ಬೆಂಗಳೂರು : 34 ವರ್ಷಗಳ ನಂತರ ಜಿಗಣಿ ಪುರಸಭೆಯ ಬಿಜೆಪಿ ಭದ್ರ ಕೋಟೆಯನ್ನ ಭೇದಿಸಿ ಕಾಂಗ್ರೆಸ್ ಬಾವುಟ ಹಾರಿಸಿದೆ. ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಚುನಾವಣಾಧಿಕಾರಿ ನೇತೃತೃದಲ್ಲಿ ಇಂದು ನಿಗದಿಯಾಗಿದ್ದ ಜಿಗಣಿ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ರಂಗೇರಿತ್ತು.
ನಿರ್ಧರಿತ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಅನ್ವಯ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಬಹುತೇಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅದರಂತೆ ಪುರಸಭೆಯ 16ನೇ ವಾರ್ಡ್ನ ಶ್ರೀಮತಿ ಅರುಣಾ ಪ್ರಹ್ಲಾದ್ ರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ 3ನೇ ವಾರ್ಡ್ನ ಶ್ರೀಮತಿ ಸವಿತಾ ಮುರಳಿ ಆಯ್ಕೆ ಆಗಿದ್ದಾರೆ.
ಪಕ್ಷದ ಬಲಾಬಲದಲ್ಲಿ ಕಾಂಗ್ರೆಸ್ 16 ಸಂಖ್ಯಾಬಲ ಹೊಂದಿದೆ. ಬಿಜೆಪಿ 07 ರ ಸಂಖ್ಯಾಬಲ ಹೊಂದಿದೆ.
ಮತ್ತೆ ಶಾಸಕ ಹಾಗೂ ಸಂಸದರು ಬಿಜೆಪಿ ಪಕ್ಷದವರಾಗಿದ್ದು, ಬಲಾಬಲದಲ್ಲಿ 09 ಸ್ಥಾನದ ಮತ ಬಿಜೆಪಿಯದ್ದಾಗಿತ್ತು.
ಉಳಿದ 16 ಕಾಂಗ್ರೆಸ್ ಸಂಖ್ಯಾಬಲ ಹೊಂದಿದ್ದು, ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ.
ಇದನ್ನೂ ಓದಿ : ಮಂಡ್ಯ ನಗರಸಭೆಯಲ್ಲಿ ಎನ್ಡಿಎಗೆ ಅಧಿಕಾರ; ಕೈ ಆಪರೇಷನ್ಗೆ ಹೆಚ್ಡಿಕೆ ರಿವರ್ಸ್ ಆಪರೇಷನ್ - MANDYA MUNICIPAL CORPORATION