ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ಮಾಜಿ ಪಿಎ ಪಂಪಣ್ಣನ ಮನೆಯಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ನಡೆಸಿದ ತಪಾಸಣೆ ಇದೀಗ ಮುಕ್ತಾಯಗೊಂಡಿದೆ.
ತಪಾಸಣೆ ಬಳಿಕ ಪಂಪಣ್ಣನನ್ನ ವಶಕ್ಕೆ ಪಡೆದ ಇಡಿ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಅವರೊಂದಿಗೆ ಕರೆದುಕೊಂಡು ಹೋದರು. ಫ್ಲ್ಯಾಟ್ನ ಬೀಗ ಹಾಕಿದ ಪಂಪಣ್ಣ, ಇಡಿ ಅಧಿಕಾರಿಗಳ ಜೊತೆಗೆ ಹೊರಟು ಹೋದರು. ಸ್ಕ್ಯಾನರ್, ಪ್ರಿಂಟರ್ ಸೇರಿದಂತೆ ಮಹತ್ವದ ದಾಖಲೆಗಳನ್ನ ಸಹ ಅಧಿಕಾರಿಗಳು ತೆಗೆದುಕೊಂಡ ಹೋದರು.
ಇನ್ನೂ ಜಾರಿ ನಿರ್ದೇಶನಾಲಯದ ದಾಳಿಯ ಬಿಸಿ ದದ್ದಲ್ ಪತ್ನಿಯ ಸಂಬಂಧಿಗಳಿಗೂ ತಟ್ಟಿದೆ. ದದ್ದಲ್ ಪತ್ನಿಯ ಸಹೋದರಿಯನ್ನು ಹೆಚ್ಚಿನ ವಿಚಾರಣೆಗಾಗಿ ಜಿಲ್ಲೆಯ ದೇವದುರ್ಗದ ಗಲಗ ಗ್ರಾಮದಿಂದ ರಾಯಚೂರಿಗೆ ಕರೆ ತಂದಿದ್ದಾರೆ. ಸುಮಾರು 140 ಕಿ.ಮೀ ದೂರ ಪ್ರಯಾಣಿಸಿ ದದ್ದಲ್ ಸಂಬಂಧಿಗಳನ್ನು ಕರೆ ತಂದು ವಿಚಾರಣೆಯನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳು, ಇಂಜಿನಿಯರ್‌ಗಳ ಮನೆಗಳ ಮೇಲೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ - Lokayukta Raid