ETV Bharat / state

ಮಂಜುನಾಥ್ ಅವರಂಥವರ ಸ್ಪರ್ಧೆ ದೇಶಕ್ಕೆ ಮಾದರಿ; ಅಶ್ವತ್ಥ ನಾರಾಯಣ - Bengaluru Rural Constituency - BENGALURU RURAL CONSTITUENCY

ಮಲ್ಲೇಶ್ವರದಲ್ಲಿರುವ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಅವರು, ತಾವು ಈ ಕ್ಷೇತ್ರದಿಂದಲೇ ಏಕೆ ಸ್ಪರ್ಧೆ ಮಾಡಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಮಂಜುನಾಥ್ ಅವರಂತ ಸ್ಪರ್ಧೆ ದೇಶಕ್ಕೆ ಮಾದರಿ; ಅಶ್ವತ್ಥನಾರಾಯಣ

author img

By ETV Bharat Karnataka Team

Published : Apr 9, 2024, 8:16 PM IST

ಬೆಂಗಳೂರು: ಡಾ. ಸಿಎನ್ ಮಂಜುನಾಥ್ ಅವರ ಅಭ್ಯರ್ಥಿತನವನ್ನು ಡಿಕೆ ಬ್ರದರ್ಸ್ ಅಥವಾ ನಾವು ನಿರೀಕ್ಷೆ ಮಾಡಿರಲಿಲ್ಲ. ಎಲ್ಲ ಕಾಲ ಕೂಡಿ ಬಂದಿದೆ. ಪ್ರಕೃತಿಯೇ ಅವರ ಅಭ್ಯರ್ಥಿತನವನ್ನು ಬಯಸಿದೆ. ಮೋದಿ ಟೀಂನಲ್ಲಿ ಜನಾಧರಿತ ಆಡಳಿತ ನೀಡಲು ಮಂಜುನಾಥ ಅವರಂಥ ಜನಪ್ರಿಯ ವ್ಯಕ್ತಿ ಬೇಕಿದೆ. ಗ್ರಾಮಾಂತರದ ಉಸಿರು ಕಟ್ಟಿಸುವ ವಾತಾವರಣದಿಂದ ಹೊರಬರಲು ಡಾ. ಮಂಜುನಾಥ್ ಅವರಂಥ ಅಭ್ಯರ್ಥಿ ಬೇಕು ಎಂದು ಮಾಜಿ ಡಿಸಿಎಂ ಡಾ. ಸಿಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಚುನಾವಣೆಯಲ್ಲಿ ಧರ್ಮ ಅಧರ್ಮದ ಯುದ್ಧ ನಡೆಯುತ್ತಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಮಾಡಲು ಜನರು ಎದುರು ನೋಡುತ್ತಿದ್ದಾರೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರ ಗೆದ್ದು ಮೋದಿ ಕೈ ಬಲಪಡಿಸಬೇಕು. ಕರ್ನಾಟಕ ಪೊಲಿಟಿಕಲ್ ಲೀಡರ್ ಶಿಪ್​​ನಲ್ಲಿ ಅಗ್ರಗಣ್ಯವಾಗಿರಬೇಕು. ಕಳೆದ ಬಾರಿ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರ ಗೆದ್ದಿತ್ತು. ಗ್ರಾಮಾಂತರದಲ್ಲಿ ಪ್ರತಿಷ್ಠೆ ತೋರಿಸುವ ಅವಶ್ಯಕತೆ ಬೇಕಿಲ್ಲ. ಡಾ ಮಂಜುನಾಥ್ ಬರ್ತಾರೆ ಎಂದು ಡಿಕೆ ಬ್ರದರ್ಸ್ ಆಗಲಿ, ನಾವು ಯಾರೇ ಆಗಲಿ ಅಂದುಕೊಂಡಿರಲಿಲ್ಲ. ಎಲ್ಲವೂ ಕಾಲದ ನಿರ್ಧಾರವಾಗಿದೆ. ಮಂಜುನಾಥ್ ಅವರಂತ ಸ್ಪರ್ಧೆ ದೇಶಕ್ಕೆ ಮಾದರಿಯಾಗುತ್ತಿದೆ.

