ETV Bharat / state

ಮಾಣಿಪ್ಪಾಡಿ ಮಾತನಾಡಿರುವುದು ವಿಡಿಯೋ ರೆಕಾರ್ಡ್​​ನಲ್ಲಿ ಇದೆ: ಸಿದ್ದರಾಮಯ್ಯ - CM SIDDARAMAIAH

ಮಾಣಿಪ್ಪಾಡಿ ಅವರೇ ತಮಗೆ ವಿಜಯೇಂದ್ರ 150 ಕೋಟಿ ಆಫರ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಈಗ ಅವರೇ ಇಲ್ಲ ಅಂತ ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

siddaramaiah
ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : 2 hours ago

ಬೆಳಗಾವಿ: ''ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ನಮ್ಮ ಸರ್ಕಾರ ಸಿದ್ಧವಿದೆ. ಅಲ್ಲದೇ ವಕ್ಫ್ ಚರ್ಚೆಗೂ ಉತ್ತರ ನೀಡಲು ನಾವು ಸಿದ್ಧರಿದ್ದೇವೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಸೋಮವಾರ, ಮಂಗಳವಾರ, ಬುಧವಾರ ಉತ್ತರ ಕರ್ನಾಟಕ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಪ್ರತಿಪಕ್ಷದವರು ಯಾವ ವಿಷಯದ ಬಗ್ಗೆ ಧ್ವನಿ ಎತ್ತುತ್ತಾರೋ, ಅದಕ್ಕೆ ಸರ್ಕಾರ ಉತ್ತರ ನೀಡಲಿದೆ'' ಎಂದು ತಿಳಿಸಿದರು.

ವಿಡಿಯೋ ರೆಕಾರ್ಡ್ ಇದೆ: ವಿಜಯೇಂದ್ರ ವಿರುದ್ಧ ಅನ್ವರ್​​ ಮಾಣಿಪ್ಪಾಡಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ''ಮಾಣಿಪ್ಪಾಡಿಯೇ ಸ್ವತಃ ಹೇಳಿಕೆ ‌ನೀಡಿದ್ದಾರಲ್ಲ. ಅದು ಯಾವುದು ಸರಿ, ಯಾವುದು ತಪ್ಪು ಗೊತ್ತಾಗಬೇಕಲ್ಲವೇ? ಅದರ ಮೇಲೆಯೇ ನಾವು ಪ್ರತಿಕ್ರಿಯೆ ಕೊಟ್ಟಿದ್ದೇವೆ. ನಾವು ಪ್ರತಿಕ್ರಿಯಿಸಿದ್ದು ಸರಿ ಇದೆ. ತಮಗೆ 150 ಕೋಟಿ ಆಫರ್ ಮಾಡಿದ್ದಾರೆ ಅಂತ ಅವರೇ ಹೇಳಿದ್ದಾರೆ. ಅವರೇ ಪ್ರೆಸ್​ಮೀಟ್ ಮಾಡಿ ಮಾತನಾಡಿರುವುದು ವಿಡಿಯೋ ರೆಕಾರ್ಡ್​​ನಲ್ಲಿ ಇದೆ. ಆಗ ಹೇಳಿದ್ದಾರೆ ಅಂತ ಹೇಳಿ, ಈಗ ಬಹಳ ವರ್ಷಗಳ ಬಳಿಕ ಅವರೇ ಇಲ್ಲ ಅಂತ ಹೇಳುತ್ತಿದ್ದಾರೆ. ಏನು ಮಾಡಬೇಕು ನೀವೇ ಹೇಳಿ'' ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ (ETV Bharat)

ಪಂಚಮಸಾಲಿ ಸಮಾಜದ ಕ್ಷಮೆ ಕೇಳಬೇಕು ಎಂಬ ಒತ್ತಾಯ ವಿಚಾರಕ್ಕೆ, ''ಪ್ರಲ್ಹಾದ್ ಜೋಶಿಯವರು ಯಾಕೆ ಪಂಚಮಸಾಲಿ ಮೀಸಲಾತಿ ಸಮಸ್ಯೆ ಇತ್ಯರ್ಥ ಮಾಡಲಿಲ್ಲ. ಯಾರು ಇತ್ಯರ್ಥ ಮಾಡಲಿಲ್ಲವೋ ಅವರು ಕ್ಷಮೆ ಕೇಳಬೇಕು'' ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.

ಮಾಣಿಪ್ಪಾಡಿ ಪ್ರಕರಣ ಸಿಬಿಐಗೆ ವಹಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ''ನೋಡೋಣ, ಆ ಪ್ರಸ್ತಾವನೆಯನ್ನು ಚರ್ಚಿಸಿ ತೀರ್ಮಾನಿಸುತ್ತೇವೆ'' ಎಂದು ಸ್ಪಷ್ಟಪಡಿಸಿದರು.

ಉತ್ತರ ಕರ್ನಾಟಕದ‌ ಬಗ್ಗೆ ವಿಶೇಷ ಒತ್ತು: ಇದಕ್ಕೂ ಮುನ್ನ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್, ''ಇಂದಿನಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಉತ್ತರ ಕರ್ನಾಟಕದ‌ ಬಗ್ಗೆ ವಿಶೇಷ ಒತ್ತು ಕೊಡಲಾಗುವುದು. ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡಲಿದ್ದೇವೆ. ಅತ್ಯಂತ ಪರಿಣಾಮಕಾರಿಯಾಗಿಯಾಗಿ ಉತ್ತರ ಕರ್ನಾಟಕ‌ ಭಾಗದ ಬಗ್ಗೆ ಚರ್ಚೆ ಆಗಲಿದೆ'' ಎಂದು ಹೇಳಿದರು.

''ಈಗಾಗಲೇ ಸಾಹಿತ್ಯ ಸಮ್ಮೇಳನ‌ ಹಿನ್ನೆಲೆ‌‌ಯಲ್ಲಿ ಮೊದಲೇ ಅಧಿವೇಶನ‌ ನಿಗದಿಪಡಿಸಲಾಗಿತ್ತು. ಹಾಗಾಗಿ ಈ ಬಾರಿ ಡಿ.19 ರಂದು ಅಧಿವೇಶನ ಮುಕ್ತಾಯಗೊಳಿಸಲಾಗುತ್ತಿದೆ. ನಾವು ಯಾವುದೇ ಪಲಾಯನ‌ ಮಾಡುವ ಪ್ರಶ್ನೆಯೇ ಇಲ್ಲ. ಅಧಿವೇಶನದಲ್ಲಿ ಈ ಬಗ್ಗೆ ವಿಪಕ್ಷಗಳು ಚರ್ಚೆಯೂ ಮಾಡಿಲ್ಲ. ಅದು ಹೇಗೆ ನಾವು ಪಲಾಯನವಾದ ಮಾಡುತ್ತೇವೆ ಅಂತಾ ಆರೋಪ ಮಾಡುತ್ತಾರೆ?'' ಎಂದು ವಿಪಕ್ಷ ನಾಯಕ‌ ಆರ್.ಅಶೋಕ್ ಆರೋಪಕ್ಕೆ ಸಚಿವರು ತಿರುಗೇಟು ನೀಡಿದರು.

ಇದನ್ನೂ ಓದಿ: ವಿಜಯೇಂದ್ರ ನನಗೆ ₹150 ಕೋಟಿ ಆಫರ್ ಮಾಡಿರಲಿಲ್ಲ: ಅನ್ವರ್ ಮಾಣಿಪ್ಪಾಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.