ETV Bharat / state

ದಾವಣಗೆರೆ: ಖಾಕಿ ಬಲೆಗೆ ಬಿದ್ದ ಅಂತರ್​​ಜಿಲ್ಲಾ ಕಳ್ಳ - Thief Arrested - THIEF ARRESTED

ಅಂತರ್​​ಜಿಲ್ಲಾ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು, ಆತನಿಂದ ಅಪಾರ ಪ್ರಮಾಣದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

DAVANAGERE POLICE ARRESTED AN INTER-DISTRICT THIEF
ಅಂತರ್​​ಜಿಲ್ಲಾ ಕಳ್ಳ ಸೆರೆ (ETV Bharat)
author img

By ETV Bharat Karnataka Team

Published : Aug 16, 2024, 4:07 PM IST

ದಾವಣಗೆರೆ: ಹಗಲು ಹೊತ್ತು ಮನೆಗಳಿಗೆ ಕನ್ನ ಹಾಕುತ್ತಿದ್ದ ಅಂತರ್‌ಜಿಲ್ಲಾ ಕಳ್ಳನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಗೌತಂರಾಜ್ ಅಲಿಯಾಸ್ ಪೋತ್ ರಾಜ್ (34) ಬಂಧಿತ ಕಳ್ಳ. ಕೂಡ್ಲಿಗಿ ತಾಲೂಕಿನ ಕುಪ್ಪಿನಕೇರೆ ಗ್ರಾಮದವನಾದ ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳಿವೆ.

ಆ.5ರಂದು ಹರಿಹರದ ಗಿರೀಶ್ ಎಂಬವರ ಮನೆಗೆ ಕನ್ನ ಹಾಕಿದ್ದ. ಈ ಬಗ್ಗೆ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ.13ರಂದು ಹರಿಹರ ನಗರದ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿ, 1,67,000 ರೂ. ಬೆಲೆಬಾಳುವ 26.83 ಗ್ರಾಂ ಬಂಗಾರ ಹಾಗೂ 2,450 ರೂ.ಬೆಲೆಯ 46.2 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Davanagere police arrested an inter-district thief
ಆರೋಪಿಯಿಂದ ವಶಕ್ಕೆ ಪಡೆದ ಚಿನ್ನಾಭರಣ (ETV Bharat)

ಗೌತಂರಾಜ್ ವಿರುದ್ಧ ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆಯ ವಿನೋಬ ನಗರ ಠಾಣೆ, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಟೌನ್ ಠಾಣೆ, ಗದಗ ಜಿಲ್ಲೆಯ ಗದಗ ಟೌನ್ ಠಾಣೆ, ಕೊಪ್ಪಳ ಜಿಲ್ಲೆಯ ಕೊಪ್ಪಳ ಟೌನ್ ಮತ್ತು ಮುನಿರಾಬಾದ್ ಠಾಣೆ, ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಠಾಣೆ, ಮೈಸೂರಿನ ನರಸಿಂಹರಾಜ್ ಠಾಣೆ, ರಾಯಚೂರು ಜಿಲ್ಲೆಯ ನೇತಾಜಿ ನಗರ ಠಾಣೆ ಹಾಗೂ ಹರಿಹರ ನಗರ ಪೊಲೀಸ್ ಠಾಣೆ ಸೇರಿ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಕಳ್ಳರ ಪಾಲಾಗಿದ್ದ ಚಿನ್ನಾಭರಣ ವರಮಹಾಲಕ್ಷ್ಮಿ ಹಬ್ಬದ ದಿನವೇ ಮನೆಗೆ ವಾಪಸ್! - Stolen Gold Jewelery Returned Home

ETV Bharat Logo

Copyright © 2024 Ushodaya Enterprises Pvt. Ltd., All Rights Reserved.