ನನಗೆ ಆಗಲಿ, ಮುನಿರತ್ನಗಾಗಲಿ ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡಿಲ್ಲ. ಆದರೆ, ಮಂಜುನಾಥ್ ಅವರನ್ನು ಒತ್ತಾಯ ಮಾಡಿ ರಾಜಕೀಯಕ್ಕೆ ಕರೆತರಲಾಗಿದೆ. ಗ್ರಾಮಾಂತರದಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಕಾಂಗ್ರೆಸ್​ನವರು ನಮ್ಮ ನೀರು ನಮ್ಮ ಹಕ್ಕು ಅಂತಾ ಮಾಡಿದರು. ಆದರೆ, ಅದು ಎಲ್ಲಿಗೆ ಹೋಯ್ತು ಅಂತಾನೇ ಗೊತ್ತಿಲ್ಲ. ಬೆಂಗಳೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲು ಕಾರಣ ಕಾಂಗ್ರೆಸ್. ಪ್ರತಿಪಕ್ಷಕ್ಕೂ ಅರ್ಹವಲ್ಲ ಈ ಪಕ್ಷಕ್ಕೆ ಮತ ಹಾಕೋದೇ ವೇಸ್ಟೂ. ಬೇಕಾದರೆ ಯುಪಿಎ ಹಾಗೂ ಎನ್​​​​​ಡಿಎ ಸರ್ಕಾರದ ಅಧಿಕಾರವದಿ ಹೋಲಿಕೆ ಮಾಡಲಿ. ಇದು ಶಿವಕುಮಾರ್ ಚುನಾವಣೆ ಅಲ್ಲ, ಸಿದ್ದರಾಮಯ್ಯ ಚುನಾವಣೆ ಅಲ್ಲ, ಇದು ಪ್ರಧಾನಿ ನರೇಂದ್ರ ಮೋದಿಯ ಚುನಾವಣೆ ಗ್ಯಾರಂಟಿ. ಸುಳ್ಳಿನ ಮೂಲಕ ಸುರೇಶ್ ಜನರ ಮುಂದೆ ಹೋಗುತ್ತಿದ್ದಾರೆ. ಕನಕಪುರ ಕ್ಷೇತ್ರವೇ ರಾಜ್ಯದಲ್ಲಿ ಹಿಂದುಳಿದ ಕ್ಷೇತ್ರವಾಗಿದೆ. ಅಭಿವೃದ್ಧಿ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ರಾಮಮಂದಿರ ನಿರ್ಮಾಣ ಕೂಡ ಕೈ ಬಿಟ್ಟಿದ್ದೀರಿ, ರಾಮನಗರದ ಮೆಡಿಕಲ್ ಕಾಲೇಜು ತಗೊಂಡು ಹೋಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಗ್ರಾಮಾಂತರದಲ್ಲಿ ಶಾಂತಿ ಕಾಪಾಡೋದು ಬಹಳ ಮುಖ್ಯ. ಭಯದ ವಾತಾವರಣ ಇರಬಾರದು. ಶಾಂತಿಯುತ ಮತದಾನ ನಡೆಯಬೇಕು. ಹಾಗಾಗಿ, ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜಿಸಬೇಕು. ಡಿಕೆ ಸುರೇಶ್ ಗೆಲ್ಲೋಕೆ ಪಾಪ ಏನೇನೋ ಸುಳ್ಳು ಹೇಳುತ್ತಿದ್ದಾರೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗ್ತಾರೆ ಎಂದು ಸಂಸದ ಸುರೇಶ್​ಗೂ ಗೊತ್ತು. ಅದಕ್ಕಾಗಿ ಎಲ್ಲ ಕಡೆಯೂ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಡಿಕೆ ಸಹೋದರ ವಿರುದ್ಧ ಅಶ್ವತ್ಥ ನಾರಾಯಣ್ ಗಂಭೀರ ಆರೋಪ ಮಾಡಿದರು.

ಗನ್ ಇಟ್ಕೊಂಡ ವ್ಯಕ್ತಿಯಿಂದ ಸಿಎಂಗೆ ಹಾರ ಹಾಕಿದ ಪ್ರಕರಣದಲ್ಲಿ ಭದ್ರತಾ ವೈಫಲ್ಯ ಆಗಿಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅಶ್ವತ್ಥ ನಾರಾಯಣ, ಒಬ್ಬ ಸಿಎಂ ಮುಂದೆ ಗನ್ ಇಟ್ಕೊಂಡು ಹೋಗಿದಾನೆ. ವ್ಯವಸ್ಥೆ ಯಾವ ಥರ ಇದೆ ನೋಡಿ, ಭದ್ರತಾ ವೈಫಲ್ಯ ಆಗಿದೆ, ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು.

