ETV Bharat / state

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನ: ಭವಿಷ್ಯ ನುಡಿದ ಮಾಜಿ ಪ್ರಧಾನಿ ಹೆಚ್​ಡಿಡಿ - Deve Gowda Campaign - DEVE GOWDA CAMPAIGN

ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಮತಯಾಚನೆ ನಡೆಸಿದರು.

ಮಾಜಿ ಪ್ರಧಾನಿ ಹೆಚ್​ಡಿಡಿ
ಮಾಜಿ ಪ್ರಧಾನಿ ಹೆಚ್​ಡಿಡಿ
author img

By ETV Bharat Karnataka Team

Published : Apr 20, 2024, 7:37 AM IST

ಮಾಜಿ ಪ್ರಧಾನಿ ಹೆಚ್​ಡಿಡಿ

ಚಿಕ್ಕಬಳ್ಳಾಪುರ: ನನ್ನ ರಾಜಕೀಯ ಅನುಭವದಿಂದ ಹೇಳುತ್ತಿದ್ದು‌, 2024ರ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಕೆಲವೇ ದಿನಗಳಲ್ಲಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಬಾಬು ಪರ ಮತಯಾಚನೆ ನಡೆಸುವ ವೇಳೆ ಭವಿಷ್ಯ ನುಡಿದಿದ್ದಾರೆ.

ಶಿಡ್ಲಘಟ್ಟ ಹಾಗೂ ಚಿಂತಾಮಣಿ ಕ್ಷೇತ್ರದ ಮಧ್ಯಭಾಗದಲ್ಲಿರುವ ವೈ ಹುಣಸೇನಹಳ್ಳಿ ಸಮೀಪ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ನನಗೆ ವಯಸ್ಸು 91. ರಾಜ್ಯದ ಲೋಕಸಭಾ ಅಭ್ಯರ್ಥಿಯಾಗಿ ನಿಂತಿರುವ 28 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಅಭ್ಯರ್ಥಿ ಪರ ಪ್ರಚಾರ ಮಾಡಲು ನಿರ್ಧಾರ ಮಾಡಿದ್ದೇನೆ. ನಾನು ಸಾಮಾನ್ಯ ರೈತನ ಮಗನಾಗಿ ಪಕ್ಷೇತರ ಅಭ್ಯರ್ಥಿಯಾಗಿ ಮೊದಲು ವಿಧಾನಸಭೆಗೆ ಪ್ರವೇಶ ಮಾಡಿದ್ದೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಂತಾಮಣಿ ಶಾಸರಾಗಿದ್ದ ಕೃಷ್ಣರೆಡ್ಡಿ ಅವರ ಸೋಲು ಸಾಕಷ್ಟು ನೋವು ತರಿಸಿತು. ಆದರೆ, ಈ 2024ರ ಲೋಕಸಭಾ ಚುನಾವಣೆ ಮುಗಿದ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ. ಇದರ ಬಗ್ಗೆ ನಾನು ಮಾತನಾಡಬೇಕಾದರೆ ಸ್ವಲ್ಪ ಅನುಭವದಿಂದ ಮಾತನಾಡುತ್ತೇನೆಂದು ಸ್ಪಷ್ಟಪಡಿಸಿದರು.

