ETV Bharat / state

ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ 2 ಹುದ್ದೆಯ ಮೇಲೆ 'ಶಾಸಕಿ ರೂಪಕಲಾ ಪತಿಯ ಕಣ್ಣು'? - Karnataka Assembly Secretariat

author img

By ETV Bharat Karnataka Team

Published : Jul 21, 2024, 7:15 AM IST

Updated : Jul 21, 2024, 8:05 AM IST

ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆ ಸೃಷ್ಟಿಸಲಾಗಿದ್ದು, ಈ ಹುದ್ದೆಯನ್ನು ಮುಖ್ಯ ವಿಭಾಗದ ಜಂಟಿ ಕಾರ್ಯದರ್ಶಿಗೆ ನೀಡಬೇಕೆಂದು ಸ್ಪೀಕರ್​ಗೆ ಸಚಿವಾಲಯದ ನೌಕರರ ಸಂಘ ಮನವಿ ಮಾಡಿದೆ.

ವಿಧಾನಸಭೆ
ವಿಧಾನಸಭೆ (ETV Bharat)

ಬೆಂಗಳೂರು: ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆ ಸೃಷ್ಟಿಸಲಾಗಿದೆ. ಇದು ಮುಖ್ಯ ವಿಭಾಗದ (ಜನರಲ್ ವಿಂಗ್) ಅಧಿಕಾರಿ ವರ್ಗದಲ್ಲಿ ಅನುಮಾನ ಮೂಡಿಸಿದೆ. ಹುದ್ದೆ ಸೃಷ್ಟಿ ಹಿಂದೆ ರಾಜಕೀಯ ಒತ್ತಡದ ಶಂಕೆಯನ್ನು ಸಚಿವಾಲಯದ ನೌಕರರ ಸಂಘದ ಪ್ರತಿನಿಧಿಗಳು ವ್ಯಕ್ತಪಡಿಸಿದ್ದು, ಶನಿವಾರ ಸ್ಪೀಕರ್​ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ವಿಧಾನಸಭೆ ಸಚಿವಾಲಯದಲ್ಲಿ ಕಾರ್ಯದರ್ಶಿ-2 ಹುದ್ದೆ ಸೃಜಿಸಲು ಆರ್ಥಿಕ ಇಲಾಖೆ ಸಹಮತಿ ಸೂಚಿಸಿದೆ. ಹೊಸ ಕಾರ್ಯದರ್ಶಿ ಹುದ್ದೆಯನ್ನು ವಿಧಾನಸಭೆ ಮುಖ್ಯ ವಿಭಾಗದಲ್ಲಿನ ಅಧಿಕಾರಿಗಳಿಗೆ ನೀಡಬೇಕು. ಕಂಪ್ಯೂಟರ್ ವಿಭಾಗದ ಅಧಿಕಾರಿಗಳನ್ನು ಇದಕ್ಕೆ ಪರಿಗಣಿಸಬಾರದು. ಕಂಪ್ಯೂಟರ್ ವಿಭಾಗದ ಅಧಿಕಾರಿಗಳಿಗೆ ಹುದ್ದೆ ನೀಡಿದರೆ, ಮುಖ್ಯ ವಿಭಾಗದ ಅಧಿಕಾರಿ ವರ್ಗಕ್ಕೆ ಅನ್ಯಾಯವಾಗುತ್ತದೆ. ಹೀಗಾಗಿ ಜೇಷ್ಠತೆ ಆಧಾರದಲ್ಲಿ ಜಂಟಿ ಕಾರ್ಯದರ್ಶಿಗೆ ಈ ಹುದ್ದೆ ನೀಡಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಮುಖ್ಯ ವಿಭಾಗದ ಸಂಘದವರು ಎಚ್ಚರಿಸಿದ್ದಾರೆ.

ವಿಧಾನಸಭೆ ಸಚಿವಾಲಯದ ನೌಕರರ ಸಂಘ ಮನವಿ ಕರಪತ್ರ
ವಿಧಾನಸಭೆ ಸಚಿವಾಲಯದ ನೌಕರರ ಸಂಘ ಮನವಿ ಕರಪತ್ರ (ETV Bharat)