ನಾನು ರಾಜಕೀಯಕ್ಕೆ ಬಂದಿದ್ದೇ ಆಕಸ್ಮಿಕ: ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಕಾರಣ ಬಹಿರಂಗಪಡಿಸಿದ ಡಾ. ಸಿಎನ್ ಮಂಜುನಾಥ್, ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ‌, ಯಾವ ಕ್ಷೇತ್ರ ಕೊಡಬೇಕು ಅಂತ ಹೈಕಮಾಂಡ್ ‌ನಾಯಕರು ತೀರ್ಮಾನ ಮಾಡಿದ್ದಾರೆ. ಉಭಯ ಪಕ್ಷದ ನಾಯಕರು ‌ಚರ್ಚಿಸಿ ನಿರ್ಧಾರ ಮಾಡಿದ್ದಾರೆ. ನನಗೆ ರಾಜಕೀಯಕ್ಕೆ ಬರುವ ಇಚ್ಛೆ ಇರಲಿಲ್ಲ. ನಾನಾಗಿಯೇ ನಾನು ರಾಜಕೀಯಕ್ಕೆ ಬಂದಿದ್ದಿದ್ರೆ ನಾನು ಯಾವ ಕ್ಷೇತ್ರ ಬೇಕು ಅಂತ ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ, ಗ್ರಾಮಾಂತರ ಕ್ಷೇತ್ರ ಹೈಕಮಾಂಡ್ ಆಯ್ಕೆ ಆಗಿದೆ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲಿ ಪ್ರತಿ ವರ್ಷ 30 ಲಕ್ಷ ಹೃದಯಾಘಾತ ಆಗುತ್ತಿದೆ. ಸ್ಟಂಟ್ ಬೆಲೆ 1 ಲಕ್ಷ ಇತ್ತು. ಮೋದಿಯವರು ಸ್ಟಂಟ್ ಬೆಲೆಯನ್ನು 30 ಸಾವಿರಕ್ಕೆ ಇಳಿಸಿದರು. ಇದು ಕೇವಲ ಶ್ರೀಮಂತರ ಕಾಯಿಲೆ ಅಲ್ಲ‌, ಬಡವರ ಕಾಯಿಲೆ ಅಂತ ಕೆಳಗೆ ಇಳಿಸಿದರು. ಜನೌಷಧಿ ತೆರೆದರು. ಕೋವಿಡ್ ಸಮಯದಲ್ಲಿ ಆಕ್ಸಿಜನ್ ಪ್ಲಾಂಟ್ ತೆರೆದರು. ದೇಶದಲ್ಲಿ 1 ಲಕ್ಷಕ್ಕೂ ಅಧಿಕ ಐಸಿಯು ಬೆಡ್ ಇದೆ. ಮೋದಿ ಅವರ ಕಾಲದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಸಂಪೂರ್ಣ ಬದಲಾಗಿದೆ. ಆಯುಷ್ಮಾನ್ ಭಾರತ್ ಸ್ಕೀಮ್​​ ತಂದರು. ಮೆಡಿಕಲ್ ಕಾಲೇಜು ಗಣನೀಯ ಏರಿಕೆಯಾಗಿದೆ. 300 ಇದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆ 780 ಆಗಿದೆ. ನ್ಯಾಷನಲ್ ಹೆಲ್ತ್ ಮಿಷಿನ್ ಇದೆ. ಹೃದಯಾಘಾತ ಆದ 3 ಗಂಟೆ ಒಳಗೆ ಟ್ರೀಟ್ ಮಾಡಲು 45 ತಾಲೂಕಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಅವರ ಆಡಳಿತಾವಧಿಯನ್ನು ಶ್ಲಾಘಿಸಿದರು.

ಶಾಸಕ ಮುನಿರತ್ನ ಮಾತನಾಡಿ, ಸ್ಯಾಲರಿ ಸ್ಲಿಪ್ ಇಟ್ಟುಕೊಂಡು ಜೀವನ ಮಾಡಿದ ಏಕೈಕ ವ್ಯಕ್ತಿ ಡಾ ಮಂಜುನಾಥ್. ರಾಜಕೀಯಕ್ಕೆ ಬರುವ ಬಗ್ಗೆ ಯಾವತ್ತೂ ಯೋಚನೆ ಮಾಡಿದವರಲ್ಲ. ಅಂತಹ ವ್ಯಕ್ತಿ ಗ್ರಾಮಾಂತರದಿಂದ ಸ್ಪರ್ಧೆ ಮಾಡಿದ್ದಾರೆ. ಯಾವುದೋ ದುಡ್ಡು ಎಲ್ಲಿಂದನೋ ಬರ್ತಿದೆ, ಡಿಕೆ ನೋಟು, ಡಾಕ್ಟರ್​ಗೆ ವೋಟು ಎಂದು ಜನರು ಹೇಳ್ತಿದ್ದಾರೆ. ಹರಿದು ಬರ್ತಿರುವ ದುಡ್ಡನ್ನು ಎಡಗೈಯಲ್ಲಿ ತಗೊಂಡು, ಬಲಗೈಯಲ್ಲಿ ಡಾಕ್ಟರ್​ಗೆ ಮತ ಹಾಕ್ತೀವಿ ಎಂದು ಹೇಳ್ತಿದ್ದಾರೆ. ಈ ಬಾರಿ ಅತಿ ಹೆಚ್ಚು ಅಂತರದಿಂದ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮೋದಿಗೆ ಉಡುಗೊರೆ ನೀಡುತ್ತೇವೆ: ಬಿ.ಎಸ್.ಯಡಿಯೂರಪ್ಪ - B S Yediyurappa

ETV Bharat Logo

Copyright © 2025 Ushodaya Enterprises Pvt. Ltd., All Rights Reserved.