಬ್ಬಿಣದ ರಾಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿ ಆತ್ಮಹತ್ಯೆ, ರೈಲು ಸೇವೆಯಲ್ಲಿ ವ್ಯತ್ಯಯ - Man Died by Suicide