ಬಳ್ಳಾರಿ: ಇಂದು ಬಿಜೆಪಿಯಿಂದ ಶ್ರೀರಾಮುಲು ಹಾಗೂ ಕಾಂಗ್ರೆಸ್ನಿಂದ ಇ.ತುಕಾರಾಂ ಬಳ್ಳಾರಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರಗಳ ಅಫಿಡವಿಟ್ ನೀಡಿದ್ದಾರೆ.
ಇ.ತುಕಾರಾಂ ಆಸ್ತಿ: ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಸೇರಿ 1,54,11,137 ರೂ ಇದೆ. ಪತ್ನಿ ಅನ್ನಪೂರ್ಣ ಅವರ ಹೆಸರಲ್ಲಿ 36,85,837 ರೂ. ಇದೆ. ಮಗಳು ವಂದನಾ ಹೆಸರಲ್ಲಿ 7,21,931 ರೂ., ಮತ್ತೋರ್ವ ಮಗಳು ಚೈತನ್ಯಾ ಹೆಸರಲ್ಲಿ 3,54,790 ರೂ., ಪುತ್ರ ರಘುನಂದನ್ ಹೆಸರಲ್ಲಿ 22,05,174 ರೂ. ಹಾಗೂ 8.21 ಎಕರೆ ಕೃಷಿ ಭೂಮಿ ಇದೆ. ರಘುನಂದನ್ ಹೊರತುಪಡಿಸಿ ಕುಟುಂಬದ ಯಾರ ಹೆಸರಲ್ಲಿಯೂ ಕೃಷಿ ಭೂಮಿ ಇಲ್ಲ.
ತುಕಾರಾಂ ಅವರ ಸ್ಥಿರಾಸ್ತಿ ಮೌಲ್ಯ 47,66,960 ರೂ., ಪತ್ನಿ ಹೆಸರಲ್ಲಿರುವ ಸ್ಥಿರಾಸ್ತಿ ಮೌಲ್ಯ 63,21,380 ರೂ ಆಗಿದೆ. ಮಗ ರಘುನಂದನ್ ಹೆಸರಲ್ಲಿ ಸ್ಥಿರಾಸ್ತಿ 18,00,000 ರೂ. ಇದೆ. ಇ.ತುಕಾರಾಂ ಸ್ನೇಹಿತರು ಹಾಗು ಬಂಧುಗಳಿಂದ ಪಡೆದ ಸಾಲ 30,00,000 ರೂ., ಪತ್ನಿ ತುಕಾರಾಂ ಹಾಗು ತಾಯಿಯಿಂದ ಪಡೆದ ಸಾಲ 93,25,000 ರೂ. ಇದೆ.
ಬಿ.ಶ್ರೀರಾಮುಲು ಆಸ್ತಿ: ಚರಾಸ್ತಿ ಮೌಲ್ಯ 34,039,839 ರೂ., ಸ್ತಿರಾಸ್ತಿ 61,53,86,290 ರೂ.ಸೇರಿದಂತೆ ಒಟ್ಟು ಆಸ್ತಿ ಮೌಲ್ಯ 64,94,26,129 ರೂ ಇದೆ. ಸಾಲ 7,62,88,428 ಇದೆ.
ಶ್ರೀರಾಮುಲು ಒಟ್ಟು ಆಸ್ತಿ ಮೌಲ್ಯ 45,88,02,320 ರೂ. ಇದರಲ್ಲಿ 6,22,57,520 ರೂ ಮೌಲ್ಯದ ಚರಾಸ್ತಿ ಇದೆ. 39,65,44,800 ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಸಾಲ 6,69,63,428 ರೂ. ಇದೆ. ಆದಾಯ ತೆರಿಗೆ ಬಾಕಿ 28,01,403 ರೂ. ವಿವಾದಿತ ಸರ್ಕಾರಿ ಬಾಕಿ 1,40,93,370 ರೂ ಇದೆ. ಪತ್ನಿ ಭಾಗ್ಯಲಕ್ಷ್ಮಿ ಒಟ್ಟು ಆಸ್ತಿ ಮೌಲ್ಯ 22,57,14,086 ರೂ ಇದೆ. ಚರಾಸ್ತಿ 2,28,14,089 ರೂ ಮೌಲ್ಯ. ಸ್ಥಿರಾಸ್ತಿ 20,29,00,000 ರೂ. ಸಾಲ 93,25,000 ರೂ ಇದೆ.
1,59,41,490 ರೂ. (3,68,82,980) ಮೌಲ್ಯದ ಸ್ಥಿರಾಸ್ತಿ. 50,00,000 ರೂ. ಮೌಲ್ಯದ ಚರಾಸ್ತಿ. ಮಗಳ ಹೆಸರಿನಲ್ಲಿ 31,96,763 ರೂ. ಮೌಲ್ಯದ ಸ್ಥಿರಾಸ್ತಿ ಇದೆ.
ಇದನ್ನೂ ಓದಿ : ಬಳ್ಳಾರಿ: ಕಾಂಗ್ರೆಸ್ನಿಂದ ಇ.ತುಕಾರಾಂ, ಬಿಜೆಪಿಯಿಂದ ಶ್ರೀರಾಮುಲು ನಾಮಪತ್ರ ಸಲ್ಲಿಕೆ - Sriramulu Nomination