ETV Bharat / state

35 ಸಾವಿರ ಕೋಟಿ ರೂ. ಬೆಳೆ ನಷ್ಟ ಆಗಿದ್ದು, ಕೇಂದ್ರದಿಂದ ಬರ ಪರಿಹಾರ ಒಂದು ರೂಪಾಯಿ ಸಹ ಬಿಡುಗಡೆ ಇಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳ ನಿರ್ಮಾಣ ಹಂತದಲ್ಲಿದ್ದು, ಕಳಪೆ ಬಗ್ಗೆ ತನಿಖೆ ಮುಂದುವರಿದಿದೆ. ಮೆಡಿಕಲ್ ಕಾಲೇಜಿನ ಕಾಂಟ್ರಾಕ್ಟರ್​ಗಳಿಗೆ ಕಂಡೀಷನ್ ಮೇಲೆ‌ ಬಿಲ್ ಬಿಡುಗಡೆ ಮಾಡ್ತೀವಿ. ಆದರೆ ತನಿಖೆಯನ್ನು ಸಹ ಮಾಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

CM Siddaramaiah spoke in the news conference.
ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By ETV Bharat Karnataka Team

Published : Feb 18, 2024, 9:41 PM IST

ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಾವೇರಿ: ರಾಜ್ಯದಲ್ಲಿ ಭ್ರಷ್ಟಾಚಾರ ಇಲ್ಲ ಅಂತ ಯಾರು ಹೇಳಿದ್ದು? ಭ್ರಷ್ಟಾಚಾರ ಕಡಿಮೆ ಮಾಡ್ತೀವಿ ಅಂತ ಹೇಳಿದ್ದೇವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಲೋಕಾಯುಕ್ತ ಟ್ರ್ಯಾಪ್ ಆಗಿದ್ದ ರಾಣೆಬೆನ್ನೂರು ತಹಶೀಲ್ದಾರ್ ಮತ್ತೆ ಅದೇ ಹುದ್ದೆಗೆ ಬಂದ ವಿಚಾರ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ದೇಶದ ಸಂಪತ್ತಿಗೆ ಅಲ್ಪಸಂಖ್ಯಾತರು ಮೊದಲ ಹಕ್ಕುದಾರರು ಎಂಬ ತಮ್ಮ ಹೇಳಿಕೆ ಸಮರ್ಥನೆ ಮಾಡಿಕೊಂಡರು. ಎಲ್ಲರೂ ಹಕ್ಕುದಾರರೇ. ಮುಸ್ಲಿಂ ಅಲ್ಪಸಂಖ್ಯಾತರು ಸೇರಿದಂತೆ 140 ಕೋಟಿ ಜನರು ಹಕ್ಕುದಾರರೇ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಐದು ತಿಂಗಳಲ್ಲಿ ಎರಡು ಮನವಿ ಕೊಟ್ಟಿದ್ದೇವೆ. ರಾಜ್ಯದಲ್ಲಿ ಬರಗಾಲದಿಂದಾಗಿ 35,000 ಕೋಟಿ ರೂ.ಗಳಷ್ಟು ಬೆಳೆ ನಷ್ಟ ಆಗಿದೆ. 18,171 ಸಾವಿರ ಕೋಟಿ ಬೆಳೆ ಪರಿಹಾರ ಕೇಳಿದ್ದೇವೆ. ಇವತ್ತಿನ ವರೆಗೆ ಮೀಟಿಂಗ್ ಮಾಡಿಲ್ಲ. ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮೆಡಿಕಲ್ ಕಾಲೇಜು ನಿರ್ಮಾಣದ ತನಿಖೆ ಮಾಡ್ತೀವಿ : ಮೆಡಿಕಲ್ ಕಾಲೇಜು ಪರಿಶೀಲನೆ ಮಾಡ್ತಾ ಇದ್ದೇವೆ. ಹಾಸ್ಟೆಲ್ ಬಿಲ್ಡಿಂಗ್​ಗಳು ಕಂಪ್ಲೀಟ್ ಆಗಬೇಕು ಎಂದು ತಿಳಿಸಿದ ಸಿಎಂ, ರಾಜ್ಯದಲ್ಲಿ ಒಟ್ಟು ನಾಲ್ಕು ಮೆಡಿಕಲ್ ಕಾಲೇಜುಗಳ ನಿರ್ಮಾಣದ ಬಗ್ಗೆ ತನಿಖೆ ನಡೆದಿದೆ. ಮೆಡಿಕಲ್ ಕಾಂಟ್ರಾಕ್ಟರ್ ಗಳಿಗೆ ಕಂಡೀಷನ್ ಮೇಲೆ‌ ಬಿಲ್ ಕೊಡೋ ತರ ಮಾಡಿದ್ದೇವೆ. ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ಕೆಲಸ ಮಾಡಿದ್ದಕ್ಕೆ ದುಡ್ಡು ಕೊಡ್ತೇವೆ. ಆದರೆ ತನಿಖೆ ಮಾಡ್ತೀವಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಒಬಿಸಿ ಹಾಸ್ಟೆಲ್​ಗಳಿಗೆ ಅಕ್ಕಿ ಕೊರತೆ ಇಲ್ಲ: ಒಬಿಸಿ ಹಾಸ್ಟೆಲ್​ಗಳಿಗೆ ಅಕ್ಕಿ ಕೊರತೆ ವಿಚಾರ ಕುರಿತಂತೆ ಮಾತನಾಡಿದ ಸಿಎಂ, ಅಕ್ಕಿಗೇನು ತೊಂದರೆ ಇಲ್ಲ. ಎಲ್ಲ ಹಾಸ್ಟೆಲ್​ಗಳಿಗೂ ಅಕ್ಕಿ ಕೊಡ್ತಿದ್ದೇವೆ ಎಂದರು. ಹಾವೇರಿ ಜಿಲ್ಲೆಯ ಹಲವೆಡೆ ತುಂಗಭದ್ರಾ ನದಿ ದಡದಲ್ಲಿ ಅಕ್ರಮ ಮರಳು ದಂಧೆ ನಡೆದ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ, ತನಿಖೆ ನಡೆದಿದೆ, ಖಂಡಿತವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು‌.

