ETV Bharat / state

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ವಜಾಗೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ - Appeal To The Governor

author img

By ETV Bharat Karnataka Team

Published : Aug 23, 2024, 6:21 PM IST

ಸಾಂವಿಧಾನಿಕ ಬಾಧ್ಯತೆ ಉಲ್ಲಂಘನೆ ಹಾಗೂ ಹಣಕಾಸು ಅವ್ಯವಹಾರ ಆರೋಪದ ಮೇರೆಗೆ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ವಜಾಕ್ಕೆ ಒತ್ತಾಯಿಸಿ ಬಿಜೆಪಿ ಎಂಎಲ್​ಸಿ ಡಿ.ಎಸ್.ಅರುಣ್ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದಾರೆ.

MLC DS Arun
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದ ಎಂಎಲ್​ಸಿ ಡಿ.ಎಸ್.ಅರುಣ್ (ETV Bharat)

ಬೆಂಗಳೂರು: ರಾಜ್ಯದ ಹಣಕಾಸು ಅವ್ಯವಹಾರ ಮತ್ತು ಸಂಚಿತ ನಿಧಿಯ ದುರುಪಯೋಗ ಹಾಗೂ ಸಂವಿಧಾನದ ಬಾಧ್ಯತೆಯ ಉಲ್ಲಂಘನೆ ಮತ್ತು ಅಸಾಂವಿಧಾನಿಕ ಹಣಕಾಸು ವ್ಯವಹಾರಕ್ಕಾಗಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ವಜಾಗೊಳಿಸುವಂತೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದ್ದು, ಈ ಸಂಬಂಧ ವರದಿಯೊಂದನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.

ರಾಜಭವನಕ್ಕೆ ಭೇಟಿ ನೀಡಿದ ಬಿಜೆಪಿ ಎಂಎಲ್ಸಿ ಡಿ.ಎಸ್.ಅರುಣ್ ರಾಜ್ಯಪಾಲರನ್ನು ಭೇಟಿಯಾಗಿ ವರದಿಯನ್ನು ನೀಡಿದರು. ಬೆಳಗಾವಿ ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆ ಮತ್ತು ಬೆಂಗಳೂರು ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಪಡೆದುಕೊಂಡ ಅಧಿಕೃತ ಉತ್ತರದ ಮಾಹಿತಿಯಲ್ಲಿನ ಅಂಕಿ-ಅಂಶಗಳ ಆಧಾರದಲ್ಲಿ ತನಿಖಾ ವರದಿ ರೂಪದ ಮಾಹಿತಿಯೊಂದಿಗೆ ಸಿಎಂ ವಿರುದ್ಧ ಕ್ರಮಕ್ಕೆ ಮನವಿ ಮಾಡಿದರು.

ಡಿ.ಎಸ್.ಅರುಣ್ ಮನವಿಯ ಸಾರಾಂಶ: ಕರ್ನಾಟಕ ಸರ್ಕಾರವು ಭಾರತದ ಸಂವಿಧಾನದ 202, 205 ಮತ್ತು 206ನೇ ವಿಧಿಗಳ ಅಡಿಯಲ್ಲಿ ಒಳಗೊಂಡಿರುವ ನಿಬಂಧನೆಗಳನ್ನು ಉಲ್ಲಂಘಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 164ನೇ ವಿಧಿ ಅದರಲ್ಲೂ ವಿಶೇಷವಾಗಿ 164(3)ರ ಅಡಿಯಲ್ಲಿರುವ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ. ರಾಜ್ಯದ ಕನ್ಸಾಲಿಡೇಟೆಡ್ ನಿಧಿಯಿಂದ ಅಸಾಂವಿಧಾನಿಕ ಹಣಕಾಸು ವ್ಯವಹಾರಗಳ ಸಂಗತಿಗಳು ನಡೆದಿವೆ.

ಸರ್ವೋಚ್ಚ ನ್ಯಾಯಾಲಯದ/ಹೈಕೋರ್ಟ್​ನ ಹಾಲಿ ನ್ಯಾಯಾಧೀಶರಿಂದ ಗಂಭೀರವಾದ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಖಾತರಿಪಡಿಸುವ ರಾಜ್ಯದ ನಿಧಿಯ ಅಕ್ರಮ ವರ್ಗಾವಣೆ ಮತ್ತು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಣಕಾಸು ಸಚಿವರು ಸಾಬೀತುಪಡಿಸಿದ್ದಾರೆ ಮತ್ತು ಸದನದಲ್ಲಿ ನೀಡಿದ ಉತ್ತರದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಮತ್ತು ನಕಲಿ ಅಧಿಕೃತ ದಾಖಲೆಗಳನ್ನು ಶಾಸಕಾಂಗದ ಮುಂದೆ ಸಲ್ಲಿಸುವ ಮೂಲಕ ನಮ್ಮ ಸಂವಿಧಾನದಲ್ಲಿ ಗೌರವ ಮತ್ತು ವಿಶ್ವಾಸ ಹೊಂದಿಲ್ಲ ಎನ್ನುವ ನಡೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್​ನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಖರ್ಚು ಮಾಡದ ಬಾಕಿ ಅನುದಾನವನ್ನು ಮುಖ್ಯಮಂತ್ರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಕರ್ನಾಟಕ ರಾಜ್ಯದ ಹಣಕಾಸು ಸಚಿವರು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದ್ದಾರೆ.

