ETV Bharat / state

ಕ್ರಿಕೆಟ್ ಪಂದ್ಯದ ಬಳಿಕ ಹೃದಯಾಘಾತ: ಕರ್ನಾಟಕದ ಕ್ರಿಕೆಟಿಗ ಸಾವು - ಹೊಯ್ಸಳ ಕೆ

ಹೃದಯಾಘಾತದಿಂದ ಕರ್ನಾಟಕದ ಕ್ರಿಕೆಟಿಗ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೃದಯಾಘಾತದಿಂದ ಕರ್ನಾಟಕದ ಕ್ರಿಕೆಟಿಗ ಸಾವು
ಹೃದಯಾಘಾತದಿಂದ ಕರ್ನಾಟಕದ ಕ್ರಿಕೆಟಿಗ ಸಾವು
author img

By ETV Bharat Karnataka Team

Published : Feb 22, 2024, 10:43 PM IST

ಬೆಂಗಳೂರು: ತೀವ್ರ ಹೃದಯಾಘಾತದಿಂದ ಕರ್ನಾಟಕದ ಕ್ರಿಕೆಟಿಗ ಹೊಯ್ಸಳ. ಕೆ (34) ಮೃತಪಟ್ಟಿದ್ದಾರೆ‌. ಬೆಂಗಳೂರಿನಲ್ಲಿ ನಡೆದ ಏಜಿಸ್ ಸೌತ್ ಝೋನ್ ಟೂರ್ನಿಯ ನಡುವೆ ದುರ್ಘಟನೆ ಸಂಭವಿಸಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಹೊಯ್ಸಳ ಸಾವನ್ನಪ್ಪಿದ್ದಾರೆ. ಇತ್ತ ಹೊಯ್ಸಳ ಪೋಷಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.

ಬೆಂಗಳೂರಿನ ಆರ್.ಎಸ್.ಐ ಮೈದಾನದಲ್ಲಿ ನಡೆಯುತ್ತಿದ್ದ ಏಜಿಸ್ ಸೌತ್ ಝೋನ್ ಟೂರ್ನಿಯ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಹೊಯ್ಸಳ ಕಣಕ್ಕಿಳಿದಿದ್ದರು. ರೋಚಕ ಹಣಾಹಣಿಯಲ್ಲಿ ಜಯ ಗಳಿಸಿದ್ದ ಕರ್ನಾಟಕ ತಂಡದ ಆಟಗಾರರು ಭೋಜನಕ್ಕೆ ತೆರಳುವ ಮುನ್ನ ದಿಢೀರನೇ ಹೊಯ್ಸಳ ಕುಸಿದು ಬಿದ್ದಿದ್ದಾರೆ. ತಕ್ಷಣ ಪರಿಶೀಲನೆ ನಡೆಸಿದ ಮೈದಾನದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಲು ಯತ್ನಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದಿದ್ದಾಗ ಕೂಡಲೇ ಅವರನ್ನ ಆಂಬ್ಯುಲೆನ್ಸ್ ಮೂಲಕ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ನಡುವೆಯೇ ಅವರ ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದೆ.

ಆದರೆ ಹೊಯ್ಸಳರನ್ನ ತಪಾಸಣೆ ನಡೆಸಿದ ಬೌರಿಂಗ್ ಆಸ್ಪತ್ರೆ ವೈದ್ಯರು ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಬೌಲರ್​ ಆಗಿದ್ದ ಹೊಯ್ಸಳ 25 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕ ತಂಡವನ್ನ ಪ್ರತಿನಿಧಿಸಿದ್ದರು. ಅಲ್ಲದೆ ಕರ್ನಾಟಕ ಪ್ರೀಮಿಯಲ್ ಲೀಗ್‌ನಲ್ಲಿಯೂ ಕಣಕ್ಕಿಳಿದಿದ್ದರು.

ಇದನ್ನೂ ಓದಿ: ಐಪಿಎಲ್​ನಿಂದ ಸ್ಟಾರ್​ ಬೌಲರ್​ ಮೊಹಮ್ಮದ್ ಶಮಿ ಔಟ್​: ಗುಜರಾತ್​ ಟೈಟಾನ್ಸ್​ಗೆ ಆಘಾತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.