ಆತಂಕವೇನು?: ಹೊಸ ಕಾರ್ಯದರ್ಶಿ 2 ಹುದ್ದೆಗೆ ಸಚಿವಾಲಯದ ಕಂಪ್ಯೂಟರ್ ವಿಭಾಗದ ಅಧಿಕಾರಿಗೆ ಬಡ್ತಿ ನೀಡಿ ನೇಮಿಸುವ ಆತಂಕ ಮುಖ್ಯ ವಿಭಾಗದ ಅಧಿಕಾರಿಗಳದ್ದು. ಇದರಿಂದ ಹಲವು ವರ್ಷಗಳಿಂದ ಕರ್ತವ್ಯ ಸಲ್ಲಿಸುತ್ತಿರುವ ಮುಖ್ಯ ವಿಭಾಗದ ಜೇಷ್ಠ ಅಧಿಕಾರಿ ಕಾರ್ಯದರ್ಶಿ ಹುದ್ದೆಯಿಂದ ವಂಚಿತರಾಗುತ್ತಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ ಕೆಲವು ವರ್ಷಗಳಿಂದಲೂ ಮುಖ್ಯ ವಿಭಾಗದ ಹುದ್ದೆಗಳಿಗೆ ಮುಂಬಡ್ತಿ ಪಡೆಯಲು ಗಣಕ ವಿಭಾಗದ ಅಧಿಕಾರಿಗಳು/ನೌಕರರು ಪ್ರಯತ್ನಿಸುತ್ತಿದ್ದಾರೆ. ಸಚಿವಾಲಯದ ಕಾರ್ಯವ್ಯವಸ್ಥೆ ಅರಿತ ಹಿಂದಿನ ಸಭಾಧ್ಯಕ್ಷರ ಯಾರೂ ಇದಕ್ಕೆ ಅವಕಾಶ ನೀಡಿರಲಿಲ್ಲ. ಗಣಕ ಕೇಂದ್ರದ ಅಧಿಕಾರಿ/ನೌಕರರಿಗೆ ಅವರದೇ ವಿಭಾಗದಲ್ಲಿ ಹುದ್ದೆ ಸೃಜಿಸುವ/ಮೇಲ್ದರ್ಜೇಗೇರಿಸುವ ಮೂಲಕ ಮುಂಬಡ್ತಿ ಅವಕಾಶ ದೊರಕಿಸಿಕೊಡಬೇಕು. ಯಾವುದೇ ಕಾರಣಕ್ಕೂ ಮುಖ್ಯ ವಿಭಾಗದಲ್ಲಿ ಅವರಿಗೆ ಮುಂಬಡ್ತಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

'ಹುದ್ದೆಯ ಮೇಲೆ ಶಾಸಕಿ ರೂಪಕಲಾ ಪತಿಯ ಕಣ್ಣು': ಸಚಿವ ಕೆ.ಹೆಚ್.ಮುನಿಯಪ್ಪ ಅವರ ಪುತ್ರಿ ಕೆಜಿಎಫ್ ಶಾಸಕಿ ರೂಪಕಲಾ ಅವರ ಪತಿ ಜೆ.ಇ.ಶಶಿಧರ್ ವಿಧಾನಸಭೆ ಸಚಿವಾಲಯದ ಕಂಪ್ಯೂಟರ್ ಕೇಂದ್ರದ ನಿರ್ದೇಶಕರಾಗಿದ್ದಾರೆ. ಜೆ.ಇ.ಶಶಿಧರ್ ತಮ್ಮ ಮಾವ ಮುನಿಯಪ್ಪರ ಪ್ರಭಾವ ಬಳಸಿ ಹೊಸ ಕಾರ್ಯದರ್ಶಿ-2 ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದು ಮುಖ್ಯ ವಿಭಾಗದ ಅಧಿಕಾರಿ ವರ್ಗದ ಆರೋಪ.

ಈ ಹುದ್ದೆ ಸೃಜನೆ ಹಿಂದೆಯೂ ಜೆ.ಇ.ಶಶಿಧರ್ ರಾಜಕೀಯ ಪ್ರಭಾವ ಇದೆ ಎಂಬ ಅನುಮಾನವನ್ನೂ ನೌಕರರು ವ್ಯಕ್ತಪಡಿಸಿದ್ದಾರೆ. ಸುಮಾರು ಇನ್ನೂ 13 ವರ್ಷ ಸೇವಾವಧಿ ಹೊಂದಿರುವ ಶಶಿಧರ್ ಅವರು ಹಾಲಿ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರ ನಿವೃತ್ತಿ ನಂತರ ಆ ಸ್ಥಾನ ಪಡೆಯಲು ಈಗಲೇ ಕಾರ್ಯದರ್ಶಿ-2 ಹುದ್ದೆಗೆ ಲಾಬಿ ನಡೆಸುತ್ತಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಅವರಿಗೆ ಬಡ್ತಿ ನೀಡಿದರೆ, ಮುಂದೆ ಕಾರ್ಯದರ್ಶಿ ಹುದ್ದೆ ಅವರ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಇತ್ತ, ಮುಖ್ಯ ವಿಭಾಗದ ಜಂಟಿ ಕಾರ್ಯದರ್ಶಿಗೆ ಅರ್ಹತೆ ಇದ್ದರೂ ವಿಧಾನಸಭೆ ಕಾರ್ಯದರ್ಶಿ ಹುದ್ದೆ ತಪ್ಪಲಿದೆ ಎಂದು ಅಧಿಕಾರಿಯೊಬ್ಬರು ದೂರಿದ್ದಾರೆ.

ಇದನ್ನೂ ಓದಿ: ನಿಗದಿತ ಮೀಸಲಾತಿಗೆ ಅರ್ಹ ಅಭ್ಯರ್ಥಿ ಆಯ್ಕೆ ಮಾಡಲು ಕೆಇಎಗೆ ಹೈಕೋರ್ಟ್ ನಿರ್ದೇಶನ

Last Updated : Jul 21, 2024, 8:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.