ಈಗ ನಮ್ಮ ರಾಜ್ಯದಲ್ಲಿ ಕರ್ನಾಟಕ ಸರ್ಕಾರವನ್ನು ನಮ್ಮ ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿ ನಡೆಸಲಾಗದ ಪರಿಸ್ಥಿತಿ ಉದ್ಭವಿಸಿದೆ. ರಾಜ್ಯದ ಕ್ರೋಢೀಕೃತ ನಿಧಿಯ ದುರುಪಯೋಗವು ನಮ್ಮ ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರಗಳ ವೈಫಲ್ಯಕ್ಕೆ ಕಾರಣವಾಗಿದೆ. ಸಂವಿಧಾನಾತ್ಮಕ ನಿಬಂಧನೆಗಳು ಮತ್ತು ಸ್ಥಾನವು ಅನುಚ್ಛೇದ 202 ರ ಅಡಿಯಲ್ಲಿ ಅವರ ರಾಜ್ಯಪಾಲರ ಜವಾಬ್ದಾರಿಯನ್ನು ಸಹ ನಿಗದಿಪಡಿಸುತ್ತದೆ :

"ಪ್ರತಿ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ರಾಜ್ಯದ ಶಾಸಕಾಂಗದ ಸದನ ಅಥವಾ ಸದನಗಳ ಮುಂದೆ ಮಂಡಿಸಲು ಕಾರಣರಾಗುತ್ತಾರೆ. ಆ ವರ್ಷದ ರಾಜ್ಯದ ಅಂದಾಜು ಸ್ವೀಕೃತಿಗಳು ಮತ್ತು ವೆಚ್ಚಗಳ ಹೇಳಿಕೆ, ಈ ಭಾಗದಲ್ಲಿ "ವಾರ್ಷಿಕ ಹಣಕಾಸು ಹೇಳಿಕೆ" ಎಂದು ಉಲ್ಲೇಖಿಸಲಾಗಿದೆ. ಇದು ("ವಾರ್ಷಿಕ ಹಣಕಾಸು ಹೇಳಿಕೆ") ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅನುದಾನ-2 ನ ಖರ್ಚು ಮಾಡದ ಬಾಕಿಗಳನ್ನು ಒಳಗೊಂಡಿದೆ. ಆದರೆ ಇದು ರಾಜ್ಯದ ಕ್ರೋಢೀಕೃತ ನಿಧಿಗೆ ಜಮಾ ಮಾಡಲಾಗಿಲ್ಲ. ಇದು ಅನುಬಂಧ-ಹೆಚ್ ಅನುಬಂಧ-3 ರ ಪ್ಯಾರಾ-4 ಕ್ಕೆ ಬದ್ಧವಾಗಿದೆ. ಈ ಮೂಲಕ ಸಿದ್ದರಾಮಯ್ಯನವರು ನಮ್ಮ ಸಂವಿಧಾನದ 202 ನೇ ವಿಧಿಯ ಅಡಿಯಲ್ಲಿ ಒಳಗೊಂಡಿರುವ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ. ಈ ಮೂಲಕ, ಮುಖ್ಯಮಂತ್ರಿಗಳು ನಮ್ಮ ಸಂವಿಧಾನದ ಮೂರನೇ ಶೆಡ್ಯೂಲ್‌ನಲ್ಲಿ 271 ವಿ ನಮೂನೆಯ ಪ್ರಮಾಣವಚನದ ಅಡಿಯಲ್ಲಿ ಒಳಗೊಂಡಿರುವ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ.

12 ಅಂಶಗಳ ಉಲ್ಲೇಖ ಮಾಡಿರುವ ಡಿ.ಎಸ್.ಅರುಣ್ ಪೂರಕ ಕಡತಗಳನ್ನು ಲಗತ್ತಿಸಿ ಹಣಕಾಸಿನ ದುರುಪಯೋಗದ ತನಿಖೆಗಾಗಿ ರಾಜ್ಯಪಾಲರಿಗೆ ಪ್ರಾರ್ಥನೆ ಮಾಡಿದ್ದಾರೆ. ರಾಜ್ಯದ ಏಕೀಕೃತ ನಿಧಿ ಮತ್ತು ಸಾಂವಿಧಾನಿಕ ಬಾಧ್ಯತೆಯ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ವಜಾ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹೆಚ್ಚಿನ ವಿವರಣೆ ಕೇಳಿ 11 ಮಸೂದೆ ವಾಪಸು ಕಳುಹಿಸಿದ ರಾಜ್ಯಪಾಲರು! - Governor sent back 11 bills

ETV Bharat Logo

Copyright © 2024 Ushodaya Enterprises Pvt. Ltd., All Rights Reserved.