ಹಾವೇರಿ: ಶಿಗ್ಗಾಂವ್ ವಿಧಾನಸಭಾ ಉಪಚುನಾವಣಾ ಅಖಾಡವನ್ನು ಇಂದು ಸಿಎಂ ಸಿದ್ದರಾಮಯ್ಯ ಪ್ರವೇಶಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ ಪರ ಕ್ಷೇತ್ರದಾದ್ಯಂತ ಸಂಚರಿಸಿ ಅವರು ಮತಬೇಟೆ ನಡೆಸಲಿದ್ದಾರೆ. ಮತ ಪ್ರಚಾರದ ವೇಳೆ ಸಿಎಂ ಜೊತೆಗೆ ಸಚಿವರು, ಶಾಸಕರು ಇರಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಹುಲಗೂರು ಜಿ. ಪಂ. ವ್ಯಾಪ್ತಿಯ ಹುಲಗೂರು, ಶಿಶುನಾಳ, ಅತ್ತಿಗೇರಿ, ಬಸನಾಳ ಗ್ರಾಮ, ಮಧ್ಯಾಹ್ನ 3ಕ್ಕೆ ಹುರಳಿಕೊಪ್ಪಿ ಜಿ.ಪಂ.ವ್ಯಾಪ್ತಿಯ ಹುರಳಿಕೊಪ್ಪಿ, ಕುರುಬರ ಮಲ್ಲೂರು, ತೊಂಡುರ, ತೆಗ್ಗಿಹಳ್ಳಿ, ಸಂಜೆ 6ಕ್ಕೆ ಬಂಕಾಪುರ ಜಿ.ಪಂ.ವ್ಯಾಪ್ತಿಯ ಕುಂದೂರು ಗುಡ್ಡಚನ್ನಪುರ, ನಾರಾಯಣಪುರ, ಬಾಡಾ, ಬಂಕಾಪುರ ನಗರದಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ.
ವಕ್ಫ್ ವಿವಾದ- ಬಿಜೆಪಿ ಪ್ರತಿಭಟನೆ: ಇನ್ನೊಂದೆಡೆ, ಬಿಜೆಪಿ ನಾಯಕರು ವಕ್ಫ್ ವಿಚಾರವಾಗಿ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಶಿಗ್ಗಾಂವ್ ಪಟ್ಟಣದ ವೀರ ರಾಣಿ ಕಿತ್ತೂರು ಚೆನ್ನಮ್ಮ ಸರ್ಕಲ್‌ನಿಂದ ರ‍್ಯಾಲಿ ಆರಂಭವಾಗಲಿದ್ದು, ಭರಮಲಿಂಗೇಶ್ವರ ಸರ್ಕಲ್‌ನಿಂದ ಮಾರ್ಕೆಟ್ ರಸ್ತೆ-ತಹಶೀಲ್ದಾರ ಕಾರ್ಯಾಲಯದವರೆಗೆ ಸಾಗಲಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ಪ್ರತಾಪ್ ಸಿಂಹ, ಅರವಿಂದ ಬೆಲ್ಲದ, ಗೋವಿಂದ ಕಾರಜೋಳ, ಶ್ರೀರಾಮುಲು, ಸಿ.ಟಿ.ರವಿ, ಬೈರತಿ ಬಸವರಾಜ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವಿರೋಧಿ ಅಲೆ ಇದ್ದು, ನಾವೇ ಗೆಲ್ಲುತ್ತೇವೆ: ಲಕ್ಷ್ಮಣ ಸವದಿ