ETV Bharat / state

ಕಲಬುರಗಿಯಲ್ಲಿ ಸಿಲಿಂಡರ್ ಸ್ಫೋಟ: 10ಕ್ಕೂ ಅಧಿಕ ಹೋಟೆಲ್​ ಕಾರ್ಮಿಕರಿಗೆ ಗಾಯ - Cylinder explosion

ಸಿಲಿಂಡರ್ ಸ್ಫೋಟಗೊಂಡಿರುವ ಪರಿಣಾಮ 10ಕ್ಕೂ ಅಧಿಕ ಹೋಟೆಲ್​ ಕಾರ್ಮಿಕರು ಗಾಯಗೊಂಡಿರುವ ಘಟನೆ ಕಲಬುರಗಿ ನಗರ ಅಪ್ಪಾ ಕೆರೆ ಹತ್ತಿರ ಇರುವ ಸಪ್ತಗಿರಿ ಹೋಟೆಲ್​ನಲ್ಲಿ ನಡೆದಿದೆ.

author img

By ETV Bharat Karnataka Team

Published : Jun 21, 2024, 1:24 PM IST

KALABURAGI  CYLINDER EXPLOSION
ಸಿಲಿಂಡರ್ ಸ್ಫೋಟ: 10ಕ್ಕೂ ಅಧಿಕ ಹೋಟೆಲ್​ ಕಾರ್ಮಿಕರು ಗಾಯ (ETV Bharat)
ನಗರ ಪೊಲೀಸ್ ಉಪ ಆಯುಕ್ತೆ ಕನ್ನಿಕಾ ಸಿಕ್ರಿವಾಲ್ ಹಾಗೂ ಹೋಟೆಲ್ ಮಾಲೀಕ ಶರಣಬಸಪ್ಪ ಪ್ರತಿಕ್ರಿಯೆ (ETV Bharat)

ಕಲಬುರಗಿ: ಕಲಬುರಗಿ ನಗರದ ಅಪ್ಪಾ ಕೆರೆ ಹತ್ತಿರ ಇರುವ ಸಪ್ತಗಿರಿ ಹೋಟೆಲ್​ನಲ್ಲಿ ಇಂದು (ಶುಕ್ರವಾರ) ಸಿಲಿಂಡರ್ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ 10ಕ್ಕೂ ಅಧಿಕ ಹೋಟೆಲ್​ ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ.

ಅಡುಗೆ ಸಿಬ್ಬಂದಿ ಉಪಹಾರ ತಯಾರಿಸುವುದರಲ್ಲಿ ನಿರತರಾಗಿದ್ದ ಸಮಯದಲ್ಲಿ ಬೆಳಗ್ಗೆ 6.30ಕ್ಕೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿರುವ ಪರಿಣಾಮ, ಸ್ಥಳದಲ್ಲಿದ್ದ 10ಕ್ಕೂ ಅಧಿಕ ಕಾರ್ಮಿಕರಿಗೆ ಸುಟ್ಟುಗಾಯಗಳಾಗಿವೆ. ಉಳಿದವರು ಹೊರಗೆ ಓಡಿ ಬಂದಿದ್ದಾರೆ. ಗಂಭೀರಗಾಯಗೊಂಡ ಇಬ್ಬರನ್ನು ಟ್ರಾಮಾ ಕೇರ್ ಸೆಂಟರ್‌ಗೆ ಹಾಗೂ ಉಳಿದವರನ್ನು ಜಿಲ್ಲಾಸ್ಪತ್ರೆಯ ಸಾಮಾನ್ಯ ವಾರ್ಡ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಫೋಟದ ರಭಸಕ್ಕೆ ಬಹು ಮಹಡಿ ಕಟ್ಟಡದ ಹಲವೆಡೆ ಹಾನಿಯಾಗಿದೆ. ಹೋಟೆಲ್​ ಟೇಬಲ್​ಗಳು, ಸಾಮಗ್ರಿಗಳು ಚಲ್ಲಾಪಿಲ್ಲಿ ಆಗಿ ಬಿದ್ದಿವೆ. ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಸಿಲಿಂಡರ್ ಸ್ಪೋಟದ ಬಾರಿ ಸದ್ದು ಕೇಳಿದ್ದರಿಂದ ಜನ ಆತಂಕಗೊಂಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಹೋಟೆಲ್ ಮಾಲೀಕ ಶರಣಬಸಪ್ಪ ಪ್ರತಿಕ್ರಿಯಿಸಿ, ''ಹೋಟೆಲ್​ ಅನ್ನು ಬೆಳಿಗ್ಗೆ 8 ಗಂಟೆಗೆ ತೆರೆಯಲಾಗುತ್ತದೆ. ಆದರೆ, ಘಟನೆ ಇಂದು ಬೆಳಗ್ಗೆ 6-30ಕ್ಕೆ ನಡೆದಿದ್ದು, ಹೋಟೆಲ್​ಗೆ ಗ್ರಾಹಕರು ಬಾರದಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಅಂದಾಜು ಆರು ಜನರಿಗೆ ಗಾಯಗಳಾಗಿದ್ದು, ಇಬ್ಬರು ಗಂಭೀರಗಾಯಗೊಂಡಿದ್ದಾರೆ'' ಎಂದು ಅವರು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ ನಗರ ಪೊಲೀಸ್ ಉಪ ಆಯುಕ್ತೆ ಕನ್ನಿಕಾ ಸಿಕ್ರಿವಾಲ್ ಅವರು, ''ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟ ಎಂಬಂತೆ ಕಂಡುಬಂದಿದೆ. ಸಂಪೂರ್ಣ ತನಿಖೆ ನಂತರ ಸತ್ಯಾಂಶ ತಿಳಿದುಬರಲಿದೆ'' ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನಿರ್ಮಾಣ ಹಂತದ ಬ್ಯಾಂಕ್ ಕಟ್ಟಡದ ಸೆಂಟ್ರಿಂಗ್ ಕುಸಿತ: ತಪ್ಪಿದ ಭಾರಿ ದುರಂತ, ಇಬ್ಬರಿಗೆ ಗಾಯ - CENTERING COLLAPSED IN SHIVAMOGGA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.