ಅಲ್ಪಸಂಖ್ಯಾತರಿಗೆ ಬಜೆಟ್​ನಲ್ಲಿ ಕೊಟ್ಟಿದ್ದು ಕೇವಲ 0.8ರಷ್ಟು: ಸಿದ್ದರಾಮಯ್ಯ

ಅಲ್ಪಸಂಖ್ಯಾತರಿಗೆ ಬಜೆಟ್​ನಲ್ಲಿ ಕೊಟ್ಟಿದ್ದು ಕೇವಲ 0.8ರಷ್ಟು ಮಾತ್ರ ಎಂದು 2024-25ನೇ ಸಾಲಿನ ರಾಜ್ಯ ಬಜೆಟ್​ನಲ್ಲಿ ಅಲ್ಪಸಂಖ್ಯಾತರಿಗೆ ಕೊಡುಗೆ ಜಾಸ್ತಿ ನೀಡಲಾಗಿದೆ ಎಂಬ ಆರೋಪಕ್ಕೆ ಮಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದರು. ''ಈ ಬಾರಿಯ ಬಜೆಟ್ ಗಾತ್ರ 3 ಲಕ್ಷ 71 ಸಾವಿರ ಕೋಟಿ ರೂಪಾಯಿ. ಇದರಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ್ದು 3,000 ಕೋಟಿ ರೂಪಾಯಿ. ಅಲ್ಪಸಂಖ್ಯಾತರ ಜನಸಂಖ್ಯೆ ರಾಜ್ಯದಲ್ಲಿ ಶೇ.14ರಷ್ಟಿದೆ. ಆದರೆ, ಅವರಿಗೆ ಬಜೆಟ್​ನಲ್ಲಿ ಕೊಟ್ಟಿದ್ದು ಶೇಕಡಾ 0.8ರಷ್ಟು ಮಾತ್ರ, ಇದು ಜಾಸ್ತಿಯಾ'' ಎಂದು ಸಿಎಂ ಪ್ರಶ್ನಿಸಿದರು.

ಇದನ್ನೂ ಓದಿ:50 ನೂತನ ಬಸ್​ಗಳ ಲೋಕಾರ್ಪಣೆ; ಅಪಘಾತ ರಹಿತ 38 ಚಾಲಕರಿಗೆ ಸಚಿವ ರಾಮಲಿಂಗಾರೆಡ್ಡಿ ಸನ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.