ETV Bharat / state

ಮನೆ ಬಿಟ್ಟು ಹೋದ ತಂದೆಗಾಗಿ ಕಾಯುತ್ತಿದೆ ಮಗಳ ಶವ: ಅಂತ್ಯ ಸಂಸ್ಕಾರಕ್ಕೆ ಬರುವಂತೆ ಮನವಿ - DEAD BODY WAITING FOR FATHER - DEAD BODY WAITING FOR FATHER

ರಸ್ತೆ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ್ದು, ಆಕೆಯ ಶವ ಸಂಸ್ಕಾರ ಮಾಡದೇ ಕುಟುಂಬಸ್ಥರು ಮನೆ ಬಿಟ್ಟು ಹೋಗಿರುವ ಯುವತಿಯ ತಂದೆಗಾಗಿ ಕಾಯುತ್ತಿದ್ದಾರೆ.

ಮನೆ ಬಿಟ್ಟು ಹೋದ ತಂದೆಗಾಗಿ ಕಾಯುತ್ತಿದೆ ಮಗಳ ಶವ
ಮನೆ ಬಿಟ್ಟು ಹೋದ ತಂದೆಗಾಗಿ ಕಾಯುತ್ತಿದೆ ಮಗಳ ಶವ (ETV Bharat)
author img

By ETV Bharat Karnataka Team

Published : Aug 6, 2024, 1:46 PM IST

ಶವ ಸಂಸ್ಕಾರಕ್ಕೆ ಬರುವಂತೆ ಮನೆ ಬಿಟ್ಟು ಹೋಗಿರುವ ತಂದೆಗೆ ಮನವಿ (ETV Bharat)

ಮೈಸೂರು: ರಸ್ತೆ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ್ದು, ಮನೆ ಬಿಟ್ಟು ಹೋಗಿರುವ ಆಕೆಯ ತಂದೆ ಅಂತಿಮ ದರ್ಶನಕ್ಕೆ ಬರಬಹುದೆಂದು ಕುಟುಂಬದವರು ಸಾವಿನ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಶವ ಸಂಸ್ಕಾರಕ್ಕೆ ಬರುವಂತೆ ಮನವಿ ಮಾಡಿರುವ ಮನ ಕಲಕುವ ಘಟನೆ ನಗರದ ಕನಕಗಿರಿಯಲ್ಲಿ ನಡೆದಿದೆ.

ನಗರದ ಕನಕಗಿರಿ ನಿವಾಸಿ ನಾಗರಾಜು (ಕೆಂಚಪ್ಪ) ಹಾಗೂ ಇಂದಿರಮ್ಮ ದಂಪತಿ ಪುತ್ರಿ ಎನ್. ಕವನಾ ಸೋಮವಾರ ಬೆಳಗ್ಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೆಲ ತಿಂಗಳ ಹಿಂದೆ ಮನೆ ಬಿಟ್ಟು ಹೋಗಿರುವ ನಾಗರಾಜು ತನ್ನ ಪುತ್ರಿಯ ಅಂತ್ಯ ಸಂಸ್ಕಾರಕ್ಕೆ ಬರಬಹುದೆಂದು ಆಕೆಯ ಪಾರ್ಥಿವ ಶರೀರವನ್ನು ಮನೆ ಬಳಿ ಇಟ್ಟು ಕಾದಿದ್ದಾರೆ. ಎಲ್ಲೇ ಇದ್ದರೂ ಮಂಗಳವಾರ(ಇಂದು) ಮಧ್ಯಾಹ್ನದೊಳಗೆ ಆಗಮಿಸುವಂತೆ ಕುಟುಂಬದವರು ಬೇಡಿಕೊಂಡಿದ್ದಾರೆ.

daughter-dead-body-is-waiting-for-her-father
ಮನೆ ಬಿಟ್ಟು ಹೋದ ತಂದೆಗಾಗಿ ಕಾಯುತ್ತಿದೆ ಮಗಳ ಶವ; ಶವ ಸಂಸ್ಕಾರಕ್ಕೆ ಬರುವಂತೆ ಮನವಿ (ETV Bharat)