ಸ್ವಾತಂತ್ರ್ಯ ಬಂದ ಮೇಲೆ ಅಂಬೇಡ್ಕರ್ ಸಂವಿಧಾನ ಬರೆದವರು. ಅಂತಹವರನ್ನು ಲೋಕಸಭೆ ಗೆಲ್ಲಲು ಕಾಂಗ್ರೆಸ್​ನವರು ಬಿಡಲಿಲ್ಲ. ಉತ್ತರ ಪ್ರದೇಶದಲ್ಲಿ ನೆಹರೂ ಹದಿನೈದು ವರ್ಷ, ಇಂದಿರಾ, ರಾಜೀವ್ ಗಾಂದಿ ನಿರಂತರವಾಗಿ ನಲವತ್ತು ವರ್ಷ ಆಳಿದರು. ಅಟಲ್ ಬಿಹಾರಿ ವಾಜಪೇಯಿ ಅವರು 13 ದಿನ ಮಾತ್ರ ಪ್ರಧಾನಿ ಆಗಿದ್ದರು. ಅವರಿಗೆ ಮೆಜಾರಿಟಿ ತೋರಿಸಲು ಆಗಲಿಲ್ಲ. ಅವರ ವಿರುದ್ಧ ನಿಲ್ಲುವ ಎದೆಗಾರಿಕೆ ಆಗ ಯಾರಿಗೂ ಇರಲಿಲ್ಲ. ಆ ವೇಳೆ ದೇವೇಗೌಡರು ಅನಿವಾರ್ಯವಾಗಿ ಬೇಕಿತ್ತು. ರಾಹುಲ್ ಗಾಂಧಿ ಇಲ್ಲಿಗೆ ಬಂದು ನಮ್ಮ ಪಕ್ಷದ ಅಭ್ಯರ್ಥಿ ಸೋಲಿಸಿ ಅಂತಿದ್ದಾರೆ. ದೇವೇಗೌಡರು ಬಿಜೆಪಿಯ ಬಿ ಟೀಂ ಮುಖಂಡ ಅಂತಲೂ ಲೇವಡಿ ಮಾಡಿದ್ದಾರೆ. ಇವತ್ತು ಕಾಂಗ್ರೆಸ್ ಐದು ಗ್ಯಾರಂಟಿ ತೋರಿಸಿ ಚುನಾವಣೆಗೆ ಬಂದಿದೆ. ಆದರೆ ಎನ್​ಡಿಎ ಇಪ್ಪತ್ತೈದು ಗ್ಯಾರಂಟಿ ಕೊಟ್ಟಿದೆ. ಕುಮಾರಸ್ವಾಮಿ ರೈತರಿಗಾಗಿ 25 ಸಾವಿರ ಕೋಟಿ ಸಾಲ ಮನ್ನಾ ಕೊಟ್ಟಿರೋದು ಕಾಣ್ತಿಲ್ವ? ಬೆಂಗಳೂರಲ್ಲಿ ನೀರಿಗೆ ಅಭಾವ ಎದುರಾಗಿದೆ. ಇದನ್ನು ನಿಭಾಯಿಸೋಕೆ ಮಹಾನುಭಾವರಿಗೆ ಆಗ್ತಿಲ್ಲ. ಬಿಡಿಎ, ವಾಟರ್ಸ್ ಸಪ್ಲೆ, ಪ್ಲಾನಿಂಗ್ ಅಥಾರಿಟಿ ಏನು ಮಾಡ್ತಿದೆ? ಇದೆಲ್ಲ ಕಾಂಗ್ರೆಸ್ ಹಿಡಿತದಲ್ಲಿದೆ ಎಂದು ಆರೋಪ ಮಾಡಿದರು.

ಪ್ರಧಾನಿ ಮೋದಿ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತಾಡ್ತಾರೆ. ಅವರಿಗೆ ಮಾತಿನ ಮೇಲೆ ನಿಗಾ ಇರಬೇಕು. ನಾನು ಈ ಇಳಿವಯಸ್ಸಿನಲ್ಲೂ ಇಲ್ಲಿಗೆ ಪ್ರಚಾರಕ್ಕೆ ಬಂದಿರೋದು ನಮ್ಮ ಅಭ್ಯರ್ಥಿಯ ಪರವಾಗಿ. ನಾನು ಮುಸ್ಲಿಂ ಸಮಾಜಕ್ಕೆ ಶೇಕಡಾ ನಾಲ್ಕು ಮೀಸಲಾತಿ ನೀಡಿದೆ. ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿದೆ. ವಾಲ್ಮೀಕಿ ಸಮುದಾಯಕ್ಕೆ ಜೊತೆಯಾಗಿ ನಿಂತೆ. ಮಹಿಳೆಯರಿಗೆ ನೀಡಿರೋ ಮೀಸಲಾತಿಯಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 73 ಮಹಿಳೆಯರು ವಿಧಾನಸಭೆಗೆ ಹೋಗಲಿದ್ದಾರೆ. ದೇಶದ ಅಭಿವೃದ್ಧಿಯ ಸಂಕಲ್ಪ ಮೋದಿ ಮಾಡಿದ್ದಾರೆ. ಅವರಿಗೆ ಸಹಕಾರಿಯಾಗಿ ನಾವೆಲ್ಲಾ ನಿಲ್ಲಬೇಕಿದೆ. ಹಾಗಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಅರಮನೆ ಮೈದಾನ, ಚಿಕ್ಕಬಳ್ಳಾಪುರದಲ್ಲಿ ಇಂದು ಮೋದಿ ಕಾರ್ಯಕ್ರಮ: ಮಹಿಳೆಯರಿಗೆ ವಿಶೇಷ ಆಸನ ವ್ಯವಸ್ಥೆ - PM Modi Campaign

ETV Bharat Logo

Copyright © 2025 Ushodaya Enterprises Pvt. Ltd., All Rights Reserved.