ಮುಗಿಲು ಮುಟ್ಟಿದ ರೋಧನ: ನಾಗರಾಜು ಲೋಡಿಂಗ್​ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇವರ ಪತ್ನಿ ಗೃಹಿಣಿಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದರು. ಅದರಲ್ಲಿ ಓರ್ವ ಪುತ್ರಿಯ ವಿವಾಹವಾಗಿದ್ದು, ಮೃತ ಕವನಾ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಇವರ ಸಹೋದರ ಕೆಲಸಕ್ಕೆ ಹೋಗುತ್ತಾರೆ. ಕುಟುಂಬದ ಆಧಾರ ಸ್ತಂಭದಂತಿದ್ದ ತಂದೆ ನಾಗರಾಜು ಯಾವುದೋ ಕಾರಣಕ್ಕೆ ಮೂರು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾರೆ.

ಎಲ್ಲ ಕಡೆ ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿಲ್ಲ. ಮನೆಯ ಯಜಮಾನನಿಲ್ಲದೇ ದುಃಖಲ್ಲಿದ್ದ ಕುಟುಂಬಕ್ಕೆ ಕವನಾ ಅವರ ಸಾವಿನಿಂದ ಬರಸಿಡಿಲು ಬಡಿದಂತಾಗಿದೆ. ತಂದೆ ನಾಗರಾಜು ಕಡೆಯದಾಗಿ ಪುತ್ರಿಯ ಅಂತಿಮ ದರ್ಶನ ಪಡೆಯಲೆಂದು ಕುಟುಂಬಸ್ಥರು ಕಾದಿದ್ದು ಸಾಮಾಜಿಕ ಜಾಲತಾಣದ ಮೂಲಕವೂ ಅವರಿಗೆ ಮಾಹಿತಿ ತಿಳಿಸುವ ಪ್ರಯತ್ನ ನಡೆಸಿದ್ದಾರೆ.

ಅಪಘಾತದಲ್ಲಿ ದಾರುಣ ಸಾವು: ಬಿಸಿಎ ವಿದ್ಯಾರ್ಥಿನಿಯಾಗಿದ್ದ ಕವನಾ ಹಾಗೂ ಸ್ನೇಹಿತೆ ರೇಖಾ ಮತ್ತೋರ್ವ ಸ್ನೇಹಿತೆಯ ಸ್ಕೂಟರ್ ಪಡೆದು ಸೋಮವಾರ ಬೆಳಗ್ಗೆ 11 ಗಂಟೆಗೆ ಹೂಟಗಳ್ಳಿ ಕೆ.ಆರ್.ಎಸ್. ರಸ್ತೆಯಲ್ಲಿ ಹೋಗುತ್ತಿದ್ದಾಗ ಬಿಇಎಂಎಲ್​ ಗೇಟ್​ ಬಳಿ ಅಪಘಾತ ಸಂಭವಿಸಿದೆ. ನಿಯಂತ್ರಣ ಕಳೆದುಕೊಂಡ ಸ್ಕೂಟರ್​ ಡಿವೈಡರ್​ಗೆ ಡಿಕ್ಕಿ ಹೊಡೆದು ನೆಲಕ್ಕುರುಳಿದೆ.

ಘಟನೆಯಲ್ಲಿ ಸ್ಕೂಟರ್ ಚಾಲನೆ ಮಾಡುತ್ತಿದ್ದ ಕವನ ತಲೆಗೆ ತೀವ್ರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಕೆಯ ಸ್ನೇಹಿತೆ ಅದೃಷ್ಟವಶಾತ್​ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕವನ ಹೆಲ್ಮೆಟ್ ಧರಿಸಿದ್ದರಾದರೂ ಅದನ್ನು ಲಾಕ್ ಮಾಡಿರಲಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅಪಘಾತ ಸಂಬಂಧ ವಿವಿ ಪುರಂ ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗಂಡನನ್ನು ಬಿಟ್ಟು ಹೋದ ಪತ್ನಿ, ಕುಡಿದ ಅಮಲಿನಲ್ಲಿ ತಾಯಿ ಮೇಲೆ ಅತ್ಯಾಚಾರ ಎಸಗಿದ ಮಗ! - Son Raped Mother

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.